ಮಂಗಳೂರು:
ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದ ಪ್ರಯಾಣಿಕ ಪ್ರಯಾಣದ ವೇಳೆ ದುರ್ವರ್ತನೆ ತೋರಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಕೇರಳದ ಕಣ್ಣೂರು ನಿವಾಸಿ ಮುಹಮ್ಮದ್ ಬಿ.ಸಿ ಎಂಬಾತ ವಿಮಾನದಲ್ಲಿ ದುರ್ವರ್ತನೆ ತೋರಿದವನು. ಮೇ 8 ರಂದು ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವಿಮಾನದ ಸಿಬ್ಬಂದಿಯೊಂದಿಗೆ ಈತ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದನು. ಜೊತೆಗೆ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ್ದನು.
ಆತನ ನಡವಳಿಕೆಯು ಇತರ ಪ್ರಯಾಣಿಕರಿಗೆ ಆತಂಕ ಸೃಷ್ಟಿಸಿತ್ತು. ಅದರಂತೆ ಮಂಗಳೂರಿಗೆ ವಿಮಾನ ಬಂದಿಳಿದ ಕೂಡಲೇ ಆತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನ ಜೊತೆಗೆ ಬಜ್ಪೆ ಠಾಣೆಗೆ ಹಸ್ತಾಂತರಿಸಿದ್ದಾರೆ. ಅದರಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ