1980 ರಲ್ಲೇ ಮಹಾನುಭಾವರಿಂದ CD ಫ್ಯಾಕ್ಟರಿ ಓಪನ್ : ಕುಮಾರಸ್ವಾಮಿ

ಮೈಸೂರು: 

    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಬಳಿ ಇರುವವರೆಲ್ಲ ಭಯೋತ್ಪಾದಕರು, ನನಗೆ ಡಿಕೆ ಶಿವಕುಮಾರ್ ಕಂಡರೆ ಅಸೂಯೆ ಎಂದು ಹೇಳಿದ್ದಾರೆ. ನಾನು ಯಾಕೆ ಅವರನ್ನು ನೋಡಿ ಅಸೂಯೆ ಪಡಲಿ? ವಿಡಿಯೋ ಮಾಡಿರುವುದು ಒಂದು ಭಾಗ, ವಿಡಿಯೋವನ್ನು ಚುನಾವಣೆಗಾಗಿ ವಿತರಿಸಿದ್ದು ಅಪರಾಧ ಅಲ್ವಾ? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿರೋಧಿಗಳಿಗೆ ತೊಂದರೆ ಕೊಡುವುದು. ದ್ವೇಷದ ರಾಜಕಾರಣ ಮಾಡುವುದಷ್ಟೆ ಸರ್ಕಾರದ ಕೆಲಸ ಆಗಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ಮೇ 30 ರಂದು ಹಾಸನದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತರನ್ನು ಪ್ರತಿಭಟನೆಗೆ ಕರೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಹೇಳಿದ್ದರೆ ನಾನೇ ಒಂದಿಷ್ಟು ಮಹಿಳೆಯರನ್ನು ಪ್ರತಿಭಟನೆಗೆ ಕಳುಹಿಸುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.

   ನಾನು ಸಂಸದ ಪ್ರಜ್ವಲ್ ರೇವಣ್ಣ ಪರವಾಗಿ ಇಲ್ಲ. ಆತನ ತಪ್ಪು ಸಾಬೀತಾದರೆ ಶಿಕ್ಷೆ ಕೊಡಿ. ಮುಖ್ಯಮಂತ್ರಿಗಳೇ ಅಧಿಕಾರ ಶಾಶ್ವತವಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನವಾಗಿದೆ. ಪೊಲೀಸರ ರಕ್ಷಣೆಯಲ್ಲಿ ಎಂಟು ಜನ ಸೇರಿದಂತೆ ಕಾರ್ತಿಕ್ ಸಹ ಇದ್ದಾನೆ. ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ತೋರಿಸಿಲ್ಲ? ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ ಹೇಳಿ? ಎಂದು ಪ್ರಶ್ನಿಸಿದ್ದಾರೆ.

   ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದರು. ಅಧಿಕಾರ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳು ಬೀಳು ಅದು ಭಗವಂತನ ಇಚ್ಚೆ. ಇದರಲ್ಲಿ ಅಸೂಯೆ ಯಾಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮ್ಮದು. ಎಲ್ಲ ಅಧಿಕಾರವನ್ನು ನಾವು ನೋಡಿಯಾಗಿದೆ. ನಮಗೆ ಅಧಿಕಾರ ಬೇಡ ಅಂದರೂ ಬಂದಿದೆ. ನಾವು ಅಧಿಕಾರ ಹುಡುಕಿಕೊಂಡು ಹೋಗಿಲ್ಲ. ನಿಮಗೆ ಇದು ಗೊತ್ತಿರಲಿ ಎಂದರು.

   ಪೆನ್ ಡ್ರೈವ್ ಮೂಲ ವ್ಯಕ್ತಿ ಕಾರ್ತಿಕ್. ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿಕೆ ಸುರೇಶ್‌ ಬಳಿಗೆ ಮೊದಲು ಹೋಗಿದ್ದನು. ನಂತರ ವಿಡಿಯೋಗಳನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

    ನನ್ನ ಬಳಿ ಇರುವ ಪೆನ್​ಡ್ರೈವ್ ನಿಮ್ಮ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತ ನೀವು ಹೇಳುತ್ತೀರಿ. ಎಸ್​ಐಟಿಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್​ಐಟಿಗೆ ಕೊಟ್ಟಿರಲಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link