ಮಿಜೊರಾಮ್ ಹಾಗು ಛತ್ತೀಸ್ ಗಢ ಚುನಾವಣೆ : ಡಿ.03 ಕ್ಕೆ ಮತ ಎಣಿಕೆ

ನವದೆಹಲಿ:

     ಮಿಜೋರಾಮ್, ಚತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆ ವರೆಗೂ ಅನುಕ್ರಮವಾಗಿ ಶೇ.12.8 ಹಾಗೂ ಶೇ.9.9 ರಷ್ಟು ಮತದಾನವಾಗಿದೆ. 30 ವಿಧಾನಸಭಾ ಕ್ಷೇತ್ರಗಳಿರುವ ಮಿಜೊರಾಮ್ ನಲ್ಲಿ ಮಧ್ಯಾಹ್ನ 3 ಗಂಟೆ ವರೆಗೂ ಮತದಾನ ನಡೆಯಲಿದ್ದು, ಡಿ.03 ಕ್ಕೆ ಮತ ಎಣಿಕೆ ನಡೆಯಲಿದೆ. 

    2018 ರಲ್ಲಿ ಮಿಜೊರಾಮ್ ನಲ್ಲಿ ಶೇ.84.9 ರಷ್ಟು ಮತದಾನವಾಗಿತ್ತು. ಒಟ್ಟು 6,28,608 ಮಂದಿ ಮತದಾನ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಮುನ್ನೆಲೆಯಲ್ಲಿ ಇಲ್ಲದ ರಾಜ್ಯ ಮಿಜೋರಾಮ್ ಆಗಿದೆ.

    ಇನ್ನು ಚತ್ತೀಸ್ ಗಢದಲ್ಲಿ ಬೆಳಿಗ್ಗೆ 9 ಗಂಟೆ ವರೆಗೂ ಶೇ.9.93 ರಷ್ಟು ಮತದಾನವಾಗಿದ್ದು,  ಉತ್ತರ ಬಸ್ತಾರ್ ಕನ್ಕರ್ ನಲ್ಲಿ ಅತಿ ಹೆಚ್ಚು ಅಂದರೆ ಶೇ.16.48 ರಷ್ಟು ಮತದಾನವಾಗಿದ್ದರೆ, ಕಬೀರ್ ಧಾಮ್ ನಲ್ಲಿ ಶೇ.12.51 ರಷ್ಟು, ದಾಂತೇವಾಡದಲ್ಲಿ ಶೇ.10.18 ರಷ್ಟು, ನಾರಾಯಣಪುರದಲ್ಲಿ ಶೇ.11, ರಾಜ್ ನಂದ್ ಗಾಂವ್ ನಲ್ಲಿ ಶೇ.8.34 ರಷ್ಟು ಮತದಾನವಾಗಿದೆ. 

    ಖೈರಗಢದಲ್ಲಿ ಶೇ.6, ಬಸ್ತಾರ್ ನಲ್ಲಿ ಶೇ.4.89  ಸುಕ್ಮಾದಲ್ಲಿ ಶೇ.4.21 ರಷ್ಟು, ಕೊಂಡಗಾಂವ್ ನಲ್ಲು ಶೇ.3.39 ರಷ್ಟು ಮತದಾನವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link