ಹೊರರಾಜ್ಯಕ್ಕೆ ಮಾರಾಟ ಮಾಡಿದ್ದ ಬಾಲಕಿ ರಕ್ಷಣೆ

 ತುಮಕೂರು:

     ದಿಬ್ಬೂರು ವಾಸಿಗಳಾದ ಚೌಡಯ್ಯ ದಂಪತಿಗಳ 11ವರ್ಷದ ಹೆಣ್ಣು ಮಗುವನ್ನು ಆಂಧ್ರಪ್ರದೇಶದ ಬಾತುಕೋಳಿ ವ್ಯಾಪಾರಿಗೆ ಮಗುವಿನ ಚಿಕ್ಕಮ್ಮನ ಮನೆಯವರು 35000 ರೂ. ಗಳಿಗೆ ಮಾರಾಟ ಮಾಡಿದ್ದ ಪ್ರಕರಣ ವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಭೇದಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

    ಕಾರ್ಮಿಕ ಕಛೇರಿಗೆ ಬಂದಿದ್ದ ದೂರು ಆಧರಿಸಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಮೂಲಕ ಮಗುವಿನ ರಕ್ಷಣೆಗಾಗಿ ಕೋರಲಾಗಿತ್ತು. ಪೋಲಿಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ತುಮಕೂರು ನಗರ ಪೋಲೀಸ್ ಠಾಣೆಯ ಸಿಬ್ಬಂದಿಗಳು ಮಗುವನ್ನು ರಕ್ಷಿಸಿ ಬಾಲಮಂದಿರಕ್ಕೆ ಹಾಜರುಪಡಿಸಿರುತ್ತಾರೆ. ಕಾರ್ಯಚರಣೆ ಗೆ ಸಹಕರಿಸಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ,ಅಡಿಷನಲ್ ಎಸ್ಪಿ ತುಮಕೂರು , ಉಪ ಪೋಲಿಸ್ ಅಧೀಕ್ಷಕರು, ತುಮಕೂರು ಉಪ ವಿಭಾಗ ಹಾಗೂ ತುಮಕೂರು ನಗರ ಪೊಲೀಸ್ ಠಾಣೆ ಪೋಲಿಸ್ ಇನ್ಸ್ಪೆಕ್ಟರ್ ,ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜೋವತಿ ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link