ಕನ್ನಡ ಅನ್ನದ ಭಾಷೆಯಾಗಬೇಕು: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಅಗತ್ಯ

ಬೆಂಗಳೂರು

     ಕಾಸ್ಮೋಪಾಲಿಟಿನ್ ನಗರ ಸಂಸ್ಕೃತಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಜೊತೆಗೆ ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು ಮುಂದಾಗಬೇಕಿದೆ. ಇದು ಇಂದಿನ ತುರ್ತು ಅಗತ್ಯವೂ ಆಗಿದೆ. ಮಹಿಷಿ ವರದಿಯಂತೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಲು ಇದು ಸಕಾಲ.

     ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿರುವ ಈ ಸುಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗದ ಭರವಸೆ ನೀಡಲು ಸರ್ಕಾರ ಕಾರ್ಯೋನ್ಮುಖವಾಗಬೇಕು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಆಲೋಚಿಸಬೇಕು.

      ಆಂಧ್ರಪ್ರದೇಶ ಮತ್ತು ಹರ್ಯಾಣದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ 75%ರಷ್ಟು ಉದ್ಯೋಗ ಕಲ್ಪಿಸುವ ಕಾಯ್ದೆ ಜಾರಿ ಮಾಡಲಾಗಿದೆ. ಉದ್ಯೋಗದಲ್ಲಿ 80%ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡಲು ಮಹಾರಾಷ್ಟç ಮುಂದಾಗಿದೆ. ಆದರೆ ಇಲ್ಲಿ ಮಹಿಷಿ ವರದಿಯನ್ನು ಸರ್ಕಾರಕ್ಕೆ ನೀಡಿ 38 ವರ್ಷ ತುಂಬಿದೆ. ಪರಿಷ್ಕೃತ ಮಹಿಷಿ ವರದಿಗೆ 7 ವರ್ಷಗಳಾದರೂ (2017) ಜಾರಿ ಸಾಧ್ಯವಾಗಿಲ್ಲ. ಪರಿಷ್ಕೃತ ಮಹಿಷಿ ವರದಿ ಕುರಿತು ಬರುವ ವಿಧಾನಮಂಡಲ ಅಧಿವೇಶದಲ್ಲಿ ಪ್ರಸ್ತಾಪಿಸಿ ಅನುಷ್ಟಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವುದು ಅಗತ್ಯ ಹೆಚ್ಚಾಗಿದೆ.

    ರಾಜ್ಯದಲ್ಲಿ ಕೇಂದ್ರ ಸ್ವಾಮ್ಯದ ಮತ್ತು ಖಾಸಗೀ ವಲಯಗಳಲ್ಲಿ ನಿರಂತರವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಇಂದಿನ ಕಾಲ ಮಾನಕ್ಕೆ ಹೊಂದುವ ರೀತಿಯಲ್ಲಿ ಐ.ಟಿ/ಬಿ.ಟಿ ಸೇರಿದಂತೆ ಎಲ್ಲ ಹೊಸ ಕ್ಷೇತ್ರಗಳನ್ನು ಪರಿಗಣಿಸಿ ?ಪರಿಷ್ಕತ ಮಹಿಷಿ ವರದಿ ಸಿದ್ಧವಾಗಿದೆ. ಆದರೆ ಕನ್ನಡಿಗರಿಗೆ ಸೂಕ್ತ ಉದ್ಯೋಗದ ಪಾಲು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಇಂತಹ ಕನ್ನಡ ನಾಡಿನಲ್ಲಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಅತ್ಯಂತ ಜರೂರಾಗಿದೆ.

    ಬೆಂಗಳೂರು ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಕರ್ನಾಟಕ ಕೈಗಾರಿಕಾ ವಲಯದಲ್ಲಿ ಮಹತ್ವದ ಸಾಧನೆಯತ್ತ ದಾಪುಗಾಲಿಟ್ಟಿದೆ. ಇದೀಗ ಕನ್ನಡಿಗರಿಗೆ ಉದ್ಯೋಗ ಭರವಸೆ ಕುರಿತು ಗಟ್ಟಿಯಾದ ನೀತಿ, ನಿಲುವು ಪ್ರಕಟವಾಗದಿದ್ದರೆ ಮುಂದಿನ ಪೀಳಿಗೆ ಉದ್ಯೋಗದ ವಿಚಾರದಲ್ಲಿ ತೀವ್ರ ತೊಂದರೆಗೆ ಸಿಲುಕಲಿದೆ.
ನವೆಂಬರ್ ತಿಂಗಳಿಗೆ ಕನ್ನಡಿಗರ ಭಾವಕೋಶದಲ್ಲಿ ವಿಶಿಷ್ಠ ಸ್ಥಾನವಿದ್ದು, ಈ ಸಂದರ್ಭದಲ್ಲಿ ಉದ್ಯೋಗದ ಮೂಲಕ ನಾಡಾಭಿಮಾನ ಮೆರೆಯಲು ಸರ್ಕಾರ ಮುಂದಾಗಬೇಕು. ಕನ್ನಡ ಅನಾಥ ಕನ್ನಡಿಗ ?ಸ್ಥಳಿಯ ನಿರಾಶ್ರಿತ? ಎನ್ನವ ಸ್ಥಿತಿ ಇದೆ. ರಾಮಕೃಷ್ಣ ಹೆಗಡೆ ಅವರು ಕರ್ನಾಟಕ ಸರ್ಕಾರ ಮಾಡಿರುವ ಕನ್ನಡ ಕೆಲಸಗಳು ಕನ್ನಡ ಹೋರಾಟಗಾರ ಒತ್ತಡದಿಂದ ಅದದ್ದೆ ಹೊರತು, ಸ್ವಯಂ ಪ್ರೇರಣೆಯಿಂದಲ್ಲ? ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು.

    ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಪ್ರಕಟಿಸಿ ದಶಕವಾಗಿದೆ. ಆದರೆ, ಸಿಗಬೇಕಾದ ಸವಲತ್ತುಗಳನ್ನು ಪಡೆದಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ತಮಿಳಿಗೆ ಸಿಕ್ಕರುವ ಸವಲತ್ತಗಳು ಕನ್ನಡಕ್ಕೆ ಸಿಕ್ಕದೆಯೇ? ಎಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗಲೇ ಇಲ್ಲ. ಇಂದಿಗೂ ಶಾಸ್ತಿçÃಯ ಭಾಷೆಗೆ ಕೇಂದ್ರ ಸರ್ಕಾರ ನೀಡುವ ಸವಲತ್ತಗಳನ್ನು ಉಪಯೋಗಿಸಿಕೊಂಡು ಅರ್ಥಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ ಎನ್ನುವುದು ಕನ್ನಡಿಗರ ದುರ್ದೆÊವ.

    ಇಂದಿನ ಕನ್ನಡದ ಪರಿಸ್ಥಿತಿ ಇನ್ನೂ ಶೋಚನೀಯ. ಯಾವುದೇ ಕನ್ನಡಪರ ಚಟುವಟಿಕೆಗಳಿಗೆ ಜನ ಬರುತ್ತಿಲ್ಲ. ಹಾಗೆ ಬರುವವರಲ್ಲೂ ಹಿರಿಯ ನಾಗರಿಕರೇ ಆಗಿದ್ದಾರೆ. ಅಂತಹ ಕಡೆ ಕನ್ನಡ ಯುವಕರನ್ನು ಕಾಣುವುದು ದುಸ್ತರವಾಗುತ್ತಿದೆ. ಕನ್ನಡದ ಬಗ್ಗೆ ಯುವ ಜನತೆ ಆಸಕ್ತಿ ತೋರುತ್ತಿಲ್ಲ. ಯುವ ಜನತೆ ಕನ್ನಡದ ಕಟ್ಟಾಳುಗಳಾಗಿ ರೂಪುಗೊಳ್ಳಬೇಕು. ನಮ್ಮ ಮಕ್ಕಳಿಗೆ ನಮ್ಮ ತಾಯಿ ಭಾಷೆಯ ಮಹತ್ವ, ಸಂಸ್ಕೃತಿಯ ಹಿರಿಮೆಯನ್ನು ತಿಳಿಸುತ್ತಿಲ್ಲ.

    ಕನ್ನಡದ ಆದರ್ಶ ವ್ಯಕ್ತಿಗಳ, ಪುರಾಣ ಪುರುಷರ, ನಮ್ಮ ಭವ್ಯ ಇತಿಹಾಸಗಳ ಕಥಾನಕಗಳನ್ನು ಮನೆಯಲ್ಲಿ ಹೇಳುತ್ತಿಲ್ಲ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳಿಗೆ ತಮ್ಮತನ ಎಂದರೇನೆAಬ ಅರಿವಾಗಲೀ, ಹೆಮ್ಮಯಾಗಲೀ ಇರಲು ಹೇಗೆ ಸಾಧ್ಯವೇ? ?ಕನ್ನಡವಾದರೇನು? ಇತರ ಭಾಷೆಯಾದರೇನು? ತಮಗೆ ಐಷಾರಾಮಿ ಜೀವನದ ಸವಲತ್ತುಗಳು ಸಿಕ್ಕರಾಯಿತು? ಎಂಬ ಭಾವನೆಯನ್ನು ಅವರು ಬೆಳೆಸಿಕೊಂಡಿದ್ದಾರೆ.

     ಈಗ ಬೇಕಾಗಿರುವ ಶಿಕ್ಷಣ ಅಂದರೆ, ಅದರಿಂದ ಉದ್ಯೋಗ, ಉದ್ಯೋಗದಿಂದ ಹಣ, ಹಣದಿಂದ ಕೊಳ್ಳುಬಾಕತನದ ಹಪಾಹಪಿ. ಇವೆಲ್ಲದರ ಮಧ್ಯೆ ಕನ್ನಡ ಭಾಷೆ, ಅದರ ಮಹತ್ವ, ಅದರ ಸೊಗಡು ಯಾರಿಗೂ ಬೇಕಿಲ್ಲ. ಈ ವರ್ತುಲದಲ್ಲಿ ನಮ್ಮದೇ ಕನ್ನಡದ ಮಕ್ಕಳು, ಯುವಕರು, ಅವರ ತಂದೆ-ತಾಯಿಗಳು ಸಿಕ್ಕಿಬಿದ್ದಿರುವುದು ವಿಷಾದನೀಯ. ಮರವು ರೆಂಬೆ-ಕೊAಬೆಗಳನ್ನು ಚಾಚಿ ಬೆಳೆಯಲು ಬೇಕಾದ ಬೇರಿನ ಮಹತ್ವವನ್ನು ಯುವ ಜನಾಂಗಕ್ಕೆ ತಿಳಿಹೇಳುವ ಸಾಂಸ್ಕöÈತಿಕ ಹೋರಾಟದ ಅಗತ್ಯತೆ ಹಿಂದೆAದಿಗಿAತಲೂ ಈಗ ಹೆಚ್ಚಾಗಿದೆ.

     ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಅದು ನಮ್ಮ ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕöÈತಿಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕöÈತಿಗೂ ಅವಿನಾಭಾವ ಸಂಬಂಧವಿದೆ. ಇಂತಹದೊAದು ಅನನ್ಯ ಬಂಧವಿಲ್ಲದೇ ಹೋದಲ್ಲಿ ಭಾಷೆ ಮಾತನಾಡುವ ಸಂಕೇತವಾಗಿ ಮಾತ್ರ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗುವ ಅಪಾಯ ಇರುತ್ತದೆ ಅನ್ನುತ್ತಾರೆ ಭಾಷಾ ವಿಜ್ಞಾನಿಗಳು.

     ಬೇರೆಯವರು ಕನ್ನಡಕ್ಕೆ ಏನು ಮಾಡಬಹುದು ಅನ್ನುವುದಕ್ಕಿಂತ ವೈಯಕ್ತಿಕ ನೆಲೆಯಲ್ಲಿ ನಾನೇನು ಮಾಡಬಹುದು ಎಂದು ಚಿಂತಿಸಲು ಆರಂಭಿಸಿದರೆ ?ಕನ್ನಡ ಬೆಳೆಸುವುದು ಹೇಗೆ ಅನ್ನುವುದಕ್ಕೆ ಹಲವು ಮಾರ್ಗಗಳು ಹೊಳೆಯುತ್ತವೆ. ಮನೆಯಲ್ಲಿ ಕನ್ನಡದ ವಾತಾವರಣ ಉಳಿಸಿಕೊಳ್ಳಬೇಕು. ಮಕ್ಕಳಿಗೆ ಯಾವ ಅಳುಕು, ಕಿಳರಿಮೆಯಿಲ್ಲದೆ ಕನ್ನಡವನ್ನು ಸಹಜವಾಗಿ ಬಳಸುವ ಮನೋಭಾವವನ್ನು ರೂಢಿಸಿಕೊಳ್ಳಲು ಪೂರಕ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ವ್ಯಕ್ತಿ ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿ ದಿನ ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸುವ ದೃಢ ನಿರ್ಧಾರ ಮಾಡಿದರೆ ಸಾಕು. ಕನ್ನಡ ಭಾಷೆಯ ಬಗೆಗೆ ಕೇಳಿಬರುತ್ತಿರುವ ಆತಂಕದ ಸೊಲ್ಲು ಅಡಗುತ್ತದೆ.

     ಹೊರಗಿನಿಂದ ಬಂದ ಪರಭಾಷಿಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವಾಗ ಅವರು ಮಾಡುವ ತಪುö್ಪಗಳಿಗೆ ಹಳಿಯಬಾರದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿರುವ ಪರ ರಾಜ್ಯದವರು ಕನ್ನಡ ಕಲಿಯಲು ಆಸಕ್ತಿ ತೋರುತ್ತದ್ದಾರೆ. ಅವರು ಮಾತನಾಡುವಾಗ ಸಹಜವಾಗಿ ಅವರ ತಾಯಿ ಭಾಷೆಯ ಛಾಯೆ, ಮಧ್ಯೆ ಪದ ಸೇರಿಸುವುದು ಇರುತ್ತದೆ. ಅದನ್ನು ನಾವು ಸಹಿಸಿಕೊಂಡು ಪ್ರೋತ್ಸಾಹಿಸಿ, ಅವರಿಗೆ ಮನನೋಯದ ರೀತಿಯಲ್ಲಿ ತಿದ್ದಬೇಕು. ಅದು ಬಿಟ್ಟು ನಮ್ಮ ಕನ್ನಡ ಕೊಲೆ ಮಾಡಬೇಡ, ಇಂಗ್ಲಿಷ್, ಹಿಂದಿಯಲ್ಲಿ ಮಾತಾಡು? ಎನ್ನುವುದು ಮಹಾತಪ್ಪು . ಹಾಗೇನೋಡಿದರೆ ಬಹಳಷ್ಟು ಜನ ಇಂಗ್ಲಷ್‌ನ್ನು ತಪ್ಪು  ತಪ್ಪಾಗಿಯೇ ಮಾತನಾಡುತ್ತಾರೆ. ಅದನ್ನು ಸಹಿಸಿಕೊಳ್ಳುವುದಿಲ್ಲವೆ. ಶುದ್ಧ ಕನ್ನಡ ಎನ್ನುವ ಮಡಿವಂತಿಕೆ ಬೇಡ, ಅನಗತ್ಯವಾಗಿ ಹೆಚ್ಚು ಇಂಗ್ಲಿಷ್ ಬೆರಸಿದ ಕಂಗ್ಲಿಷ್ ಬೇಡ ಎನಿಸುತ್ತದೆ.

    ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟದಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದರು. ವಿವಿಧ ರಾಜ್ಯಗಳ ಪ್ರತಿಭಟನೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ನೋಡಿದಾಗ ಕನ್ನಡತಿಯರು ಕನ್ನಡ ಹೋರಾಟದಲ್ಲಿ ಪಾಲ್ಗೊಳ್ಳದಿರುವುದು ಕಣ್ಣಿಗೆ ರಾಚುತ್ತದೆ. ಎಲ್ಲ ರಂಗಗಳಲ್ಲಿ ಮಹಿಳೆಯರಿಗೆ ಪ್ರವೇಶ ಸಿಕ್ಕಿದೆ. ಸಾಮಾಜಿಕವಾಗಿ ಸ್ವಾತಂತ್ರವಿದೆ. ಹಾಗಿದ್ದೂ ಮಹಿಳೆಯರು ಕನ್ನಡದ ಬಗ್ಗೆ ಹಿಂದಿನವರಂತೆ ಆಸಕ್ತಿ ತೋರುತ್ತಿಲ್ಲ.

    ಹಿಂದೆ ಭಾಷೆ, ನೈಸರ್ಗಿಕ ಪರಿಸರಗಳ ವಿಚಾರದಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ, ಚಳವಳಿ ನಡೆಸಿದ ಸಾಕಷ್ಟು ನಿದರ್ಶನಗಳಿವೆ. ಕನ್ನಡದ ಕುಲದೇವಿ ಕಾಪಾಡು ತಾಯಿ ಕರ್ನಾಟಕದ ಭವ್ಯ ಇತಿಹಾಸ ಪರಂಪರೆಯಲ್ಲಿ ಸ್ತ್ರೀಯರು ಕನ್ನಡಭಾಷೆ, ಸಂಸ್ಕೃತಿಗೆ, ನಾಡ ರಕ್ಷಣೆಗೆ ನೀಡಿರುವ ಕೊಡುಗೆ ಗಣನೀಯವಾದದ್ದು ಎಂಬುದನ್ನು ಇತಿಹಾಸದ ಪುಟಗಳು ತಿಳಿಸುತ್ತವೆ.

     ವಿದ್ಯುನ್ಮಾನ ಮಾಧ್ಯಮಗಳು ಪ್ರವೇಶಿಸುವ ಮುನ್ನ ಮಧ್ಯಮ ವರ್ಗದ ಮನೆಗಳಲ್ಲಿ ಹೆಂಗಸರು ಕಥೆ-ಕಾದಂಬರಿಗಳನ್ನು ಓದುತ್ತಿದ್ದರು. ಅವರನ್ನು ಗುರಿಯಾಗಿಸಿಕೊಂಡು ಬರೆಯುವ ಬರಹಗಾರರ ಸಂಖ್ಯೆ ಸಾಕಷ್ಟಿತ್ತು. ಎಲ್ಲ ಊರು, ಕೇರಿಗಳಲ್ಲೂ ಭಜನ ಮಂಡಳಿಗಳಿರುತ್ತಿದವು. ಸನ್ನಿವೇಶದಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವುದು ಹೇಗೆಂಬ ಚಿಂತನೆ ಕನ್ನಡಾಸಕ್ತರ ನಡೆವೆ ನಡೆಯುವ ಅನಿವಾರ್ಯತೆಯಿದೆ. ಬಗ್ಗೆ ಎಲ್ಲ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ತನ್ನ ನೆಲದಲ್ಲಿಯೇ ಅನಾಥವಾಗಿ ಅಪರಿಚತವಾಗುತ್ತಿದೆ.

      ಆ ಕಾಲದಲ್ಲಿ ಆರಂಭವಾದ ಪತ್ರಿಕೆಗಳ ಹೆಸರನ್ನೊಮ್ಮೆ ನೋಡಿದರೆ ಸಾಕು. ಕರ್ನಾಟಕ ಭಾಷ ಸೇವಕ(1894), ಕರ್ನಾಟಕ ವೃತ್ತ(1892), ಕರ್ನಾಟಕ ವೈಭವ(1892), ಕರ್ನಾಟಕ ಜೀವನ(1916), ವಿಶ್ವ ಕರ್ನಾಟಕ(1925), ಜಯ ಕರ್ನಾಟಕ(1922), ತರುಣ ಕರ್ನಾಟಕ, ವಿಶಾಲ ಕರ್ನಾಟಕ, ಸಂಯುಕ್ತ ಕರ್ನಾಟಕ?(1929), ಕರ್ನಾಟಕ ನಂದಿನಿ(1916)ಹೀಗೆ ಹಲವು ಪತ್ರಿಕೆಗಳ ಹೆಸರು ಕರ್ನಾಟಕದಿಂದಲೇ ಆರಂಭವಾಗಿರುವುದನ್ನು ಕಾಣಬಹುದು.

      ಕರ್ನಾಟಕದ ಜೊತೆಗೆ ಕನ್ನಡದ ಹೆಸರನ್ನು ಹೊಂದಿದ ಪತ್ರಿಕೆಗಳೂ ಸಾಕಷ್ಟು ಬಂದವು. ತಾಯಿ ನಾಡು, ಕನ್ನಡ ಕೊಗಿಲೆ, ಕನ್ನಡಿಗ, ಕನ್ನಡ ಜ್ಯೋತಿ, ಕನ್ನಡವಾಣಿ, ಕನ್ನಡ ಕೇಸರಿ, ಕನ್ನಡ ಕೂಗು ಹೀಗೆ ಪತ್ರಿಕೆಗಳ ಹೆಸರಿನ ಮೂಲಕವೇ ಕನ್ನಡ ಪ್ರಜ್ಞೆ ಜಾಗೃತಿಗೊಳಿಸುವ ಕೆಲಸ ನಡೆಯಿತು. ಆ ಕಾಲಘಟ್ಟದಲ್ಲಿ ಪತ್ರಿಕೆಗಳನ್ನು ಆರಂಭಿಸುತ್ತಿದ್ದವರಿಗೆ ಭಾಷಾ ಜಾಗೃತಿಯ ಜೊತೆಜೊತೆಗೆ ಕನ್ನಡಿಗರನ್ನು ಒಂದುಗೂಡಿಸಿ ಕರ್ನಾಟಕ ಏಕೀಕರಣ ಮಾಡುವ ಆಶಯವೂ ಇತ್ತು. ತಮ್ಮ ಇ ಆಶಯವನ್ನು ಆಗುಮಾಡಲು ಪತ್ರಿಕೆಗಳು ಒಂದು ಸಾಧನ ಎಂದು ನಂಬಿದ್ದರು. ಹೀಗೆ ಸಾಲು ಸಾಲು ಕರ್ನಾಟಕ, ಕನ್ನಡದ ಹೆಸರಿನ ಪತ್ರಿಕೆಗಳನ್ನು ಪ್ರಕಟಣೆ ಮಾಡಿ ಕನ್ನಡಿಗರಲ್ಲಿ ಸುಪ್ತವಾಗಿದ್ದ ನಾಡಾಭಿಮಾನ, ಭಾಷಾಭಿಮಾನಗಳು ಡಾಳಾಗಿ ಪ್ರಕಟವಾಗುವಂತೆ ಮಾಡಿದರು. ಇದರಿಂದ ಆದರ್ಶವಾಗಿದ್ದ ಕರ್ನಾಟಕ ಏಕೀಕರಣದ ಬಗ್ಗೆ ವ್ಯಾಪಕವಾಗಿ ಧ್ವನಿ ಎತ್ತುವಂತಹ ವಾತಾವರಣ ನಿರ್ಮಾಣವಾಯಿತು.

    ಸಂಯುಕ್ತ ಕರ್ನಾಟಕವು ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಬಾಷೆ ಸಂಸ್ಕöÈತಿಯನ್ನು ಜೀವಂತವಾಗಿಟ್ಟಿತು. ಕನ್ನಡಿಗರನ್ನು ಜಾಗೃತಗೊಳಿಸುವ ಹಾಗು ಕನ್ನಡ ಸಾಹಿತ್ಯ, ಸಂಸ್ಕöÈತಿಗಳನ್ನು ಪ್ರಚಾರ ಮಾಡುವ ಆಶಯದಿಂದ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ 1906ರಲ್ಲಿ ವಾಗ್ಭೂಷಣ ಪತ್ರಿಕೆಯನ್ನು ಆರಂಭಿಸಿತು. ಆಲೂರು ವೆಂಟರಾಯರು ಆದರ ಮೊದಲ ಸಂಪಾದಕರಾದರು.

     ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಕೇಳಿಬರುತ್ತಿರುವ ಆತಂಕದ ಮಾತುಗಳು ಇಂದು ನಿನ್ನೆಯದಲ್ಲಿ ಅದಕ್ಕೆ 1912ರ ಸಾಧ್ವಿ ಪತ್ರಿಕೆಯಲ್ಲಿ ಪ್ರಕಟವಾದ ಈ ಸಾಲುಗಳೇ ಸಾಕ್ಷಿ ?ಬೆಂಗಳೂರಿನ ಚಿಕ್ಕಪೇಟೆ, ದೊಡ್ಡಪೇಟೆ ಮುಂತಾದ ಪೇಟೆಗಳಲ್ಲಿ ಬಣಜಿಗ ಲಿಂಗಾಯಿತರು ತಮ್ಮ ಅಂಗಡಿಗಳನ್ನು-ಮಂಡಿಗಳನ್ನು ಮಾರವಾಡಿಗಳಿಗೆ ಮಾರುತ್ತಿದ್ದಾರೆ. ಗುಜರಿ-ಲೋಹದ ವ್ಯಾಪಾರ ಮುಸಲ್ಮಾನರ ಹಿಡಿತದಲ್ಲಿದೆ.

    ದಿನಸಿ-ತರಕಾರಿ ವ್ಯಾಪಾರವೂ ತಮಿಳು-ತೆಲುಗರ ಕೈಗೆ ಹೋಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಬೆಂಗಳೂರಿನಲ್ಲಿ ಕನ್ನಡಿಗರು ಶಕ್ತಿ ಹೀನರಾಗುತ್ತಾರೆ ಎಂದು ಶತಮಾನಕ್ಕೂ ಮುಂಚೆ ಎಚ್ಚರಿಸಿತ್ತು. 1943ರಲ್ಲಿ ದೇಶಬಂಧು ಕುಟುಂಬದ ಮಾಸಿಕ ಛಾಯ ಪತ್ರಿಕೆ ಯಲ್ಲಿ ಪ್ರಕಟವಾದ ಬೆಂಗಳೂರು ಕನ್ನಡ ನಾಡೆ ಹೊರಗಿನವರು ಯಾರಾದರೂ ಬೆಂಗಳೂರಿಗೆ ಬಂದರೆ, ಅವರ ಕಿವಿಗೆ ಮೊದಲು ಬೀಳುವ ಭಾಷೆ ತಮಿಳು, ತೆಲುಗು, ಉರ್ದು. ಹೋಟೆಲ್, ಬಸ್, ಉದ್ಯಾನಗಳಿಗೆ ಹೋಗಿ, ಎಲ್ಲೆಲ್ಲಿ ನೋಡಿದರೂ ಕೂತಾಗ ಕೇಳುವುದು ತಮಿಳು, ತೆಲುಗು ಇಂಗ್ಲಿಷ್…. ತಲತಲಾಂತರಗಳಿಂದ ಮನೆ ಮಠ ಮಾಡಿಕೊಂಡಿದ್ದ ಕನ್ನಡಿಗರು ಕಣ್ಮರೆಯಾದರೆ!….. ?ಬೆಂಗಳೂರಿನ? ಕನ್ನಡಿಗರಿಗೆ ಇರಬೇಕಾದಷ್ಟು ಕನ್ನಡಾಭಿಮಾನವಿಲ್ಲ ಎಂದು ಬರೆದಿತ್ತು.

    ಅ.ನ.ಕೃ. ಮುಂತಾದ ಸಾಹಿತಿಗಳ ನೇತೃತ್ವದಲ್ಲಿ ಪ್ರಾರಂಭವಾದ ಕನ್ನಡ ಚಳವಳಿಯ ಮುಖವಾಣಿಯಾಗಿ 1962ರಲ್ಲಿ ಕನ್ನಡ ಯುವಜನ ಎಂಬ ವಾರಪತ್ರಿಕೆ ಪ್ರಾರಂಭವಾಯಿತು. ಇದು ಕನ್ನಡ ಚಳವಳಿಗೆ ಬುನಾದಿ ಹಾಕಿದ ಕರ್ನಾಟಕ ಸಂಯುಕ್ತ ರಂಗ ಮುಖವಾಣಿಯಾಗಿತ್ತು. 

  ಈ ಪತ್ರಿಕೆ ಕನ್ನಡ ಸಂಘಟನೆಗಳು ಮತ್ತು ಕಾರ್ಯಕರ್ತರ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡುವ ಮೂಲಕ ಕನ್ನಡ ಚಳವಳಿಗೆ ತೀವ್ರತೆ ತಂದು ಕೊಟ್ಟಿತು. ಕನ್ನಡ ಚಳವಳಿ ಹೋಳಾದಾಗ ರಾಮಮೂರ್ತಿ ಸುಜನ ಎಂಬ ಪತ್ರಿಕೆ ಆರಂಭಿಸಿದರು. ಅದೇ ರೀತಿ ವಾಟಾಳ್ ನಾಗರಾಜ್ ನವಪ್ರಪಂಚ, ಜಿ. ಶಿವಶಂಕರ್ ಕನ್ನಡ ಚಳವಳಿ, ಸಾ.ಕೃ. ಸಂಪಂಗಿ ಕನ್ನಡವೇ ದೇವರು, ಕ.ಮು. ಸಂಪಂಗಿರಾಮಯ್ಯ ಕನ್ನಡ ಕುಲ ಪತ್ರಿಕೆಗಳನ್ನು ಹೊರತಂದರು. ವಾಟಾಳರ ಛಲದಂಕಮಲ್ಲ ಪತ್ರಿಕೆಯೂ ಕೆಲಕಾಲ ಪ್ರಕಟವಾಯಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link