ರೈಲು ಅಪಘಾತ ತಡೆಯಲು ಇಲಾಖೆಯಿಂದ ವಿಶೇಷ ವ್ಯವಸ್ಥೆ…!

ಬೆಂಗಳೂರು:

    ಭಾರತೀಯ ರೈಲ್ವೆ ಇಲಾಖೆ ಬಹುತೇಕ ಡಿಜಟಲೀಕರಣಗೊಂಡಿದೆ ಹಾಗೂ ರೈಲುಗಳ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೆ ಇಲಾಖೆಯು ʼಕವಚ್ʼ​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಹೈಸ್ಪೀಡ್​ ರೈಲುಗಳು ಹಳಿ ತಪ್ಪಿ ಅಥವಾ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆಯುವ ಅಪಾಯವನ್ನು ಕಡಿಮೆ ಮಾಡುತ್ತದೆ.

    ಆದರೆ ಈ ಸುಧಾರಿತ ತಂತ್ರಜ್ಞಾನಗಳು ಸಮರ್ಥವಾಗಿ ಕಾರ್ಯನಿರ್ವಹಸಬೇಕು ಎಂದರೆ ವಿಶ್ವಾಸಾರ್ಹ ನೆಟ್​ವರ್ಕ್​ಗಳ ಅಗತ್ಯವಿರುತ್ತದೆ. ಭಾರತೀಯ ರೈಲ್ವೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ಸಿಗ್ನಲಿಂಗ್​ ಪರಿಣಾಮಗಳನ್ನು ಕಡಿಮೆ ಮಾಡಲು ಹಾಗೂ ಎಲ್ಲಾ ರೀತಿಯಲ್ಲಿ ರೈಲುಗಳನ್ನು ರಕ್ಷಿಸಲು ನೆಟ್​​ವರ್ಕ್ ಆಪ್ಟಿಮೈಸ್​ ಮಾಡಿದೆ.

    ವಂದೇ ಭಾರತ್​ ರೈಲುಗಳು ಸೇರಿದಂತೆ ದೇಶದ ಪ್ರಮುಖ ರೈಲ್ವೆ ಜಾಲಗಳಿಗೆ ಹಂತ ಹಂತವಾಗಿ ನೀಡಲಾಗುತ್ತಿರುವ ಕವಚ್​ ವ್ಯವಸ್ಥೆಯ ಬಗ್ಗೆ ನಿಖರವಾದ ಮಾಹಿತಿ ತಿಳಿದುಕೊಳ್ಳಲು ನೀವು ಈ ಕೆಳಗಿನ ವಿಡಿಯೋವನ್ನು ನೋಡಬಹುದಾಗಿದೆ.

     ಕವಚ್​ ವ್ಯವಸ್ಥೆಯು ಸುರಕ್ಷಿತವಾಗಿ ರೈಲುಗಳು ಅತೀ ಹೆಚ್ಚಿನ ವೇಗದಲ್ಲಿ ಓಡಲು ಸಹಕಾರಿಯಾಗಿದೆ.. ಇದನ್ನು ದೇಶದ ಹೊಸ ಮತ್ತು ಹಳೆಯ ಜೆನ್​ ರೈಲುಗಳೊಂದಿಗೆ ಸಂಯೋಜನೆ ಕೂಡ ಮಾಡಬಹುದಾಗಿದೆ. ಇದರಿಂದ ಕವಚ್​ ವ್ಯವಸ್ಥೆಯನ್ನು ಅಳವಡಿಸಲು ಹಳೆಯ ರೈಲುಗಳನ್ನು ರೂಪಾಂತರಗೊಳಿಸಬೇಕಾ ಅನಿವಾರ್ಯತೆ ರೈಲ್ವೆ ಇಲಾಖೆಗೆ ಬರೋದಿಲ್ಲ. ಇದರಿಂದ ರೈಲ್ವೆ ಇಲಾಖೆ ಸಾಕಷ್ಟು ಹಣವನ್ನು ಉಳಿಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link