ತುಮಕೂರು
ಜಾತಿಗಣತಿ ಅವಶ್ಯಕತೆ ಇದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ಜಾತಿ ಗಣತಿ ವರದಿ ಸ್ವೀಕಾರದ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
ಜಿಪಂನಲ್ಲಿ ದಿಶಾ ಸಮಿತಿ ಸಭೆ ಗೂ ಮುನ್ನ ಸುದ್ದಿ ಗಾರರೊಂದಿಗೆ ಮಾತನಾಡಿ ಜಾತಿ ಗಣತಿ ವರದಿ ಪ್ರತಿ ಐದು ವರ್ಷಕ್ಕೊಮ್ಮೆ ಮಾಡುವ ಅವಶ್ಯಕತೆಯಿದೆ. ಯಾವುದೇ ಪಂಚವಾರ್ಷಿಕ ಯೋಜನೆಗಳ ಜಾರಿಗೆ ಜನಸಮುದಾಯಗಳ ಸಾಮಾಜಿಕ, ಅರ್ಥಿಕ ಮಾಹಿತಿ ಅತ್ಯವಶ್ಯಕ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಾನೇ ಮಾಡಿಸಿರುವ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಯನ್ನು ಮೊದಲು ಸ್ವೀಕರಿಸಿ ಪರಾಮರ್ಶಿಸಬೇಕು. ಅದನ್ನು ಮಾಡದೆ ಆಯೋಗದ ಕಾರ್ಯ ದರ್ಶಿ ಸಹಿ ಹಾಕಿಲ್ಲ, ಮೂಲಪ್ರತಿ ನಾಪತ್ತೆ ಎಂಬುದಾಗೆಲ್ಲ ಸಬೂಬು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಮೂಲ ಪ್ರತಿ ನಾಪತ್ತೆ ಎಲ್ಲಿ ಹೇಗಾಯಿತು ಯಾರ ಕಸ್ಟಡಿ ಯಲ್ಲಿ ಏನಾಯಿತು ಎಂಬ ಬಗ್ಗೆ ಸಮಗ್ರ ತನಿಖೆಯನ್ನು ಏಕೆ ಮಾಡಿಸುತ್ತಿಲ್ಲ ಎಂದು ಸಚಿವರು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ