ಆಂಧ್ರ ಪ್ರದೇಶ :
ನಟ ಪವನ್ ಕಲ್ಯಾಣ್ ಅವರ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಿನ್ನೆಯಷ್ಟೇ ರ‍್ಯಾಲಿ ನಡೆಸುತ್ತಿದ್ದ ಆಂಧ್ರ ಸಿಎಂ ಜಗ ಮೇಲೆ ಅಪರಿಚಿತರು ಕಲ್ಲೆಸೆದು ದಾಳಿ ನಡೆಸಿದ್ದರು. ಈ ಪ್ರಕರಣದ ಬೆನ್ನಲ್ಲೇ ಇಂದು ನಟ ಪವನ್ ಕಲ್ಯಾಣ್ ಮೇಲೆ ಕಲ್ಲುತೂರಾಟ ನಡೆದಿದೆ.
ಗುಂಟೂರು ಜಿಲ್ಲೆಯ ತೆನಾಲಿಗೆ ಭೇಟಿ ನೀಡಿ ವಾರಾಹಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪವನ್ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆದಿದ್ದಾನೆ. . ಅದೃಷ್ಟವಶಾತ್ ಕಲ್ಲು ಬೇರೆಡೆ ಬಿದ್ದಿದ್ದು ಪವನ್ ಅವಘಡದಿಂದ ಪಾರಾಗಿದ್ದಾರೆ.