ನನ್ನ ಹುಟ್ಟು ಹಬ್ಬ ಆಚರಿಸಬೇಡಿ : ಡಿಸಿಎಂ

ಬೆಂಗಳೂರು: 

    ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮೇ 15ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ತಮ್ಮ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಒತ್ತಾಯಿಸಿದ್ದಾರೆ.

  ತಮ್ಮ ಜನ್ಮದಿನದಂದು ಲೋಕಸಭೆ ಚುನಾವಣೆಗೆ ಉತ್ತರ ಭಾರತದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿರುವುದಾಗಿ ತಿಳಿಸಿದ್ದಾರೆ. 

    ಕರ್ನಾಟಕದಲ್ಲಿ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಮತ್ತು ಅವುಗಳಲ್ಲಿ 196 ಅನ್ನು ತೀವ್ರ ಬರ ಪೀಡಿತ ಎಂದು ವರ್ಗೀಕರಿಸಲಾಗಿದೆ. 

    ‘ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೇ 15 ರಂದು ನನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ನನ್ನ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ನಾನು ಕೋರುತ್ತೇನೆ. ದಯವಿಟ್ಟು ಈ ವರ್ಷ ನನ್ನ ಜನ್ಮದಿನದಂದು ಯಾವುದೇ ಕಟೌಟ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಹಾಕಬೇಡಿ ಅಥವಾ ಹುಟ್ಟುಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಬೇಡಿ. ನೀವು ಎಲ್ಲಿದ್ದರೂ ನಿಮ್ಮ ಹಾರೈಕೆ, ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಸಾಕು’ ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ತಮ್ಮ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ನಾನು ಇರುವುದಿಲ್ಲ ಮತ್ತು ಚುನಾವಣಾ ಪ್ರಚಾರಕ್ಕಾಗಿ ಉತ್ತರ ಭಾರತದಲ್ಲಿ ಇರುತ್ತೇನೆ. ಆದ್ದರಿಂದ, ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ನನ್ನ ಹುಟ್ಟುಹಬ್ಬದಂದು ನನ್ನ ನಿವಾಸ ಅಥವಾ ಕಚೇರಿಗೆ ಭೇಟಿ ನೀಡದಂತೆ ವಿನಂತಿಸುತ್ತೇನೆ. ನೀವು ಎಲ್ಲಿದ್ದರೂ ಅಲ್ಲಿಂದಲೇ ನನಗೆ ವಿಶ್ ಮಾಡಿ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link