ಮುಂಬೈ:
ಮೊಬೈಲ್ ರೇಡಿಯೊವೇವ್ ಸೇವೆಗಳಿಗಾಗಿ 5ಜಿ ತರಂಗಾಂತರ (ಸ್ಪೆಕ್ಟ್ರಮ್) ಹರಾಜು ಬುಧವಾರ ಟೆಲಿಕಾಂ ಸಂಸ್ಥೆಗಳಿಂದ ಅಂದಾಜು 11,300 ರೂ ಮೌಲ್ಯದ ಬಿಡ್‌ಗಳೊಂದಿಗೆ ಮುಕ್ತಾಯಗೊಂಡಿದೆ.
ಎಂಟು ಬ್ಯಾಂಡ್‌ಗಳನ್ನು ಒಳಗೊಂಡ 5ಜಿ ಏರ್‌ವೇವ್‌ಗಳಿಗಾಗಿ 96,000 ಕೋಟಿ ರೂಪಾಯಿಗಳ ಸ್ಪೆಕ್ಟ್ರಮ್ ಹರಾಜು ಮಂಗಳವಾರ ಪ್ರಾರಂಭವಾಗಿತ್ತು.800 ಮೆಗಾ ಹರ್ಟ್ಜ್ನಿಂದ 26 ಗಿಗಾ ಹರ್ಟ್ಜ್ವರೆಗಿನ ಆವರ್ತನಗಳನ್ನು ಒಳಗೊಂಡ ಒಟ್ಟು 10 ಗಿಗಾ ಹರ್ಟ್ಜ್ ರೇಡಿಯೋ ತರಂಗಗಳು ಖರೀದಿಗೆ ಲಭ್ಯವಿದ್ದವು.
ಏಳು ಸುತ್ತುಗಳಲ್ಲಿ ಮುಕ್ತಾಯಗೊಂಡ 96,000 ಕೋಟಿ ರೂ.ಗಳ 5ಜಿ ತರಂಗಾಂತರ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿದೆ. ಭಾರ್ತಿ ಏರ್‌ಟೆಲ್ 900 ಮೆಗಾ ಹರ್ಟ್ಜ್, 1800 ಮೆಗಾ ಹರ್ಟ್ಜ್ ಮತ್ತು 2100 ಮೆಗಾ ಹರ್ಟ್ಜ್ ಬ್ಯಾಂಡ್‌ಗಳಲ್ಲಿ ಏರ್‌ವೇವ್‌ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ರಿಲಯನ್ಸ್ ಜಿಯೋ ಹರಾಜಿನಲ್ಲಿ ಭಾಗವಹಿಸುವಿಕೆಯು ಸೀಮಿತವಾಗಿತ್ತು, ಮಾರುಕಟ್ಟೆಯ ನಾಯಕನಾಗಿರುವ ಜಿಯೋ, 1800 ಮೆಗಾ ಹರ್ಟ್ಜ್ ಬ್ಯಾಂಡ್‌ನಲ್ಲಿ 5ಜಿ ಬ್ಯಾಂಡ್‌ವಿಡ್ತ್ ಖರೀದಿಸಿರಬಹುದಾಗಿದೆ.
ವೋಡಾಫೋನ್ ಐಡಿಯಾ (ವಿಐ) 900 ಮೆಗಾ ಹರ್ಟ್ಜ್, 1800 ಮೆಗಾ ಹರ್ಟ್ಜ್ ಮತ್ತು 2500 ಮೆಗಾ ಹರ್ಟ್ಜ್ಬ್ಯಾಂಡ್ಗಳಲ್ಲಿ ಸ್ಪೆಕ್ಟ್ರಮ್ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಏರ್‌ಟೆಲ್ ಮತ್ತು ವಿಐ ಈ ಮೊದಲೇ ಅಂದಾಜಿಸಿದ ರೀತಿಯಲ್ಲಿ ವರ್ತಿಸಿವೆ. ಈ ವರ್ಷ ತಮ್ಮ ಪರವಾನಗಿಗಳು ಮುಕ್ತಾಯಗೊಳ್ಳುವ ಪ್ರದೇಶಗಳಲ್ಲಿ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿವೆ. ಅಲ್ಲದೆ, ಸುನೀಲ್ ಮಿತ್ತಲ್ ನೇತೃತ್ವದ ಏರ್‌ಟೆಲ್ ತನ್ನ ಸಬ್-ಗಿಗಾ ಹರ್ಟ್ಜ್ ಸ್ಪೆಕ್ಟ್ರಮ್ ಅನ್ನು ಬಲಪಡಿಸಲು 900 ಮೆಗಾ ಹರ್ಟ್ಜ್ ಏರ್‌ವೇವ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ.
ಏರ್‌ಟೆಲ್ ತನ್ನ ಮಿಡ್-ಬ್ಯಾಂಡ್ ಸ್ಪೆಕ್ಟ್ರಮ್ ಹಿಡುವಳಿಗಳನ್ನು ವರ್ಧಿಸಲು ಪ್ರಮುಖ ಮಾರುಕಟ್ಟೆಗಳಲ್ಲಿ 2100 ಮೆಗಾ ಹರ್ಟ್ಜ್ ಏರ್‌ವೇವ್‌ಗಳನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಕ್ರಮವು ತನ್ನ 5ಜಿ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದರ 4ಜಿ ನೆಟ್‌ವರ್ಕ್‌ಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಜಿಯೋ ತನ್ನ 4ಜಿ ಮತ್ತು 5ಜಿ ಕವರೇಜ್ ಅನ್ನು ಬೆಂಬಲಿಸಲು 1800 ಮೆಗಾ ಹರ್ಟ್ಜ್ ಬ್ಯಾಂಡ್‌ನಲ್ಲಿ ತನ್ನ ಮಿಡ್-ಬ್ಯಾಂಡ್ 5ಜಿ ಏರ್‌ವೇವ್‌ಗಳನ್ನು ಹೆಚ್ಚಿಸಲು ಗಮನಹರಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈ ವರ್ಷ, ಸರ್ಕಾರವು 10.5 ಮೆಗಾ ಹರ್ಟ್ಜ್ 5ಜಿ ಏರ್‌ವೇವ್‌ಗಳನ್ನು ನೀಡಿದೆ. ಇದರ ಮೀಸಲು ಬೆಲೆ 96,238.45 ಕೋಟಿ ರೂ. ಇದೆ. 140-150 ಮೆಗಾ ಹರ್ಟ್ಜ್ ಮಾತ್ರ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.
ಜುಲೈ 2022 ರ 5G ಹರಾಜಿನಲ್ಲಿ ಸಂಗ್ರಹಿಸಿದ ದಾಖಲೆಯ 1,50,173 ಕೋಟಿ ರೂ.ಗಿಂತ ಕಡಿಮೆ ಮತ್ತು ಮಾರ್ಚ್ 2021 ರ 4ಜಿ ಹರಾಜಿನಲ್ಲಿ ಸಂಗ್ರಹಿಸಲಾದ 77,814 ಕೋಟಿ ರೂ.ಗಿಂತಲೂ ಕಡಿಮೆ ಆದಾಯವು ಪ್ರಸ್ತುತ ಹರಾಜಿನಲ್ಲಿ ಸರ್ಕಾರಕ್ಕೆ ಸಂಗ್ರಹವಾಗಿದೆ.