ಹಣತೆ ಕೊಳ್ಳಲು ಜನತೆ ಹಿಂದೇಟು : ಸಂಕಷ್ಟದಲ್ಲಿ ವ್ಯಾಪಾರಿಗಳು

ಹುಬ್ಬಳ್ಳಿ

     ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದ್ದು, ಈ ಹಿನ್ನೆಲೆ ಈಗಾಗಲೇ ಜನರು ಹಣತೆಗಳನ್ನು ಕೊಳ್ಳಲು ಮುಂದಾಗಿದ್ದಾರೆ. ಅದರಲ್ಲೂ ಮಣ್ಣಿನ ಮಡಿಕೆಗಳನ್ನು ಬಿಟ್ಟು, ಆನ್‌ಲೈನ್‌ನಲ್ಲಿನ ಹಣತೆಗಳನ್ನೇ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಇಲ್ಲಿನ ಸ್ಥಳೀಯ ವ್ಯಾಪಾರಿಗಳಿಗೆ ಕೈಕಟ್ಟಿ ಹಾಕಿದಂತಾಗಿದೆ.

     ದೀಪಾವಳಿಯ ಪಾರಂಪರಿಕ ಸೊಬಗು ಕಾಣುವುದೇ ಮಣ್ಣಿನ ಹಣತೆಗಳಲ್ಲಿ. ನಗರದ ಮಾರುಕಟ್ಟೆಗಳಲ್ಲೂ ಈಗ ಝಗಮಗಿಸುವ ಅಲಂಕಾರಿಕ ಸಾಮಗ್ರಿಗಳ ಅಂಗಡಿಗಳ ನಡುವೆ ಅಲ್ಲಲ್ಲಿ ವೈವಿಧ್ಯಮಯ ಹಣತೆಗಳ ಲೋಕ ಅನಾವರಣಗೊಂಡಿದೆ. ಕಳೆದ ಹಲವಾರು ವರ್ಷಗಳಲ್ಲಿ ಸ್ಥಳೀಯ ಕುಂಬಾರರು ಹಣತೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ.

     ತಮಿಳುನಾಡಿನ ಕಾರ್ಖಾನೆಗಳಲ್ಲಿ ತಯಾರಾಗುವ ಹಣತೆಗಳನ್ನು ವ್ಯಾಪಾರಿಗಳು, ಕುಂಬಾರರು ಕೊಂಡು, ವಿವಿಧ ಬೀದಿಗಳಲ್ಲಿ ಮಾರುತ್ತಿದ್ದಾರೆ.

     ದೀಪಾವಳಿ ಹಬ್ಬಕ್ಕೆ ದೀಪಗಳೇ ಮೂಲ ಸೊಬಗು ತರುವಂತಹದು. ಕತ್ತಲೆಯಲ್ಲಿಂದ ಬೆಳಕಿನಡೆಗೆ ಕೊಂಡೊಯ್ಯುವ ಈ ಹಬ್ಬದ ದೀಪಗಳನ್ನು ಮನ ಮನೆಗಳಲ್ಲಿ ಬೆಳಲಾಗುತ್ತಿದೆ‌‌. ಈಗ ವೋಕಲ್ ಫಾರ್ ಲೋಕಲ್‌ಗೆ ಸರ್ಕಾರ ಒತ್ತು ಕೊಟ್ಟರೂ ಸಹ ಬೇರೆ ಬೇರೆ ರಾಜ್ಯಗಳ ಹಣತೆ ಮಾರಾಟ ಮಾಡಲಾಗುತ್ತಿದೆ. ಹಾಗೂ ಸ್ಥಳೀಯವಾಗಿ ಕುಂಬಾರಿಕೆ ಕ್ರಮೇಣ ಅವಸಾನದ ಅಂಚಿಗೆ ಹೋಗಿದೆ.

    ತಮ್ಮ ಕುಟುಂಬದ ಹಿರಿಯರು ಇದೇ ಕುಂಬಾರಿಕೆ ಉದ್ಯೋಗ ಮಾಡತ್ತಾ ಬಂದಿದ್ದು, ಈಗ ಮಣ್ಣಿನ ದೀಪಗಳಿಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ಕುಂಬಾರಿಕೆ ಮಹಿಳೆ ಗಂಗಮ್ಮ.

    5 ರಿಂದ 6 ವಿಧದ ಹಣತೆಗಳು ನಮ್ಮ ಬಳಿಯಿವೆ. ಈ ವರ್ಷ ಕಮಲದ ಮಾದರಿಯವು ಹೊಸದಾಗಿ ಬಂದಿವೆ. ಸಾಮಾನ್ಯ ಹಣತೆಯಲ್ಲಿ 3 ಅಳತೆಗಳು ಇವೆ. ಲಾಂಟರ್ನ್‌ ಮಾದರಿಯವು, ಅಲ್ಲಾವುದ್ದೀನ್‌ ದೀಪ ಮೊದಲಾದ ವಿಶಿಷ್ಟವಾದವೂ ಇವೆ. ತಮಿಳುನಾಡಿನಿಂದ ಬಂದು ಕೊಪ್ಪಿಕರ್‌ ರಸ್ತೆ ಮುಂತಾದ ಕಡೆಗಳಲ್ಲಿ ಈ ಹಣತೆ ಮಾಡುತ್ತಿದ್ದಾರೆ.

     ಅತಿ ಚಿಕ್ಕ ಹಣತೆಗಳು ಡಜನ್‌ಗೆ ₹20, ಚಿಕ್ಕ ಹಣತೆ ₹30, ಮಧ್ಯಮ ಗಾತ್ರದ ಹಣತೆ ₹50, ದೊಡ್ಡ ಹಣತೆ ₹120, ತೆಂಗಿನಕಾಯಿ ಮಾದರಿಯವು ಜೋಡಿಗೆ ₹60, ಲ್ಯಾಂಪ್‌ ಮಾದರಿಯವು ಜೋಡಿಗೆ ₹100, ತುಳಸಿಕಟ್ಟೆ ಮಾದರಿಯವು ಜೋಡಿಗೆ ₹60ಗಳಲ್ಲಿ ದುರ್ಗದಬೈಲ್‌ನಲ್ಲಿ ಹಣತೆಗಳ ವ್ಯಾಪಾರ ಮಾಡುತಿದ್ದಾರೆ.

     ದೀಪಾವಳಿ ಸಂದರ್ಭದಲ್ಲಿ ಹಣತೆಗಳ ವ್ಯಾಪಾರ ಮಾಡುವ ಅಬ್ದುಲ್‌ ಘನಿ ಅವರ ಬಳಿ 50ಕ್ಕೂ ಹೆಚ್ಚು ವಿಧದ ಹಣತೆಗಳು ಇವೆ. ಇನ್ನು ದೀಪಾವಳಿಯಲ್ಲಿ ಹಣತೆ ಇಲ್ಲದಿದ್ದರೆ ಹೇಗೆ ಎನ್ನುತ್ತಾರೆ ಗ್ರಾಹಕರಾದ ಸಂದ್ಯಾ, ಹೇಮಾ ಅವರು. ಗುಜರಾತ್‌ ಹಾಗೂ ಚೆನ್ನೈಯಿಂದ ತರಿಸುವ ಈ ಹಣತೆಯ ವ್ಯಾಪಾರವನ್ನು ದಸರಾ ಮುಗಿದ ಕೂಡಲೇ ಶುರು ಮಾಡಲಾಗುತ್ತದೆ. ವ್ಯಾಪಾರ ನಡೆಯುತ್ತಿದೆ. ಕೈಯಿಂದ ಮಾಡಿದ ಹಣತೆಗಳು ₹50ಕ್ಕೆ ಡಜನ್‌ ನಂತೆ ಮಾರಾಟ ಮಾಡಲಾಗುತ್ತದೆ. ಹೆಚ್ಚಿನವರು ಆನ್‌ಲೈನ್‌ನಲ್ಲೇ ಕೊಳ್ಳುತ್ತಿರುವುದರಿಂದ ಹಣತೆ ವ್ಯಾಪಾರವೂ ಕುಸಿದಿದೆ ಎಂದು ವ್ಯಾಪರಿಗಳು ಅಳಲು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link