ಪಂಜಾಬ್‌ ಡಿಎಸ್ಪಿ ಹತ್ಯೆ : ರಿಕ್ಷಾ ಚಾಲಕನ ಬಂಧನ

ಜಲಂಧರ್‌: 

      ಡೆಪ್ಯುಟಿ ಸೂಪರಿಂಟೆಂಡೆಂಟ್ ಶವವಾಗಿ ಪತ್ತೆಯಾದ ನಾಲ್ಕು ದಿನಗಳ ನಂತರ, ಆಟೋರಿಕ್ಷಾ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.  ಆರೋಪಿ ಜಗಳದ ನಂತರ ಅರ್ಜುನ ಪ್ರಶಸ್ತಿ ಪುರಸ್ಕೃತ ಮತ್ತು ವೇಟ್‌ಲಿಫ್ಟರ್ ಆಗಿದ್ದ ದಲ್ಬೀರ್ ಸಿಂಗ್ (54) ಅವರನ್ನು ಅಧಿಕಾರಿಯ ಸರ್ವೀಸ್ ಪಿಸ್ತೂಲ್‌ನಿಂದ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

    ಸಿಂಗ್ ಅವರ ದೇಹದ ಮೇಲೆ ಗಾಯದ ಗುರುತುಗಳಾಗಿ ಜಲಂಧರ್‌ನ ಬಸ್ತಿ ಬಾವಾ ಖೇಲ್‌ನಲ್ಲಿ ಸೋಮವಾರ ರಸ್ತೆಯ ಮೇಲೆ ಬಿದ್ದಿರುವುದು ಕಂಡುಬಂದಿತ್ತು. ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಮುನ್ನಾದಿನದಂದು ಡಿಎಸ್ಪಿ ಅವರನ್ನು ಆಟೋ ಚಾಲಕ ವಿಜಯ್ ಕುಮಾರ್ ಕಪುರ್ತಲಾದ ಅವರ ಗ್ರಾಮ ಖೋಜೆವಾಲ್‌ಗೆ ಡ್ರಾಪ್ ಮಾಡುವಂತೆ ಹೇಳಿದ ನಂತರ ಈ ಘಟನೆ ನಡೆದಿದೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಸ್ವಪನ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

    ಮಾದಕ ವ್ಯಸನಿ ಎಂದು ಆರೋಪಿಸಲಾದ ಆಟೋ ಚಾಲ ಕುಮಾರ್, ಅಷ್ಟು ದೂರ ಹೋಗಲು ನಿರಾಕರಿಸಿ ಜಗಳವಾಡಿದ್ದಾನೆ, ವಾಗ್ವಾದ ಹೆಚ್ಚಾದಾಗ ಆರೋಪಿ  ಡಿಎಸ್‌ಪಿಯವರ ಸರ್ವೀಸ್ ಪಿಸ್ತೂಲ್ ಹಿಡಿದು ಅಧಿಕಾರಿಯ ಮೇಲೆ ಗುಂಡು ಹಾರಿಸಿರುವುದಾಗಿ ಅವರು ಮಾಹಿತಿ ನೀಡಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link