ಮತ್ತೆ ಸುದ್ದಿಯಲ್ಲಿದ್ದಾರೆ ನಂದಮೂರಿ ಬಾಲಕೃಷ್ಣ : ಏನಾಯ್ತು …..?

ಹೈದರಾಬಾದ್:

     ಖ್ಯಾತ ಟಾಲಿವುಡ್ ನಟ ನಂದಮೂರಿ ತಾರಕ ರಾಮಾರಾವ್‌ ಅವರ ಮಗ ನಂದಮೂರಿ ಬಾಲಕೃಷ್ಣ ತಮ್ಮ ಅನುಚಿತ ವರ್ತನೆ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ ಈಗ ಮತ್ತೆ ಇದೇ ವಿಷಯವಾಗಿ ಸುದ್ದಿಯಲ್ಲಿದ್ದಾರೆ  ಈ ಬಾರಿ ತುಂಬಿದ ಸಭೆಯಲ್ಲಿ ಮದ್ಯ ಸೇವಿ ನಟಿಯನ್ನು ತಳ್ಳಿದರು ಎಂಬ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.

     ಇತ್ತೀಚೆಗೆ ನಟ ವಿಶ್ವಕ್ ಸೇನ್ , ಅಂಜಲಿ  ಮತ್ತು ನೇಹಾ ಶೆಟ್ಟಿ ನಟಿಸಿರುವ ‘ಗ್ಯಾಂಗ್ಸ್ ಆಫ್ ಗೋದಾವರಿ’  ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ನಟ ನಂದಮೂರಿ ಬಾಲಕೃಷ್ಣ  ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ನೇಹಾ ಶೆಟ್ಟಿ, ನಟಿ ಅಂಜಲಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು.

    ಇದೇ ಸಂದರ್ಭದಲ್ಲಿ ಫೋಟೋಗೆ ಪೋಸ್ ನೀಡಲು ಬಾಲಯ್ಯ ಪಕ್ಕಕ್ಕೆ ಸರಿದಿದ್ದು, ನಟಿ ಅಂಜಲಿ ಮಾತ್ರ ಪಕ್ಕಕ್ಕೆ ಸರಿದಿಲ್ಲ. ನಟ ಬಾಲಯ್ಯ ಪಕ್ಕಕ್ಕೆ ಸರಿಯುವಂತೆ ಹೇಳಿದರೂ ಅದು ಕೇಳಿಸದ ನಟಿ ಅಂಜಲಿ ಅಲ್ಲಿಯೇ ನಿಂತಿದ್ದರು. ಇದರಿಂದ ಆಕ್ರೋಶಗೊಂಡ ನಟ ಬಾಲಕೃಷ್ಣ ಏಕಾಏಕಿ ನಟಿಯನ್ನು ತಳ್ಳಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. 

    ಇದೇ ಸಮಾಂರಭದಲ್ಲಿ ನಟ ಬಾಲಕೃಷ್ಣ ಮದ್ಯಪಾನ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ನಟ ಕುಳಿತಿದ್ದ ಕುರ್ಚಿಯ ಕೆಳಗೆ ನೀರಿನ ಬಾಟಲಿ ಹಿಂದೆ ಮದ್ಯವಿರುವ ಬಾಟಲಿ ಕೂಡ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಹೀಗಾಗಿ ಅವರು ಸಮಾರಂಭದಲ್ಲಿ ಕುಡಿದು ಭಾಗಿಯಾಗಿದ್ದರು ಎಂದು ಆರೋಪಿಸಲಾಗುತ್ತಿದೆ. ಬಾಲಯ್ಯ ಅವರ ವೇದಿಕ ಮೇಲಿನ ಅನುಚಿತ ವರ್ತನೆಗೆ ಅವರು ಮದ್ಯಪಾನ ಮಾಡಿದ್ದೇ ಕಾರಣ ಎಂದೂ ಹೇಳಲಾಗುತ್ತಿದೆ. 

   ವೈರಲ್‌ ಆದ ವಿಡಿಯೊದಲ್ಲಿ ನಂದಮೂರಿ ಕೃಷ್ಣ ಅವರು ಚೈತನ್ಯ ಅವರ ಮುಂಬರುವ ತೆಲುಗು ಆಕ್ಷನ್ ಚಿತ್ರ ಗ್ಯಾಂಗ್ಸ್ ಆಫ್ ಗೋದಾವರಿಯ ಪ್ರಚಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಬಿಳಿ ಶೆರ್ವಾನಿ ಧರಿಸಿದ್ದರು. ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ.

   ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಅಂಜಲಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಬಾಲಯ್ಯ ಬಗ್ಗೆ ನೆಗೆಟಿವ್‌ ಕಮೆಂಟ್‌ಗಳು ಬರುತ್ತಿವೆ.

    ಇನ್ನು ನಟ ಬಾಲಯ್ಯ ಅವರ ಅನುಚಿತ ವರ್ತನೆ ಇದೇ ಮೊದಲೇನಲ್ಲ.. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ತಮ್ಮ ಅನುಚಿತ ವರ್ತನೆಯಿಂದಲೇ ಬಾಲಯ್ಯ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ಕಾರ್ಯಕ್ರಮಗಳಲ್ಲಿ ತಮ್ಮನ್ನು ಕಾಣಲು ಬಂದ ಅಭಿಮಾನಿಗಳಿಗೇ ಕಪಾಳ ಮೋಕ್ಷ ಮಾಡಿದ್ದರು. ಆದರೆ ಅಭಿಮಾನಿಗಳು ಕೂಡ ಅವರ ವಿರುದ್ಧ ಸಿಟ್ಟುಗೊಳ್ಳದೇ ತಮ್ಮ ನೆಚ್ಚಿನ ನಟ ತಮ್ಮನ್ನು ತಾಕಿದರು ಎಂದು ಖುಷಿಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link