ಮನೆಯಲ್ಲಿ ಮಾಡಲೇಬಾರದ ತಪ್ಪುಗಳೇನು ಗೊತ್ತಾ….?

ತುಮಕೂರು : 

    ಮನೆಯ ಯಾವುದೇ ಹೊಸ್ತಿಲು ಲಕ್ಷ್ಮೀ ದೇವಿ ಮನೆಯನ್ನು ಪ್ರವೇಶಿಸುವ ಪವಿತ್ರ ಸ್ಥಳವಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಮತ್ತು ಹೊಸ್ತಿಲ ಮೇಲೆ ನಿಲ್ಲಬಾರದು ಅಂತಾ ಹೇಳಲಾಗುತ್ತದೆ.

    ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸಲು ಅಡ್ಡಿಯಾಗಿ, ಮನೆಯಲ್ಲಿ ದರಿದ್ರ ಉಂಟಾಗುತ್ತದೆ ಅಂತಾ ಹಿರಿಯರು ಹೇಳುತ್ತಾರೆ. ಹಾಗಾದ್ರೆ ನಾವು ಮುಖ್ಯ ದ್ವಾರ ಮತ್ತು ಹೊಸ್ತಿಲ ಬಳಿ ಎಂಥ ತಪ್ಪು ಮಾಡಬಾರದು.

    ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು, ನಿಲ್ಲಬಾರದು. ಈ ಮೊದಲೇ ಹೇಳಿದಂತೆ ಲಕ್ಷ್ಮೀ ಬರುವ ಜಾಗವಾದ ಹೊಸ್ತಿಲ ಮೇಲೆ ಕೂರಬಾರದು ಮತ್ತು ನಿಲ್ಲಬಾರದು. ಕೆಲವು ಹೆಂಗಸರಿಗೆ ಸಂಜೆಯಾಗುತ್ತಿದ್ದಂತೆ, ಮನೆಯ ಮುಖ್ಯದ್ವಾರದ ಬಳಿ ಕುಳಿತು, ಹರಟೆ ಹೊಡೆಯುವ ಚಟವಿರುತ್ತದೆ. ಅಂಥ ಮನೆಯಲ್ಲಿ ಎಂದಿಗೂ ಸಂಪತ್ತು ಬರಲು ಸಾಧ್ಯವಿಲ್ಲ. ಅಂಥವರೆಂದೂ ಉದ್ಧಾರವಾಗಲು ಸಾಧ್ಯವಿಲ್ಲ.

   ಹೊಸ್ತಿಲನ್ನು ಎಂದಿಗೂ ಖಾಲಿ ಬಿಡಬಾರದು. ಹೊಸ್ತಿಲು ಮನೆಯ ಪವಿತ್ರ ಜಾಗ. ಹಾಗಾಗಿ ಪ್ರತಿದಿನ ಮುತ್ತೈದೆ ಆ ಹೊಸ್ತಿಲನ್ನು ಒರೆಸಿ, ರಂಗೋಲಿ ಬಿಡಿಸಿ, ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವಿಟ್ಟು, ನೀರನ್ನು ನೈವೇದ್ಯ ಮಾಡಿ, ನಮಸ್ಕರಿಸಬೇಕು. ಮತ್ತು ಅದೇ ನೀರನ್ನು ತುಳಸಿ ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

  ಮುಖ್ಯದ್ವಾರದ ಬಳಿ ಚಪ್ಪಲಿಗಳನ್ನು ಬಿಡಬಾರದು. ಕೆಲವರು ಮನೆಯ ಮುಂದೆಯೇ ಚಪ್ಪಲಿ, ಬೂಟು ಬಿಡುತ್ತಾರೆ,. ಹೀಗೆ ಮಾಡುವುದರಿಂದ ನೀವೇ ನಿಮ್ಮ ಮನೆಗೆ ಲಕ್ಷ್ಮೀ ಬರುವುದನ್ನು ತಪ್ಪಿಸುತ್ತಿದ್ದೀರಿ ಎಂದರ್ಥ. ಅಂಥ ಮನೆಯಲ್ಲಿ ಸದಾ ನಕಾರಾತ್ಮಕತೆ ಇರುತ್ತದೆ. ಹಾಗಾಗಿ ಮನೆಯ ಮುಂದೆ ಚಪ್ಪಲಿಗಳನ್ನು ಬಿಡಬೇಡಿ. ಚಪ್ಪಲಿ ಇಡಲೆಂದೇ ಪಕ್ಕದಲ್ಲಿ ಒಂದು ಜಾಗ ಮಾಡಿ, ಅಲ್ಲಿ ಚಪ್ಪಲಿ ಇರಿಸಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link