ಜಪಾನನಲ್ಲಿ ಬಂತು ಮಾರಾಣಂತಿಕ ವೈರಸ್‌ …..!

ತುಮಕೂರು:

    ದಿನಗಳು ಉರುಳಿದಂತೆ ಕಾಲೋಚಿತ ಕಾಯಿಲೆಗಳು ಸಹ ಕಾಣಿಸಿಕೊಳ್ಳಲು ಆರಂಭವಾಗುತ್ತಿದೆ. ಮೊದಲು ಕೋವಿಡ್ ವೈರಸ್ ಇಡೀ ವಿಶ್ವವನ್ನೇ ತಲ್ಳಣಗೊಳಿಸಿದ ಬಳಿಕ ಈಗ ಹಕ್ಕಿ ಜ್ವರದ ಭೀತಿ ಎಲ್ಲೆಡೆ ಎದುರಾಗಿದೆ. ಹಕ್ಕಿ ಜ್ವರದಿಂದಾಗಿ ಮೊಟ್ಟ ಮೊದಲ ಸಾವಿನ ಪ್ರಕರಣ ಸಹ ದಾಖಲಾಗಿದೆ.

   ಆದರೆ ಇದೆಲ್ಲದರ ನಡುವೆ ಹೊಸದೊಂದು ಕಾಯಿಲೆ ಈಗ ವ್ಯಾಪಕವಾಗಿ ಹರಡಲು ಆರಂಭವಾಗಿದ್ದು, ವಿಶ್ವಕ್ಕೆ ಹೊಸ ಆತಂಕ ಎದುರಾಗಿದೆ.

   ಅದರಲ್ಲೂ ಈಗ ಜಪಾನ್‌ ಎಂಬ ಸಣ್ಣ ದ್ವೀಪದಲ್ಲಿ ಹೊಸದಾದ ವೈರಸ್‌ವೊಂದು ಕಾಣಿಸಿಕೊಂಡಿದ್ದು ಇದು ನಿಮ್ಮ ಮಾಂಸವನ್ನೇ ತಿನ್ನುತ್ತದೆ. ಹೌದು ಮಾಂಸ ತಿನ್ನುವ ಹೊಸ ಬ್ಯಾಕ್ಟೀರಿಯಾ ಹುಟ್ಟಿಕೊಂಡಿದ್ದು, ಜಪಾನ್‌ನಲ್ಲಿ ಇದು ಮಾರಣಾಂತಿಕವಾಗಿ ಪರಿಣಮಿಸಿದೆ. ಈ ವೈರಸ್ ತಗುಲಿದ 48 ಗಂಟೆಯಲ್ಲಿ ಆ ವ್ಯಕ್ತಿ ಮೃತಪಡುತ್ತಿದ್ದಾನೆ.

   ಈ ಬ್ಯಾಕ್ಟೀರಿಯಾವನ್ನು ‘ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯನ್ನು ಉಲ್ಲೇಖಿಸಿದ್ದು, ಬ್ಲೂಮ್‌ಬರ್ಗ್ ಈ ವರ್ಷದ ಜೂನ್ 2 ರವರೆಗೆ 977 ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್  ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

   ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು 1999 ರಿಂದ ಈ ರೋಗವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಸಂಸ್ಥೆಯ ಪ್ರಕಾರ, ಈ ವರ್ಷ ಈ ಮಾರಣಾಂತಿಕ ವೈರಸ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. 2022 ರ ಅಂತ್ಯದ ವೇಳೆಗೆ, ಕನಿಷ್ಠ ಐದು ಯುರೋಪಿಯನ್ ದೇಶಗಳಲ್ಲಿ ಪ್ರಕರಣವನ್ನು ದೃಢಪಡಿಸಲಾಗಿದ್ದು, ಮತ್ತಷ್ಟು ದೇಶಗಳಿಗೆ ಇದು ಹರಡುವ ಭೀತಿ ಸಹ ಎದುರಾಗಿದೆ. 

   ನಿಮ್ಮ ದೇಹದ ಮೇಲೆ ತೆರೆದ ಗಾಯಗಳು, ಕಡಿತಗಳು ಅಥವಾ ಹುಣ್ಣುಗಳೊಂದಿಗೆ ಬ್ಯಾಕ್ಟೀರಿಯಾಗಳು ಸಂಪರ್ಕಕ್ಕೆ ಬಂದಾಗ ಟಾಕ್ಸಿಕ್ ಶಾಕ್ ಸಿಂಡ್ರೋಮ್  ಸಂಭವಿಸಬಹುದು ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ ವರದಿ ಮಾಡಿದೆ. ಇದು ಚರ್ಮದ ಸೋಂಕು, ಶಸ್ತ್ರಚಿಕಿತ್ಸೆ, ಹೆರಿಗೆ ಅಥವಾ ಮೂಗಿನ ರಕ್ತಸ್ರಾವದ ಕಾರಣದಿಂದಾಗಿರಬಹುದು, ಈ ಕಾಯಿಲೆ ಹರಡದಂತೆ ಹಾಗೂ ಜೀವಕ್ಕೆ ಹಾನಿ ಮಾಡದಂತೆ ತಡೆಯಬೇಕಾದರೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. 

   50 ವರ್ಷಕ್ಕಿಂತ ಮೇಲ್ಪಟ್ಟ ಜನರು ಈ ರೋಗಕ್ಕೆ ತುತ್ತಾಗುವುದು ಹೆಚ್ಚು ಅಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಲ್ಲಿ ಅಪಾಯ ಹೆಚ್ಚು. WHO ಈ ಬ್ಯಾಕ್ಟೀರಿಯಾವನ್ನು ಗುಂಪು A ಸ್ಟ್ರೆಪ್ಟೋಕೊಕಸ್  ನಲ್ಲಿ ಸೇರಿಸಿದೆ. ಇದು ಗಂಟಲು ಮತ್ತು ಕೈ ಕಾಲಿನ ಚರ್ಮದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಮಕ್ಕಳು ಊತ ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು “ಸ್ಟ್ರೆಪ್ ಗಂಟಲು” ಎಂದು ಕರೆಯಲಾಗುತ್ತದೆ.

   ಹೆಚ್ಚಿನ ರೋಗಿಗಳು ರೋಗಲಕ್ಷಣಗಳು ಕಾಣಿಸಿಕೊಂಡ ನಂತರ 48 ಗಂಟೆಗಳ ಒಳಗೆ ಸಾಯುತ್ತಾರೆ. ಈ ಬ್ಯಾಕ್ಟೀರಿಯಾದಿಂದ ಸೋಂಕಿತ ಜನರು ಬೆಳಿಗ್ಗೆ ತಮ್ಮ ಕಾಲುಗಳಲ್ಲಿ ಊತವನ್ನು ಗಮನಿಸುತ್ತಾರೆ, ಅದು ಮಧ್ಯಾಹ್ನದ ವೇಳೆಗೆ ಕಡಿಮೆಯಾಗುತ್ತದೆ. ಆದರೆ ಊಟ ಕಾಲುಗಳಿಂದ ಇಡೀ ದೇಹಕ್ಕೆ ಹರಡುತ್ತದೆ. ಎರಡು ದಿನದಲ್ಲಿ ಆತ ಸಾವಿಗೀಡಾಗುತ್ತಾನೆ ಎಂದು ಟೋಕಿಯೋ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಾಪಕ ಕೆನ್ ಕಿಕುಚಿ ಹೇಳಿದ್ದಾರೆ.

Recent Articles

spot_img

Related Stories

Share via
Copy link