ಡೆಹ್ರಾಡೂನ್:
ಯಮುನೋತ್ರಿ ಹೆದ್ದಾರಿಯ ಸಿಲ್ಕ್ಯಾರಾ ಸುರಂಗದ ಬಳಿ ಶಾಟ್‌ಕ್ರೀಟ್ ಯಂತ್ರ ಪಲ್ಟಿಯಾಗಿ ಯಂತ್ರದ ಅಪರೇಟರ್ ಮೃತಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಭಾನುವಾರ ಸಂಜೆ 8 ಗಂಟೆ ಸುಮಾರಿಗೆ ಶಾಟ್‌ಕ್ರೀಟ್ ಯಂತ್ರದ ಅಪರೇಟರ್ ಗೋವಿಂದ್ ಕುಮಾರ್ ಅವರು ಸಿಲ್ಕ್ಯಾರಾ ಸುರಂಗದಿಂದ ಸುಮಾರು 150 ಮೀಟರ್ ದೂರದಲ್ಲಿರುವ ಸಿಲ್ಕ್ಯಾರಾ ವಂಗಾವ್ ಮೋಟಾರು ಮಾರ್ಗದಲ್ಲಿ ಯಂತ್ರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಯಂತ್ರ ಪಲ್ಟಿಯಾಗಿ ಗೋವಿಂದ್ ರಸ್ತೆಯಿಂದ 20 ರಿಂದ 25 ಮೀಟರ್ ಕೆಳಗೆ ಬಿದ್ದಿದ್ದಾನೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ್ ಕುಮಾರ್ ಅವರನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 24 ವರ್ಷದ ಗೋವಿಂದ್ ಕುಮಾರ್ ದಿದಿಹತ್ ಪಿಥೋರಗಢ ನಿವಾಸಿಯಾಗಿದ್ದಾನೆ.
ಹೋಳಿ ದಿನದಂದು ನಡೆದ ಈ ಅವಘಡದಿಂದ ಸಿಲ್ಕ್ಯಾರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೃತ ಗೋವಿಂದ್ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಹೊರಠಾಣೆ ಪ್ರಭಾರಿ ಗೆನ್ವಾಲಾ ಜಿ.ಎಸ್.ತೋಮರ್ ತಿಳಿಸಿದ್ದಾರೆ.