-ವಿಜಿಲ್ ಆ್ಯಪ್ : 79,000 ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು

ನವದೆಹಲಿ:

    ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಸಿ-ವಿಜಿಲ್ ಆ್ಯಪ್ ಮೂಲಕ 79,000 ಕ್ಕೂ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆಯ ದೂರು ಸ್ವೀಕರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. 

    ಸ್ವೀಕರಿಸಲಾದ ದೂರುಗಳ ಪೈಕಿ ಶೇ.90 ಕ್ಕಿಂತ ಹೆಚ್ಚಿನ ದೂರುಗಳನ್ನು ಪರಿಹರಿಸಲಾಗಿದೆ. ಶೇ. 89 ರಷ್ಟು ದೂರುಗಳನ್ನು 100 ನಿಮಿಷಗಳಲ್ಲಿ ಬಗೆಹರಿಸಲಾಗಿದೆ. ಅಕ್ರಮ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧ 58,500 ಕ್ಕೂ ಹೆಚ್ಚು ದೂರುಗಳುಸ್ವೀಕರಿಸಲ್ಪಟ್ಟಿವೆ, ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1,400 ಕ್ಕೂ ಹೆಚ್ಚು ದೂರುಗಳು ಬಂದಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ. 

    ಶೇ. 3 ರಷ್ಟು ಅಂದರೆ 2,454 ದೂರುಗಳು ಆಸ್ತಿ ಹಾನಿಗೆ ಸಂಬಂಧಿಸಿದೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ 535 ದೂರುಗಳು ಬಂದಿದ್ದು, 529 ದೂರುಗಳನ್ನು ಪರಿಹರಿಸಲಾಗಿದೆ. ಅನುಮತಿ ಅವಧಿ ಮೀರಿ ಸ್ಪೀಕರ್ ಬಳಕೆಗೆ ಸಂಬಂಧಿಸಿದ ದೂರುಗಳು ಸೇರಿದಂತೆ ಅವಧಿ ಮೀರಿದ ಪ್ರಚಾರಕ್ಕಾಗಿ ಒಟ್ಟು 1,000 ದೂರುಗಳು ಬಂದಿರುವುದಾಗಿ ಚುನಾವಣಾ ಸಮಿತಿ ಹೇಳಿದೆ.

    ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಲ್ಲಿ ಯಾವುದೇ ರೀತಿಯ ಪ್ರಚೋದನೆಗಳ ಬಗ್ಗೆ ವರದಿ ಮಾಡಲು ಆ್ಯಪ್ ಬಳಸಬೇಕೆಂದು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದನ್ನು ಚುನಾವಣಾ ಆಯೋಗ ಉಲ್ಲೇಖಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link