ನೀವೆ ಆಯ್ಕೆ ಮಾಡಿದ ನಿಮ್ಮ ಸಂಸದರ ಸಂಬಳ ಎಷ್ಟು ಗೊತ್ತಾ…..?

ನವದೆಹಲಿ 

    ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ (result) ಈಗಾಗಲೇ ಹೊರಬಿದ್ದಿದೆ. ಇದರೊಂದಿಗೆ ತಮ್ಮತಮ್ಮ ಕ್ಷೇತ್ರದ ಸಂಸದರ (Minister Of Parliament) ಅಧಿಕಾರ, ಅವರ ವಿಶೇಷ ಸೌಲಭ್ಯಗಳ ಕುರಿತಾಗಿ ಒಂದಷ್ಟು ತಿಳಿದುಕೊಳ್ಳುವ ಆಸಕ್ತಿಯಂತೂ ಎಲ್ಲರಲ್ಲೂ ಇದ್ದೇ ಇರುತ್ತದೆ.

   ಭಾರತೀಯ ಸಂಸತ್ತಿನ ಎರಡು ಸದನಗಳಲ್ಲಿ ಒಂದಾಗಿರುವ ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಸದಸ್ಯರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲು ಸಾರ್ವಜನಿಕರಿಂದ ಚುನಾಯಿತರಾಗುತ್ತಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

   ಸಂಸದರು ಮಾಸಿಕವಾಗಿ 1 ಲಕ್ಷ ರೂ. ವೇತನವನ್ನು ಪಡೆಯುತ್ತಾರೆ. ಅವರ ಸಂಬಳವು ಪ್ರತಿ ಐದು ವರ್ಷಗಳಿಗೊಮ್ಮೆ ದೈನಂದಿನ ಭತ್ಯೆಗಳ ರೂಪದಲ್ಲಿ ಹೆಚ್ಚಾಗುತ್ತದೆ.

   ಸಂಸತ್ತಿನ ಸದಸ್ಯರ ಭತ್ಯೆಗಳು ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ 2010ರ ಪ್ರಕಾರ ಅವರ ಮೂಲ ವೇತನವು ತಿಂಗಳಿಗೆ 50,000 ರೂ. ಅನ್ನು ಒಳಗೊಂಡಿರುತ್ತದೆ, ಸಂಬಳದ ಪ್ರಕಾರ, ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗಲು ದೈನಂದಿನ ಭತ್ಯೆಯಾಗಿ ಅವರು 2,000 ರೂಪಾಯಿಗಳನ್ನು ಪಡೆಯುತ್ತಾರೆ. ಸಂಸದರು ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರೆ ಪ್ರತಿ ಕಿ.ಮೀ.ಗೆ 16 ರೂ.ನಂತೆ ಪ್ರಯಾಣ ಭತ್ಯೆಗೆ ಅರ್ಹರಾಗಿರುತ್ತಾರೆ.

   ಅವರು ತಿಂಗಳಿಗೆ 45,000 ರೂ.ಗಳ ಕ್ಷೇತ್ರ ಭತ್ಯೆಯನ್ನೂ ಪಡೆಯುತ್ತಾರೆ. ದೂರವಾಣಿ ಮತ್ತು ಅಂಚೆ ವೆಚ್ಚಕ್ಕೆ 15,000 ರೂ. ಸೇರಿದಂತೆ ಕಚೇರಿ ವೆಚ್ಚವಾಗಿ ತಿಂಗಳಿಗೆ 45,000 ರೂ. ಪಡೆಯುತ್ತಾರೆ.

   ಕಾರ್ಯದರ್ಶಿ, ಸಹಾಯಕರ ವೇತನ ನೀಡಲು ಅವರು ಭತ್ಯೆ ಬಳಸಿಕೊಳ್ಳಬಹುದು. ಪ್ರತಿ ತಿಂಗಳು ಸದಸ್ಯರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಪಡೆಯಲು 500 ರೂ. ಪಡೆಯುತ್ತಾರೆ.

   ಸಂಸದರಿಗೆ ವಿವಿಧ ಸಭೆಗಳಿಗೆ ಹಾಜರಾಗಲು ಸೇರಿದಂತೆ ತಮ್ಮ ಕರ್ತವ್ಯಗಳ ನಿರ್ವಹಣೆಗೆ ಉಂಟಾಗುವ ಪ್ರಯಾಣ ವೆಚ್ಚಗಳಿಗೆ ಮರುಪಾವತಿಗಳನ್ನು ನೀಡಲಾಗುತ್ತದೆ. ಸಂಸದರು ತಮ್ಮ ಅಧಿಕಾರ ಅವಧಿಗೆ ಬಾಡಿಗೆ ರಹಿತ ವಸತಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

    ಇದಲ್ಲದೆ ಸಂಸದರಿಗೆ ಮತ್ತು ಅವರ ಕುಟುಂಬದವರಿಗೆ ಬಸ್‌, ರೈಲು ಮತ್ತು ವಿಮಾನ ಪ್ರಯಾಣ ಉಚಿತವಾಗಿರುತ್ತದೆ. ಸಂಸದರು ಮತ್ತು ಅವರ ಕುಟುಂಬದವರಿಗೆ ಚಿಕಿತ್ಸೆ ಉಚಿತವಾಗಿರುತ್ತದೆ. ಒಂದೇ ಒಂದು ದಿನ ಸಂಸದರಾಗಿದ್ದರೂ ಬದುಕಿರುವವರೆಗೂ ಪ್ರತಿ ತಿಂಗಳು 25,000 ರೂ. ಪಿಂಚಣಿ ಸಿಗುತ್ತದೆ. ಹತ್ತು ವರ್ಷ ಎಂಪಿ ಆಗಿದ್ದರೆ 35,000 ರೂ. ಪಿಂಚಣಿ ಸಿಗುತ್ತದೆ. ಜತೆಗೆ ಇತರ ಸೌಲಭ್ಯಗಳೂ ಮುಂದುವರಿಯುತ್ತವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link