SSLC ಪರೀಕ್ಷೆ-2 ಪರೀಕ್ಷೃತ ವೇಳಾ ಪಟ್ಟಿ ಬಿಡುಗಡೆ …..!

ಬೆಂಗಳೂರು :

   ಶಿಕ್ಷಕರ ಬೇಸಿಗೆ ರಜೆದಿನಗಳು ಮೊಟಕುಗೊಳ್ಳುತ್ತವೆ ಎಂದು ಇತ್ತೀಚೆಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಅನುತ್ತೀರ್ಣರಾದವರಿಗೆ ವಿಶೇಷ ತರಗತಿ ಮುಂದೂಡಿತ್ತು.

    ಈ ಹಿನ್ನೆಲೆಯಲ್ಲಿ ಪರೀಕ್ಷೆ 2 ಗೆ ಪರಿಷ್ಕೃತ ವೇಳಾಪಟ್ಟಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ಇದೀಗ ಮಂಡಲಿಯು ಜೂನ್‌ ತಿಂಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ

   ಈ ಹಿಂದೆ 07-06-2024 ರಿಂದ 14-06-2024 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ನಡೆಸಲು ದಿನಾಂಕ ನಿಗದಿಮಾಡಲಾಗಿತ್ತು. ಇದೀಗ ಹೊಸ ವೇಳಾಪಟ್ಟಿ ಪ್ರಕಾರ ದಿನಾಂಕ 14-06-2024 ರಿಂದ 22-06-2024 ರವರೆಗೆ ನಡೆಸಲು ತೀರ್ಮಾನಿಸಿ ಮಂಡಲಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವಿಷಯವಾರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕಗಳು ಕೆಳಗಿನಂತಿವೆ.

 

ಎಸ್ಎಸ್‌ಎಲ್‌ಸಿ ಪರೀಕ್ಷೆ-2 2024 ಪರಿಷ್ಕೃತ ವೇಳಾಪಟ್ಟಿ

  • 14-06-2024 : ಪ್ರಥಮ ಭಾಷೆ – ಕನ್ನಡ, ಇಂಗ್ಲಿಷ್, ಹಿಂದಿ, ಇತರೆ.
  • 15-06-2024 : ತೃತೀಯ ಭಾಷೆ – ಹಿಂದಿ / ಕನ್ನಡ / ಇಂಗ್ಲಿಷ್ ಇತರೆ.
  • 18-06-2024 : ಗಣಿತ
  • 20-06-2024 : ವಿಜ್ಞಾನ
  • 21-06-2024 : ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ.
  • 22-06-2024 : ಸಮಾಜ ವಿಜ್ಞಾನ

   ಈ ಮೇಲಿನ ಎಲ್ಲಾ ವಿಷಯಗಳ ಪರೀಕ್ಷೆಗಳು ನಿಗದಿತ ದಿನಾಂಕಗಳಂದು ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 1-15 ರವರೆಗೆ ನಡೆಯಲಿವೆ. 24-06-2024 ರಂದು ಜಿಟಿಎಸ್‌ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿಯೇ ನಡೆಸಲಾಗುತ್ತದೆ.

Recent Articles

spot_img

Related Stories

Share via
Copy link