ಪ್ರಧಾನಮಂತ್ರಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮ : ದೆಹಲಿ ಹೈಕೋರ್ಟ್

ನವದೆಹಲಿ:

   ದೇಶದ ಪ್ರಧಾನಮಂತ್ರಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮವಾಗಿದ್ದು, ಇದು ಅತ್ಯಂತ ಗಂಭೀರ ಅಪರಾಧ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

   ಪ್ರಧಾನಮಂತ್ರಿ ವಿರುದ್ಧ ಯಾರೋ ಪಿತೂರಿ ನಡೆಸಿದ್ದಾರೆ ಎಂಬುದಾಗಿ ಬೇಜವಾಬ್ದಾರಿಯ ಆರೋಪ ಮಾಡಲಾಗದು. ಅಂತಹ ಆರೋಪ ಸಮರ್ಪಕ ಮತ್ತು ಪೊಳ್ಳಾದ ಕಾರಣಗಳನ್ನು ಆಧರಿಸಿರಬೇಕು.

   ದೇಶದ ಪ್ರಧಾನಮಂತ್ರಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮವಾಗಿದ್ದು, ಇದು ಅತ್ಯಂತ ಗಂಭೀರ ಅಪರಾಧವಾಗಿದೆ ಎಂದು ದೆಹಲಿ ಹೈಕೋರ್ಟ್ ಬುಧವಾರ ಮೌಖಿಕವಾಗಿ ತಿಳಿಸಿದೆ. ವಕೀಲ ಜೈ ಅನಂತ್ ದೇಹದ್ರಾಯಿ ವಿರುದ್ಧ ಬಿಜು ಜನತಾ ದಳ ಸಂಸದ ಮತ್ತು ಹಿರಿಯ ವಕೀಲ ಪಿನಾಕಿ ಮಿಶ್ರಾ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯವು ಈ ಮೌಖಿಕ ಅವಲೋಕನ ಮಾಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು, ‘ಪ್ರಧಾನಿಯನ್ನು ಗುರಿಯಾಗಿಸಿಕೊಂಡ ಪಿತೂರಿ ಐಪಿಸಿ ಅಡಿಯಲ್ಲಿ ಅಪರಾಧ. ಇದು ದೇಶದ್ರೋಹ” ಎಂದು ಹೇಳಿದ್ದಾರೆ.

   ವಕೀಲ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಸಂಚು ನಡೆಸುತ್ತಿದ್ದಾರೆ ಎಂದು ದೇಹ್ರದಾಯ್‌ ಆರೋಪಿಸಿದ್ದರು. ಆಗ ನ್ಯಾಯಾಲಯ ದೇಹ್ರದಾಯ್‌ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಚಲಾಯಿಸಿದರೆ ತೊಂದರೆ ಇಲ್ಲ.

   ಆದರೆ ಅವರು ಹೇಳುತ್ತಿರುವುದು ದೇಶದ ಅತ್ಯುನ್ನತ ಹುದ್ದೆಯ ಮೇಲೆ ಪ್ರಭಾವ ಬೀರುವುದರಿಂದ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಿನಾಕಿ ಮಿಶ್ರಾ ಪಿತೂರಿ ನಡೆಸುತ್ತಿದ್ದಾರೆ ಎಂದು ದೇಹ್ರದಾಯ್‌ ಹೇಗೆ ಆರೋಪಿಸುತ್ತಿದ್ದಾರೆ.

   ಪ್ರಧಾನಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮನಾಗಿದ್ದು ಮಿಶ್ರಾ ವಿರುದ್ಧದ ಅಂತಹ ಆರೋಪ ಸಾಬೀತುಪಡಿಸಲು ದೇಹದ್ರಾಯ್‌ ಅವರಿಗೆ ಸಾಧ್ಯವಾಗದಿದ್ದರೆ ತಾನು ತಡೆಯಾಜ್ಞೆ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಇದೇ ವೇಳೆ ಎಚ್ಚರಿಕೆ ನೀಡಿತು. 

    ಅಂತೆಯೇ ಪ್ರಧಾನಿ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತಮಾಷೆ ಆರೋಪವನ್ನು ಪುರಸ್ಕರಿಸಲು ಅನುಮತಿಸಲಾಗದು. ಮಿಶ್ರಾ ಅವರು ರಾಜಕಾರಣಿ ಹಾಗೂ ಪ್ರತಿಷ್ಠಿತ ವಕೀಲರು. ದೇಹದ್ರಾಯ್‌ ಕೂಡ ವಕೀಲ ಸಮುದಾಯದ ಗೌರವಾನ್ವಿತ ಸಮುದಾಯದ ಸದಸ್ಯರು. ಅವರು ಮಿಶ್ರಾ ವಿರುದ್ಧ ಹೀಗೆ ಆರೋಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link