ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ, ಗೃಹ ಸಚಿವಾಲಯದ ಭದ್ರತೆ ವಿಷಯ ನಗೆಪಾಟಲಿ ಗೀಡಾಗಬಾರದು. ಯಡಿಯೂರಪ್ಪ ಗಾಂಧಿ ಬಜಾರ್ನಲ್ಲಿ ನಿಂತು ಯಾವುದೇ ಬೆದರಿಕೆಯಿಲ್ಲದೆ ಚಾಟ್ ತಿನ್ನುವ ರಾಜಕಾರಣಿ. ಅವರು ಎಲ್ಲರಿಗೂ ಒಪ್ಪಿಗೆಯಾಗುವ ಬಹು ಪ್ರೀತಿಯ ನಾಯಕ. ಬಹುಶಃ ಅವರು ಕರ್ನಾಟಕದ ಅತ್ಯಂತ ಜಾತ್ಯತೀತ ಬಿಜೆಪಿ ನಾಯಕರಾಗಿದ್ದಾರೆ.
Z ಭದ್ರತೆ ಅವರಿಗೆ ಏಕೆ ಬೇಕು, ಅವರಿಗೆ ಯಾವುದಾದರೂ ಬೆದರಿಕೆಗಳು ಅಥವಾ ಎಚ್ಚರಿಕೆ ಪತ್ರಗಳು ಬಂದಿವೆಯೇ ಏನೂ ಇಲ್ಲವಲ್ಲ ಎನ್ನುತ್ತಾರೆ. ಕರ್ನಾಟಕ ಉತ್ತರ ಪ್ರದೇಶವೇ ಅಥವಾ ಮಧ್ಯಪ್ರದೇಶವೇ? ದೆಹಲಿಯಲ್ಲಿ ಯಾರೋ ತಮ್ಮ ಲೆಕ್ಕಾಚಾರವನ್ನು ತಪ್ಪಾಗಿ ಗ್ರಹಿಸಿದ್ದಾರೆಂದು ತೋರುತ್ತಿದೆ. ಬಿಜೆಪಿಯ ಮಾಜಿ ಪದಾಧಿಕಾರಿಯೊಬ್ಬರು, ಬಹುಶಃ ಇದು ಕೇಂದ್ರದ ಗೌರವದ ವಿಧಾನವಾಗಿದೆ ಎಂದು ಹೇಳಿದರು.
ಯಡಿಯೂರಪ್ಪನವರಿಗೆ ಯಾವುದೇ ಬೆದರಿಕೆಗಳ ಕುರಿತು ಅವರು, ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಕೋಮು ಘಟನೆಯ ನಂತರ, ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಅದು ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ಕಾರಣವಾಗಿರಬಹುದು ಎನ್ನುತ್ತಾರೆ. ಬಿಜೆಪಿ ಮುಖ್ಯ ವಕ್ತಾರ ಮಹೇಶ್, ಕೆಲವು ಬೆದರಿಕೆ ಗ್ರಹಿಕೆ ಅಥವಾ ಕೆಲವು ಗುಪ್ತಚರ ಮಾಹಿತಿಗಳು ಇದ್ದಾಗ, ಕೇಂದ್ರ ಗೃಹ ಸಚಿವಾಲಯವು ಅಂತಹ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದರು.