ಬೆಳಗಾವಿ,
ಸಚಿವರು ಮತ್ತು ಶಾಸಕರು ಜನ ಪರ ಸೇವೆ ಮಾಡಲು ಆಪ್ತ ಸಹಾಯಕರ ಉತ್ತಮ ಸಲಹೆ ಮತ್ತು ಕಾರ್ಯವೈಖರಿ ಮುಖ್ಯ ಎಂದು ವಿಧಾನ ಸಭೆ ಅಧ್ಯಕ್ಷ ಯು. ಟಿ ಖಾದರ್ ಹೇಳಿದರು.
ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಡಿರುವ ಸಚಿವರ ಮತ್ತು ಶಾಸಕರ ಆಪ್ತ ಸಹಾಯಕರ ಜೊತೆ ಸಭೆ ನಡೆಸಿ ಮಾತಾನಾಡಿದ ಅವರು, ಜನ ಪ್ರತಿನಿಧಿಗಳು ಉತ್ತಮ ಸೇವೆ ಮಾಡಲು ಅವರ ಆಪ್ತ ಸಹಾಯಕ ಪಾತ್ರ ಮುಖ್ಯ ವಾಗಿರುತ್ತದೆ. ಸಾಮಾನ್ಯ ಜನರು ತಮ್ಮ ಸಮಸ್ಯೆ ಗಳನ್ನು ಶಾಸಕರ ಬಳಿ ಹೇಳುತ್ತಾರೆ, ಆ ಸಮಸ್ಯೆ ಗಳನ್ನೂ ಸೂಕ್ತ ರೀತಿಯಲ್ಲಿ ಬಗ್ಗೆ ಆರಿಸಿ ಅವರಿಗೆ ಸಹಾಯ ಮಾಡಿದರೆ ಆಗ ತಾವು ಆಯ್ಕೆ ಮಾಡಿದ ಜನಪ್ರತಿನಿಧಿ ಬಗ್ಗೆ ಅವರು ಹೆಮ್ಮೆ ಪಡುತ್ತಾರೆ. ಆ ಕೆಲಸವನ್ನು ನೀವು ಶ್ರದ್ಧೆ ವಹಿಸಿ ಮಾಡಬೇಕು ಎಂದು ಸಲಹೆ ನೀಡಿದರು.
ನಿಮ್ಮ ಕಾರ್ಯವೈಖರಿ ಮೂಲಕ ಶಾಸಕರ ಭವಿಷ ನಿರ್ಧಾರ ವಾಗುತ್ತದೆ. ಈ ಬಗ್ಗೆ ತಾವು ಎಚ್ಚರ ವಹಿಸಬೇಕು ಎಂದರು.ಸಭೆ ಬಳಿಕ ಸುವರ್ಣ ವಿಧಾನ ಸೌಧ ಮುಂಬಾಗ ಶಾಸಕರು ಮತ್ತು ಆಪ್ತ ಸಹಾಯಕ ಜೊತೆ ಫೋಟೋ ತಾಗಿಸಿಕೊಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
