ಬೆಂಗಳೂರು :
ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದಂತಹ ಕತರ್ನಾಕು ಕುಖ್ಯಾತ ಮನೆಗಳನನ್ನು ಬಂಧಿಸುವಲ್ಲಿ ತಿರುಮಲ ಶೆಟ್ಟಿ ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಡಿಜೆ ಹಳ್ಳಿಯ ಇಮ್ತಿಯಾಜ್ ಅಹಮದ್ ಹಾಗೂ ಕಾವಲ್ ಬೈರಸಂದ್ರದ ನಗೀನ ತಾಜ್ ಬಂದಿತ ಆರೋಪಿಗಳು.ಬಂಧಿತ ಆರೋಪಿಗಳಿಂದ ಸುಮಾರು 38 ಲಕ್ಷ ಮೌಲ್ಯದ 629 ಗ್ರಾಂ ಚಿನ್ನದ ಆಭರಣ, 719 ಗ್ರಾಂ ಬೆಳ್ಳಿಯ ಆಭರಣ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಇಮ್ತಿಯಾಜ್ ಅಹಮದ್ ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಗ್ರಾಮದಲ್ಲಿ ಸಣ್ಣದಾದ ರೂಮ್ ಒಂದನ್ನ ಬಾಡಿಗೆಗೆ ಪಡೆದು ವಾಸವಾಗಿದ್ದ. ರಾತ್ರಿ ವೇಳೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತಹ ಈ ಆರೋಪಿ ಕಬ್ಬಿಣದ ರಾಡ್ ಹಾಗೂ ಸ್ಕ್ರೂ ಡ್ರೈವರ್ ಗಳನ್ನು ಇಟ್ಟುಕೊಂಡು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಮನೆ ಬೀಗ ಮುರಿದು ಕಳ್ಳತನ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ತೋಚಿಕೊಂಡು ಪರಾರಿಯಾಗಿದ್ದ.
ಹೀಗೆ ಕಳವು ಮಾಡುತ್ತಿದ್ದಂತಹ ಚಿನ್ನವನ್ನು ತನ್ನ ಸ್ನೇಹಿತೆ ಆದಂತಹ ನಗಿನ ತಾಜ್ ಗೆ ಕೊಟ್ಟು ಅವಳ ಮುಖಾಂತರ ಬ್ಯಾಂಕು, ಜುವೆಲ್ಲರಿ, ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುವುದು ಹಾಗೂ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಿಂದ ಕುದುರೆ ರೇಸು ಮೋಜು-ಮಸ್ತಿ ಮಾಡಿ ಕಾಲ ಕಳೆಯುವುದು ಆರೋಪಿಯ ಜೀವನ ಶೈಲಿ ಆಗಿರುತ್ತದೆ.
ಮನೆಗೊಳ್ಳತನ ಮಾಡುತ್ತಿದ್ದಂತಹ ಇಮ್ತಿಯಾ ಅಹಮದ್ ಹೊಸಕೋಟೆ ತಾಲೂಕಿನ ತಿರುಮಲ ಶೆಟ್ಟಳ್ಳಿ 10, ಹಾಗೂ ಅನುಗೊಂಡನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 5 ಒಟ್ಟು 15 ಪ್ರಕರಣ ಸೇರಿದಂತೆ ಬೆಂಗಳೂರಿನ ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಸುಬ್ರಮಣ್ಯಪುರ, ಮೈಕೋಲೇಔಟ್ ಜೀವನ್ ಭೀಮಾ ನಗರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗಳ 42 ಕಳವು ಪ್ರಕರಣಗಳ ಆರೋಪಿಯಾಗಿದ್ದಾನೆ.
ಕಳೆದ 10 10 ತಿಂಗಳ ಹಿಂದೆ ಕಳುವು ಪ್ರಕರಣದಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಬಂದಿತನಾಗಿ ಬೇಲ್ನಲ್ಲಿ ಹೊರಬಂದಿದ್ದ, ಹೊರಬಂದ ಬಳಿಕ ಸಮೇತನಹಳ್ಳಿ ಬಳಿ ರೂಮ್ ಮಾಡಿಕೊಂಡು ಮತ್ತೆ ತನ್ನ ಅದೇ ಚಾಳಿಯನ್ನು ಮುಂದುವರಿಸಿ ಸುಮಾರು 15 ಕಳ್ಳತನಗಳನ್ನು ಮಾಡಿದ್ದ. ಕಳ್ಳತನವನ್ನೇ ಉದ್ಯೋಗ ವನ್ನಾಗಿಸಿಕೊಂಡು ಪೊಲೀಸರ ಕಣ್ ತಪ್ಪಿಸಿ ಓಡಾಡಿಕೊಂಡಿದ್ದ ಅಂತಹ ತಿರುಮಲಾ ಶೆಟ್ಟಳ್ಳಿ ಪೊಲೀಸರು ಸಾಕಷ್ಟು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ