ಕಠ್ಮಂಡು:
ನಾಪತ್ತೆ ಮತ್ತು ಆಶ್ರಮದಲ್ಲಿ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಬುದ್ಧನ ಅಪರಾವತಾರ ಎಂದೇ ನಂಬಿದ್ದ ಆಧ್ಯಾತ್ಮಿಕ ಗುರುವನ್ನು ಬಂಧಿಸಿರುವುದಾಗಿ ನೇಪಾಳ ಪೊಲೀಸರು ತಿಳಿಸಿದ್ದಾರೆ.
ಭಕ್ತರಿಂದ ‘ಬುದ್ಧ ಬಾಯ್’ ಎಂದು ಕರೆಯಲ್ಪಡುವ ರಾಮ್ ಬಹದ್ದೂರ್ ಬೊಮ್ಜಾನ್ ಹದಿಹರೆಯದವನಾಗಿದ್ದಾಗ ಆತ ನೀರು, ಆಹಾರ ಅಥವಾ ನಿದ್ರೆ ಇಲ್ಲದೆ ತಿಂಗಳುಗಟ್ಟಲೆ ಚಲನರಹಿತನಾಗಿ ಧ್ಯಾನ ಮಾಡುವ ಶಕ್ತಿ ಹೊಂದಿದ್ದಾರೆ ಅನುಯಾಯಿಗಳು ಹೇಳಿದ ನಂತರ ಬೊಮ್ಜಾನ್ ಹೆಚ್ಚು ಪ್ರಸಿದ್ಧನಾಗಿದ್ದನು.
33 ವರ್ಷ ವಯಸ್ಸಿನ ಗುರು ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್ನು ತಮ್ಮ ಅನುಯಾಯಿಗಳ ಮೇಲೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಬಹು ವರ್ಷಗಳಿಂದ ಅದನ್ನು ಅಧಿಕಾರಿಗಳಿಂದ ಮರೆಮಾಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಮ್ ಬಹದ್ದೂರ್ ಬೊಮ್ಜಾನ್ ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕುಬೇರ್ ಕಡಯತ್ ತಿಳಿಸಿದ್ದಾರೆ.
ರಾಜಧಾನಿಯ ದಕ್ಷಿಣದ ಜಿಲ್ಲೆಯ ಸರ್ಲಾಹಿಯಲ್ಲಿನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಹೊರಡಿಸಲಾದ ವಾರಂಟ್ನ ಆಧಾರದ ಮೇಲೆ ಪೊಲೀಸರು ಬೊಮ್ಜಾನ್ನನ್ನು ಕಠ್ಮಂಡುವಿನಲ್ಲಿ ಬಂಧಿಸಿದ್ದಾರೆ. ಬಂಧನದ ವೇಳೆ ಆತನ ಬಳಿ 30 ಮಿಲಿಯನ್ ನೇಪಾಳಿ ರೂಪಾಯಿ ($225,000) ಮೊತ್ತದ ನಗದು ಕಟ್ಟುಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.
2010ರಲ್ಲಿ ಬೊಮ್ಜಾನ್ ವಿರುದ್ಧ ಹತ್ತಾರು ಹಲ್ಲೆ ದೂರುಗಳು ದಾಖಲಾಗಿವೆ. ತಮ್ಮ ಧ್ಯಾನಕ್ಕೆ ಭಂಗ ತಂದ ಕಾರಣ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದರು. ಇನ್ನು 2018ರಲ್ಲಿ ಮಠದಲ್ಲಿ ಗುರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಸನ್ಯಾಸಿನಿಯೊಬ್ಬಳು ಆರೋಪಿಸಿದ್ದಳು.
ಬೊಮ್ಜಾನ್ ಆಶ್ರಮವೊಂದರಿಂದ ನಾಲ್ವರು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ವರದಿ ಮಾಡಿದ ನಂತರ ಪೊಲೀಸರು ಅವರ ವಿರುದ್ಧ ಮತ್ತೊಂದು ತನಿಖೆಯನ್ನು ಪ್ರಾರಂಭಿಸಿದರು. ನಾಲ್ವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ನಾಪತ್ತೆಯಾದವರು ಎಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಯದ ಹೊರತು ಅದನ್ನು ಕೊಲೆ ಎಂದು ಕರೆಯುವ ಸ್ಥಿತಿಯಲ್ಲಿಲ್ಲ ಎಂದು ಕೇಂದ್ರ ತನಿಖಾ ದಳದ ದಿನೇಶ್ ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.