ಹುಬ್ಬಳ್ಳಿ:
ಯೂಟ್ಯೂಬ್ ಚಾನೆಲ್‌ಗಳನ್ನು ಶೇರ್, ಸಬ್‌ಸ್ಕ್ರೈಬ್ ಮಾಡಿ ಸ್ಕ್ರೀನ್‌ಶಾಟ್ ಕಳುಹಿಸಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ವಿದ್ಯಾನಗರದ ಪ್ರಶಾಂತ ಕುಲಕರ್ಣಿ ಅವರಿಗೆ ವಾಟ್ಸ್ ಆ್ಯಪ್ ನಂಬರ್‌ನಲ್ಲಿ ಸಂದೇಶ ಕಳುಹಿಸಿ ನಂಬಿಸಿದ ವಂಚಕರು, ಅವರಿಂದ 15.61 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಕೆಲವು ಟಾಸ್ಕ್ ನೀಡಿದ ವಂಚಕರು, ಅವುಗಳಿಗೆ ಹಣ ವರ್ಗಾಯಿಸಿದ್ದ. ಅದನ್ನೇ ನಂಬಿ ಪ್ರಶಾಂತ ಅವರು ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ