ಮುಂಬೈ:
ಬಿಜೆಪಿಯ ಒತ್ತಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಣಿದಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಸುರೇಶ್ ನವಲೆ ಅವರು ಶಿಂಧೆ ನೇತೃತ್ವದ ಶಿವಸೇನೆಗೆ ರಾಜೀನಾಮೆ ನೀಡಿದ್ದಾರೆ.
ನವಲೆ ಅವರು ತಾವು ಯಾವುದೇ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ(ಎಸ್‌ಪಿ) ಬೀಡ್ ಅಭ್ಯರ್ಥಿ ಬಜರಂಗ್ ಸೋನಾವಾನೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಸೋಮವಾರ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಬೀಡ್ ಮೂಲದ ಸುರೇಶ್ ನವಲೆ ಅವರು, ಏಪ್ರಿಲ್ 25 ರಂದೇ ತಾವು ಶಿವಸೇನೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
“ಮುಖ್ಯಮಂತ್ರಿಯು ಬಿಜೆಪಿಯ ಒತ್ತಡಕ್ಕೆ ಮಣಿದಿದ್ದಾರೆ ಎಂಬುದು ನನ್ನ ಆರೋಪ. ಅವರು ಹಿಂದೆ ಶಿವಸೇನಾ ವಿರುದ್ಧ ಬಂಡಾಯವೆದ್ದು ಸರ್ಕಾರ ರಚಿಸಿದರು. ಆದರೆ ಅದೇ ಉತ್ಸಾಹದಲ್ಲಿ ಬಿಜೆಪಿಯ ಒತ್ತಡವನ್ನು ವಿರೋಧಿಸಲಿಲ್ಲ ಎಂದು ನವಲೆ ಆರೋಪಿಸಿದ್ದಾರೆ.
2019 ರಲ್ಲಿ, ಅಂದಿನ ಅವಿಭಜಿತ ಶಿವಸೇನೆ ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ 22 ರಲ್ಲಿ ಸ್ಪರ್ಧಿಸಿ 18 ರಲ್ಲಿ ಜಯಗಳಿಸಿತು.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(ಯುಬಿಟಿ) ಈ ಬಾರಿ ರಾಜ್ಯದಲ್ಲಿ 21 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಆದರೆ ಶಿಂಧೆ ನೇತೃತ್ವದ ಶಿವಸೇನೆ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುತ್ತಿದೆ ಎಂದು ನವಲೆ ಹೇಳಿದ್ದಾರೆ.