ನಮ್ಮೂರು, ಮನೆ ಮಿಸ್‌ ಮಾಡಿಕೊಳ್ತಿದ್ದೇನೆ : ರಷ್ಮಿಕಾ ಮಂದಣ್ಣ

ಬೆಂಗಳೂರು

    ಬಹುಭಾಷಾ ನಟಿ ಕರ್ನಾಟಕದ ಕೊಡಗು ಮೂಲದವರಾದ ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ  ಅವರು ಆಗಾಗ ಕೆಲವು ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಇದೀಗ ತವರಿಗೆ ಭೇಟಿ ನೀಡಿರುವ ಅವರ ಫೋಟೋಗಳು ಹೆಚ್ಚು ವೈರಲ್ ಆಗುತ್ತಿವೆ.

    ಇದರಲ್ಲೇನು ಏನು ವಿಶೇಷತೆ ಇದೆ ಅಂತೀರಾ? ಇದೆ. ಕೊಡಗಿನವರಾದ ರಶ್ಮಿಕಾ ಮಂದಣ್ಣಾ ಕನ್ನಡ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಭರ್ಜರಿ ಎಂಟ್ರಿ ಕೊಟ್ಟು ತೆಲುಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಪುಷ್ಪ-2 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬ್ಯೂಸಿ ಇರುವ ರಶ್ಮಿಕಾ ಮಂದಣ್ಣಾ ಗೆಳತಿಯ ವಿವಾಹ ಸಂಬಂಧ ತವರು ಕೊಡಗಿಗೆ ಆಗಮಿಸಿದ್ದಾರೆ.

   ತವರಿನಲ್ಲಿ ಸುಂದರ ಕ್ಷಣಗಳನ್ನು ಕಳೆದಿರುವ ರಶ್ಮಿಕಾ ಕೂರ್ಗಿ ಶೈಲಿಯಲ್ಲಿ ರಾಯಲ್ ಬ್ಲೂ ಸೀರೆ ಉಟ್ಟು ಕಂಗೊಳಿಸಿದ್ದಾರೆ. ಕೂರ್ಗಿ ಶೈಲಿಯಲ್ಲಿ ಸೀರೆ ಉಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ಅವುಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವಿವ್ಸ್ ಬಂದಿವೆ.

ನಮ್ಮೂರು, ಮನೆ ಮಿಸ್‌ ಮಾಡಿಕೊಳ್ತಿದ್ದೇನೆ

   ‘ನಾನು ಹುಟ್ಟಿ ಬೆಳೆದ ಊರನ್ನು, ಪ್ರೀತಿ ಪಾತ್ರರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂಬುದನ್ನು ಅವರು ಪದಗಳಲ್ಲಿ ವಿವರಿಸಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ನೇಹಿತೆಯ ಮದುವೆಗೆ ಬಂದು ವಿಶೇಷವಾಗಿ ಶುಭಕೋರಿರುವ ರಶ್ಮಿಕಾ ತನ್ನೂರನ್ನು ಮಿಸ್ ಮಾಡಿಕೊಳ್ಳುತ್ತಿದ್ದು, ‘ನಮ್ಮೂರೆ ನಮಗೆ ಚೆಂದ’ ಎಂದು ಹೇಳಿದ್ದಾರೆ. ನಾನು ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ರಶ್ಮಿಕಾ ಕೊಡಗಿನಲ್ಲಿ ಭಾವುಕ ಕ್ಷಣಗಳನ್ನು ಕಳೆದಿದ್ದಾರೆ. 

    ರಶ್ಮಿಕಾರನ್ನು ಸೀರೆಯಲ್ಲಿ ಚೆಂದ ಬೊಂಬೆಯಂತೆ ಕಂಡ ಅವರ ಅಭಿಮಾನಿಗಳು ಫುಲ್ ಖಷ್ ಆಗಿದ್ದಾರೆ. ಈ ಫೋಟೋಗಳು ಪೋಸ್ಟ್ ಆದ ಕೇವಲ 16 ಗಂಟೆಗಳಲ್ಲಿ 17 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು, 5300 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಸೀರೆಯಲ್ಲಿ ಮಿಂಚಿದ ರಶ್ಮಿಕಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

   ಅಭಿಮಾನಿಗಳು ಹಾರ್ಟ್ ಎಮೋಜಿ ಜೊತೆಗೆ ಟ್ರೂ ಬ್ಯೂಟಿ, ಕ್ರಷ್, ನಿಮ್ಮದು ಅದ್ಭುತ ನಗು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. 

  ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಿಮಲ್   ಸಿನಿಮಾ ತೆರೆಕಂಡಿತ್ತು. ಅದರಲ್ಲಿನ ನಟನೆಯಿಂದ ಭಾರಿ ಮೆಚ್ಚುಗೆ ಪಡೆದ ರಶ್ಮಿಕಾ ನಟನೆಯ ಪುಷ್ಪ-2  ಸಿನಿಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ.

  ಇದರೊಂದಿಗೆ ನಟಿ ಗರ್ಲ್‌ಫ್ರೆಂಡ್, ಛಾಯಾ, ರೈನ್‌ಬೋ, ನಟ ಸಲ್ಮಾನ್ ಜೊತೆಗಿನ ಸಿಕಂದರ್, ಕುಬೇರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ನಟಿ ರಶ್ಮಿಕಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಕನ್ನಡ ಮೂಲದ ನಟಿಯೊಬ್ಬರು ಸ್ಯಾಂಡಲ್‌ವುಡ್‌ನ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತೆಲುಗು ನಂತರ ಹಿಂದಿಯ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಕರ್ನಾಟಕ ಕ್ರಷ್ ಆಗಿದ್ದಾರೆ. ಸದಾ ಶೂಟಿಂಗ್, ಫಾರೇನ್ ವಿಸಿಟ್ ಗಳ ಮಧ್ಯೆ ಅವರು ವಿವಾಹ ಸಮಾರಂಭಕ್ಕಾಗಿ ಬಿಡುವು ಮಾಡಿಕೊಂಡು ತವರಿಗೆ ಬಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link