ಭಾರೀ ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್……!

ಬ್ರೆಜಿಲ್:‌

    ಭಾರೀ ಪ್ರವಾಹದಿಂದ ಬ್ರೆಜಿಲ್‌ ತತ್ತರಿಸಿಹೋಗಿದ್ದು, ದಕ್ಷಿಣ ರಿಯೊ ಗ್ರಾಂಡೆ ಡೊ ಸುಲ್‌ ರಾಜ್ಯದಲ್ಲಿ‌ ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ 90ಕ್ಕೆ ಏರಿಕೆಯಾಗಿದೆ.

    ಪ್ರವಾಹದ ಪರಿಣಾಮ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ, ಮನೆ-ವಸ್ತುಗಳನ್ನು ಕಳೆದುಕೊಂಡವರು ನೀರು ಹಾಗೂ ಆಹಾರಕ್ಕಾಗಿ ಸಂಕಷ್ಟ ಪಡುತ್ತಿದ್ದಾರೆ.

   ಇನ್ನೂ ಹಲವು ಜನರು ಪ್ರವಾಹ ಪೀಡಿತ ಪ್ರದೇಶದಲ್ಲಿಯೇ ಉಳಿದ್ದು, ದೋಣಿ ಹಾಗೂ ಹೆಲಿಕಾಪ್ಟರ್ ಗಳ ಮೂಲಕ ಸ್ಥಳಾಂತರಗೊಳ್ಳಲು ಕಾಯುತ್ತಿದ್ದಾರೆ. ಪ್ರವಾಹದ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿದ್ದು, ಆಪತ್ತಿನಲ್ಲಿ ಸಿಲುಕಿದವರನ್ನು ಸಣ್ಣ ದೋಣಿಗಳ ಮೂಲಕ ರಕ್ಷಿಸಬೇಕಾಗಿದೆ. 

   ಈ ನಡುವೆ ಪ್ರವಾಹದ ಪರಿಣಾಮ ಈ ವರೆಗೂ 90 ಮಂದಿ ಸಾವನ್ನಪ್ಪಿದ್ದಾರೆಂದು ಅದಿಕಾರಿಗಳು ಮಾಹಿತಿ ನೀಡಿದ್ದು, 131 ಮಂದಿ ಇನ್ನೂ ಪತ್ತೆಯಾಗಿಲ್ಲ. 1,55,000 ಮಂದಿ ನಿರಾಶ್ರಿತರಾಗಿದ್ದಾರೆಂದು ಹೇಳಿದ್ದಾರೆ.

    ರಾಜ್ಯ ರಾಜಧಾನಿ ಪೋರ್ಟೊ ಅಲೆಗ್ರೇಯಿಂದ 17 ಕಿಲೋ ಮೀಟರ್‌ ದೂರದಲ್ಲಿರುವ ಎಲ್‌ ಡೊರಾಡೊ ಡೊ ಸುಲ್‌ ನಲ್ಲಿ ಜನರು ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಕಳೆದ ಮೂರು ದಿನಗಳಿಂದ ನಮಗೆ ಏನೂ ಆಹಾರ ಸಿಕ್ಕಿಲ್ಲ, ಕೇವಲ ಬ್ಲಾಂಕೆಟ್‌ ಮಾತ್ರ ಸಿಕ್ಕಿದ್ದು, ನನ್ನ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಯುವಕ ರಿಕಾರ್ಡೋ ಜ್ಯೂನಿಯರ್‌ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link