ಸರ್ಕಾರ-ರೈತರ ನಡುವಿನ ಸಂಧಾನ ವಿಫಲ….!

ಚಂಡೀಗಢ:

     ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಕಿಸಾನ್ ಮಜ್ದೂರ್ ಮೋರ್ಚಾ ಮತ್ತಿತರ ಹಲವಾರು ರೈತ ಸಂಘಗಳು ಫೆಬ್ರವರಿ 13 ರಂದು ಸಂಸತ್ತಿನ ಹೊರಗೆ  ‘ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿವೆ.

    ಈ ಸಂಬಂಧ ಸೋಮವಾರ ರಾತ್ರಿ ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಅರ್ಜುನ್ ಮುಂಡಾ ಗಾಗೂ ನಿತ್ಯಾನಂದ ರೈ ಅವರು ಪಂಜಾಬ್ ಮತ್ತು ಹರಿಯಾಣದ ರೈತ ಮುಖಂಡರೊಂದಿಗೆ  ನಡೆಸಿದ ಸಭೆ ವಿಫಲವಾಗಿದ್ದು, ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯೊಂದಿಗೆ ಮುಂದುವರೆಯಲು ರೈತರು ನಿರ್ಧರಿಸಿದ್ದಾರೆ.

   ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ SKM ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, ಸಭೆ ಬಹಳ ಹೊತ್ತು ನಡೆಯಿತು. ಪ್ರತಿ ಬೇಡಿಕೆಯ ಬಗ್ಗೆ ಚರ್ಚೆಗಳು ನಡೆದವು. ಆದರೆ, ನಮ್ಮ ಅಸಹಾಯಕತೆಯಿಂದಾಗಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆಯೊಂದಿಗೆ ಮುಂದುವರೆಯುತ್ತೇವೆ ಎಂದು ತಿಳಿಸಿದರು.

   ಎಂಎಸ್‌ಪಿ ಕಾನೂನನ್ನು ತರಲು ಸರ್ಕಾರವು ನಮ್ಮೊಂದಿಗೆ ಒಪ್ಪುತ್ತಿಲ್ಲ, ಅದರ ಬಗ್ಗೆ ಸಮಿತಿಯನ್ನು ರಚಿಸಲು ಬಯಸಿದೆ ಮತ್ತು ಸಾಲ ಮನ್ನಾ ಮಾಡಲು ಅದು ನಮ್ಮೊಂದಿಗೆ ಒಪ್ಪುತ್ತಿಲ್ಲ. ನಾವು ಸರ್ಕಾರಕ್ಕೆ ಸಾಕಷ್ಟು ಸಮಯ ನೀಡಿದ್ದೇವೆ ಆದರೆ ಈಗ ನಾವು ದೆಹಲಿಗೆ ಹೋಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದರು. 

   ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಸಂಯೋಜಕ ಕೆಎಂಎಂ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, “ನಾವು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದೆಹಲಿಗೆ ಹೋಗುತ್ತೇವೆ, ಸರ್ಕಾರದ ಬಳಿ ಯಾವುದೇ ಪ್ರಸ್ತಾಪವಿಲ್ಲ. ಅಲ್ಲಿ ಪ್ರತಿಭಟನೆ ನಡೆಯಲಿದೆ. ಸಚಿವರ ಜೊತೆಗಿನ ಚರ್ಚೆಯಲ್ಲಿ ನಮ್ಮ ಪರವಾಗಿ ಏನಾದರೂ ತೀರ್ಮಾನ ಬರಬೇಕು ಎಂದು ನಾವು ಪ್ರಯತ್ನಿಸಿದ್ದೇವು. ಸರ್ಕಾರ ಯಾವಾಗ ಮಾತುಕತೆಗೆ ಕರೆದರೂ ಹೋಗುತ್ತೇವೆ ಎಂದು ತಿಳಿಸಿದರು.

   ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ಮುಂಡಾ, ಪ್ರತಿಯೊಂದು ವಿಷಯದ ಬಗ್ಗೆ ರೈತರೊಂದಿಗೆ ಗಂಭೀರ ಚರ್ಚೆ ನಡೆದಿದೆ. ಮಾತುಕತೆಯ ಮೂಲಕ ಪರಿಹಾರವನ್ನು ತರಲು ಸರ್ಕಾರ ಬಯಸಿದೆ. ಕೆಲವು ವಿಷಯಗಳ ಬಗ್ಗೆ ನಾವು ಒಪ್ಪಂದಕ್ಕೆ ಬಂದಿದ್ದೇವೆ. ಆದರೆ ಕೆಲವು ವಿಷಯಗಳಿಗೆ ನಾವು ಶಾಶ್ವತ ಪರಿಹಾರಕ್ಕಾಗಿ ಸಮಿತಿಯನ್ನು ಮಾಡಬೇಕೆಂದು ಹೇಳಿದ್ದೇವೆ. ಯಾವುದೇ ಸಮಸ್ಯೆಯನ್ನು ಚರ್ಚೆಯಿಂದ ಪರಿಹರಿಸಬಹುದು. ನಾವು ಪರಿಹಾರಗಳನ್ನು ತರುತ್ತೇವೆ ಎಂಬ ಭರವಸೆ ನಮಗಿದೆ.  ನಮ್ಮ ಉದ್ದೇಶವೆಂದರೆ ರೈತರು ಮತ್ತು ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವುದಾಗಿದೆ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link