ಪಿಂಚಣಿ ದಾರರ ಹಿತಾಸಕ್ತಿ ಕಾಪಾಡಿ : ಕೆ ಎನ್ ರಾಜಣ್ಣ

ಮಧುಗಿರಿ :

   ಅಧಿಕಾರಿಗಳು ಮನೆ ಮನೆಗೂ ತೆರಳಿ ವೃದ್ಧ ಪಿಂಚಣಿದಾರರನ್ನು ಗುರುತಿಸಿ ನಿರಂತರವಾಗಿ ಪಿಂಚಣಿ ತಲುಪಿಸುವಂತೆ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಸೂಚಿಸಿದರು.

   ಪಟ್ಟಣದ ಪುರಸಭೆಯ ಆವರಣದಲ್ಲಿರುವ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ,

   ತಾಲೂಕಿನಲ್ಲಿ ವಯೋಸಹಜ ವೃದ್ಧರು ಆಶಕ್ತರು ಹೆಚ್ಚಾಗಿದ್ದು ಅವರನ್ನು ವಿನಾ ಕಾರಣ ಕಚೇರಿಗಳಿಗೆ ಅಲೆದಾಡಿಸದೆ ಪಿಂಚಣಿ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಡ ಬೇಕು ,

    ತಾಲೂಕಿಗೆ ಈಗಾಗಲೇ 5 ಸಾವಿರ ನಿವೇಶನ ಮಂಜೂರಾಗಿದ್ದು ಇವುಗಳಲ್ಲಿ ಒಂದು ಸಾವಿರದ ಐದುನೂರು ಮನೆಗಳ ನಿರ್ಮಾಣಕ್ಜೆ ಜಿ ಪಿ ಎಸ್ ಕಾಮಗಾರಿ ನಡೆಯುತ್ತಿದೆ. ಸೇರಿದಂತೆ ಇನ್ನೂ ಹೆಚ್ಚುವರಿಯಾಗಿ 5 ಸಾವಿರ ಮನೆಗಳನ್ನು ತರಲಾಗುವುದು.

   ಗ್ರಾಮಗಳಲ್ಲಿನ ನಕಾಶೆ ಯಲ್ಲಿರುವ ದಾರಿಗಳು ಮತ್ತು ರಸ್ತೆಗಳು ಒತ್ತುವರಿಯಾಗಿದ್ದಾರೆ ತಾಲೂಕು ಆಡಳಿತದ ವತಿಯಿಂದ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗ ಬೇಕು.

   ತಾಲೂಕಿನಲ್ಲಿ ಸುಮಾರು 25 ಸಾವಿರ ಪಾವತಿ ವಾರಸು ಖಾತೆಗಳಿವೆ ಕಂದಾಯಾಧಿಕಾರಿಗಳು ಗ್ರಾಮಗಳ ಹಂತದಲ್ಲಿಯೇ ಇಂತಹ ಸಮಸ್ಯೆಗಳನ್ನು ಬಗೆಹರಿಸುವಂತಾಗ ಬೇಕು.

   ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವು ತಾಲೂಕಿನಲ್ಲಿ ಕುಸಿದಿದೆ. ಕೆಲ ಶಿಕ್ಷಕರು ರಿಯಲ್ ಎಸ್ಟೇಟ್ ಹಾಗೂ ಬಡ್ಡಿ ದಂದೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಅಂತಹವರನ್ನು ಶಿಕ್ಷಣ ಇಲಾಖಾಧಿಕಾರಿಗಳು ಪತ್ತೆ ಹಚ್ಚಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು.

    ಧರ್ಮಸ್ಥಳ ಸಂಸ್ಥೆಯ ವರು ಬೆಳೆ ವಿಮೆ ಮತ್ತು ನಷ್ಟ ಪರಿಹಾರದ ಬಗ್ಗೆ ತಂತ್ರಾಂಶ ಗಳ ಮೂಲಕ ರೈತರ ನೆರವು ನೀಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ.

   ಅಪರಾಧ ಕೃತ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಬೇಕು , ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆವಿಗೂ ಹೆಣ್ಣು ಮಕ್ಕಳು ರಾತ್ರಿಯಾದರು ನಿರ್ಬಯವಾಗಿ ಓಡಾಡುತ್ತಿದ್ದ ಕಾನೂನುನನ್ನು ಪ್ತಸ್ತಾಪಿಸಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಇತ್ತೀಚೆಗೆ ವೃದ್ದೆಯೊಬ್ಬರ ಕಿವಿಯೋಲೆಯನ್ನು ಕಿತ್ತು ಘಾಯಗೊಳಿಸಿರುವ ಸರಗಳ್ಳರಿಗೆ ಕಠಿಣ ಕಾನೂನು ಕ್ರಮಗೊಂಡಿದ್ದಾರೆ. ಇಂತಹ ಸರಗಳ್ಳರನ್ನು ಪತ್ತೆ ಹಚ್ಚಿ ಬಂಧಿಸಿರುವ ಪೊಲೀಸ್ ನವರ ಆರೋಪಿಗೆ ಗುಂಡೇಟು ನೀಡಿರುವ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link