ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹಳ್ಳಿಹಕ್ಕಿ ನುಡಿದ ಭವಿಷ್ಯ ಏನು ಗೊತ್ತಾ….?

ಮೈಸೂರು

    ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮೈತ್ರಿಯಾಗಿರುವ ಬಿಜೆಪಿ-ಜೆಡಿಎಸ್‌ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಚುನಾವಣಾ ಕಾವು ಜೋರಾಗಿದೆ. ಇತ್ತ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್‌ ವಿಶ್ವನಾಥ ಹೇಳಿದ್ದಾರೆ.

   ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೈಸೂರಲ್ಲಿ ಯಾರು ಗೆಲ್ಲುತ್ತಾರೆ ಅಂತ ಕೇಳಿದರೆ ಅವರು ಮಹಾರಾಜರು ಯದುವೀರ್ ಕೃಷ್ಣದತ್ ಒಡೆಯರ್ ಗೆಲ್ಲುತ್ತಾರೆ ಹಾಗೂ ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಅವರು ಗೆಲ್ಲುತ್ತಾರೆ ಎಂದು ಹೇಳಿದರು.

    ನಾನು ಬಿಜೆಪಿ ಎಂಎಲ್‌ ಸಿ ಕೂಡ ಹೌದು. ಕಾಂಗ್ರೆಸ್ ಟಿಕೆಟ್ ಕೇಳಿದ್ದು ನಿಜ. ಪಕ್ಷ ರಾಜಕಾರಣ ಎಂಬುದು ಸತ್ತು ಬಹಳ ವರ್ಷಗಳು ಆಯಿತು. ಇವತ್ತು ಏನಿದ್ದರೂ ವ್ಯಕ್ತಿ ರಾಜಕಾರಣ, ಇತ್ತೀಚೆಗೆ ವ್ಯಕ್ತಿ ರಾಜಕಾರಣ ವೈಭವೀಕರಣ ಆಗುತ್ತಿದೆ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.

   ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಪ್ರಚಾರಕ್ಕೆ ಹೋಗುತ್ತೇನೆ. ಯದುವೀರ್ ಒಡೆಯರ್ಗೆ ಬಿಜೆಪಿ ಟಿಕೆಟ್ ಕೊಟ್ಟ ಬಳಿಕ, ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ರಾಜಕಾರಣ ಎಂಬುದು ನಿಂತ ನೀರಲ್ಲ. ಹರಿಯುವ ಗಂಗೆ. ಯದುವೀರ್ ಮತ ಹಾಕಿ ಮಹಾರಾಜರ ಋಣ ತೀರಿಸಬೇಕು , ಒಂದು ವೋಟನ್ನ ಯದುವೀರ್ ಗೆ ಹಾಕುವ ಮೂಲಕ ಮಹರಾಜರ ಋಣ ತೀರಿಸಬೇಕು ಎಂದು ಮಾಧ್ಯಮಗಳ ಮೂಲಕ ತಿಳಿಸಿದರು.

   ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಬಹಳ ಎತ್ತರದ ನಾಯಕ, ಅವರ ಬಗ್ಗೆ ಮಾತಾಡುವಷ್ಟು ದೊಡ್ಡವ ತಾನಲ್ಲ, ಅವರಿಗೆ ಹಲವಾರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಅದರೆ ಅದು ಸಾಧ್ಯವಾಗಲಿಲ್ಲ ಅನ್ನುತ್ತಾರೆ. ಅಂದರೆ ಅವರು ತಮ್ಮ ಮತವನ್ನು ಕಾಂಗ್ರೆಸ್ ಪರವೂ ಚಲಾಯಿಸುತ್ತಾರೆ‌ ಈಗ ಹೇಳಿ ಅವರಿಗಿಂತ ಮಿಗಿಲಾದ ಪಕ್ಷಾತೀತ ರಾಜಕಾರಣಿ ಸಿಗೋದು ಸಾಧ್ಯವೇ? ಎಂದು ಪ್ರಶ್ನಿಸಿದರು.

   5,8,9ನೇ ತರಗತಿ ಬೋರ್ಡ್ ಪರೀಕ್ಷೆ ಕಾನೂನು ಬಾಹಿರ. ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆ ಮೂಲಕ ಎರಡನೇ ಬಾರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಿಂದ ಚೀಮಾರಿ ಹಾಕಿಸಿಕೊಂಡಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕೂಡ ಇದನ್ನೇ ಮಾಡಿತ್ತು, ಈಗ ಕಾಂಗ್ರೆಸ್ ಸರ್ಕಾರ ಕೂಡ ಇದೆ ನೀತಿ ಅನುಸರಿಸಿದೆ. ಪ್ರಶ್ನೆ ಪತ್ರಿಕೆಯಲ್ಲಿಯೂ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಟೆಂಡರ್ ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಪರೀಕ್ಷೆಯ ಪಾವಿತ್ರತೆಯನ್ನ ಸರ್ಕಾರ ಹಾಳು ಮಾಡಿದೆ. ಹಲವು ವಿನೂತನ ಕಾರ್ಯಕ್ರಮ ಮೂಲಕ ನಾವು ಮೊದಲಿದ್ದೆವು, ಇತ್ತೀಚಿನ ದಿನಗಳಲ್ಲಿ ತೀರ ಕೆಳಗಡೆ ಹೋಗಿದ್ದೇವೆ.

   ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಫಲರಾಗಿದ್ದಾರೆ. ಈಗಲಾದರೂ ಸರ್ಕಾರ ತನ್ನ ಒಣ ಪ್ರತಿಷ್ಠೆ ಬಿಟ್ಟು ಪರೀಕ್ಷೆಗಳನ್ನ ರದ್ದು ಮಾಡಬೇಕು, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಚೀಮಾರಿ ಹಾಕಿದೆ. ಕೂಡಲೇ ಶಿಕ್ಷಣ ಸಚಿವರನ್ನ ಬದಲಾಯಿಸಿ. ಶಿಕ್ಷಣ ಗ್ಯಾರಂಟಿ ಮಕ್ಕಳಿಗೆ ತುಂಬಾ ಮುಖ್ಯ, ಸರ್ಕಾರ ಶಾಲಾ ಶಿಕ್ಷಣದ ಗ್ಯಾರಂಟಿ ಕೂಡ ನೀಡಬೇಕು. NEP ಉಲ್ಲಂಘನೆ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ಹೆಚ್‌ ವಿಶ್ವನಾಥ್‌ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link