ಬೆಂಗಳೂರು:
ಬಾಣಸವಾಡಿಯ ಕೃಷ್ಣಾ ರೆಡ್ಡಿ ಲೇಔಟ್‌ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಪಿ ಕುಮಾರ್ ಅವರ ನಿವಾಸದಲ್ಲಿ ಎರಡನೇ ದಿನವೂ ಬಾಡಿಗೆದಾರರ ಮೇಲೆ ಹಲ್ಲೆ ನಡೆದಿದೆ.
ಕುಮಾರ್ ಅವರು ಅಮೆರಿಕ ಮೂಲದ ಎನ್‌ಆರ್‌ಐ ಒಡೆತನದ ನಿವಾಸದಲ್ಲಿ ಬಾಡಿಗೆದಾರರಾಗಿದ್ದಾರೆ. ಮನೆ ಮಾಲೀಕನ ಸಹೋದರಿ ಎಲ್ ಶಾಂತಮ್ಮ ಮತ್ತು ಅವರ ಪತಿ ಕೆಲವು ಗೂಂಡಾಗಳೊಂದಿಗೆ ಕುಮಾರ್ ಮತ್ತು ಅವರ ಕಿರಿಯ ಮಗನ ಮೇಲೆ ಹಲ್ಲೆ ನಡೆಸಿದ್ದರು. ಗುರುವಾರ ಸಂಜೆ ಅವರ ವೃದ್ಧ ಪೋಷಕರನ್ನೂ ಮನೆಯ ಹೊರಗೆ ಕಳುಹಿಸಿದ್ದಾರೆ. ಬುಧವಾರವೂ ಕುಟುಂಬದವರ ಮೇಲೆ ಹಲ್ಲೆ ನಡೆದಿತ್ತು.
ಕುಮಾರ್ ಅವರ ಕುಟುಂಬ ಸದಸ್ಯರು ಎಫ್‌ಐಆರ್ ದಾಖಲಿಸಲು ಸಂಜೆ ರಾಮಮೂರ್ತಿನಗರ ಠಾಣೆಗೆ ಭೇಟಿ ನೀಡಿದ್ದರು. ಅವರ ವಕೀಲರ ಸಲಹೆಯ ಮೇರೆಗೆ, ಕುಮಾರ್ ತಾವು ಪಾವತಿಸಿರುವ 2.5 ಲಕ್ಷ ಮುಂಗಡ ಹಣವನ್ನು ತಮಗೆ ಹಿಂದಿರುಗಿಸುವವರೆಗೂ ಮನೆ ಖಾಲಿ ಮಾಡದಿರಲು ನಿರ್ಧರಿಸಿದ್ದಾರೆ.
ನನ್ನ ಸಹೋದರಿ ಮತ್ತು ನಿನ್ನೆ ಹಲ್ಲೆಗೊಳಗಾದ ನನ್ನ 85 ವರ್ಷದ ತಾಯಿ ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರು, ಇದೇ ವೇಳೆ ಇಂದು ಕೂಡಾ ಗೂಂಡಾಗಳು ಗುಂಪುಗೂಡಿ ನನ್ನ ಮತ್ತು ನನ್ನ ಕಿರಿಯ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಆತನಿಗೆ ರಕ್ತಸ್ರಾವವಾಗಿದೆ. ಸ್ಥಳಕ್ಕೆ ಬಂದ ಸಬ್ ಇನ್ಸ್ ಪೆಕ್ಟರ್ ದೂರು ತಮಗೆ ಸೂಚಿಸಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
ಶಾಂತಮ್ಮ ಮತ್ತು ಆಕೆಯ ಜೊತೆಗಿದ್ದವರು ಮನೆಯೊಳಗೆ ಪ್ರವೇಶಿಸಿ ಒಳಗಿನಿಂದ ಬೀಗ ಹಾಕಿದ್ದಾರೆ. ಹೀಗಾಗಿ ನಾವು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲಎಂದು ಅವರು ಹೇಳಿದರು. ಈ ರೀತಿ ಯಾರದೋ ಮನೆಗೆ ಪ್ರವೇಶಿಸಲು ಅವರಿಗೆ ನ್ಯಾಯಾಲಯದ ಆದೇಶ ಬೇಕು. ಅದ್ಯಾವುದು ಇಲ್ಲದೆ ಮನೆಗೆ ನುಗ್ಗುತ್ತಿದ್ದಾರೆ, ನಮ್ಮನ್ನು ಹೊರಗೆ ತಳ್ಳುತ್ತಿದ್ದಾರೆ ಮತ್ತು ಒಳಗಿನಿಂದ ಬೀಗ ಹಾಕುತ್ತಿದ್ದಾರೆ.
ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಕುಮಾರ್ ದೂರಿದರು. ಹಿಂದಿನ ದಿನದ ಕುಮಾರ್ ಮತ್ತೆ ಒಳಗೆ ತೆಗೆದುಕೊಂಡು ಹೋದ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಗೂಂಡಾಗಳು ಗುರುವಾರ ಮತ್ತೆ ಮನೆಯ ಹೊರಗೆ ಇರಿಸಿದ್ದರು.