ನ್ಯೂಯಾರ್ಕ್:
ಟ್ರಂಪ್ ಹತ್ಯೆಗೆ ಇರಾನಿಯನ್ ಯೋಜನೆ ಬಗ್ಗೆ ಅಮೇರಿಕಾ ಭದ್ರತಾ ಪಡೆಗಳಿಗೆ ಮಾಹಿತಿ ಇತ್ತು ಎಂಬ ಅಂಶ ಈಗ ಬಹಿರಂಗವಾಗಿದೆ .ಶನಿವಾರದಂದು ಟ್ರಂಪ್ ಚುನಾವಣಾ ರ್ಯಾಲಿ ಮೇಲೆ ಗುಂಡಿನ ದಾಳಿ ನಡೆಸಿ ಟ್ರಂಪ್ ಹತ್ಯೆಗೆ ಯತ್ನ ನಡೆಸಲಾಗಿತ್ತು, ಅದೃಷ್ಟವಶಾತ್ ಗುಂಡು ಟ್ರಂಪ್ ಕಿವಿಗೆ ತಾಗಿ ಅನಾಹುತ ತಪ್ಪಿತ್ತು. ಟ್ರಂಪ್ ಹತ್ಯೆ ಯೋಜನೆ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಇದ್ದ ಕಾರಣ ಟ್ರಂಪ್ ಗೆ ನೀಡಲಾಗಿದ್ದ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಆದರೆ ಈ ಇರಾನಿಯನ್ ಯೋಜನೆಗೂ ಗುಂಡು ಹಾರಿಸಿದ 20 ವರ್ಷದ ಯುವಕನಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.US ಸೀಕ್ರೆಟ್ ಸರ್ವಿಸ್ ಮತ್ತು ಟ್ರಂಪ್ ಅಭಿಯಾನಕ್ಕೆ ಇರಾನಿನ ಬೆದರಿಕೆಯ ಬಗ್ಗೆ ತಿಳಿಸಲಾಯಿತು ಮತ್ತು US ರಾಷ್ಟ್ರೀಯ ಭದ್ರತಾ ಅಧಿಕಾರಿ ದೃಢಪಡಿಸಿದಂತೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಇರಾಕ್‌ನಲ್ಲಿ ಇರಾನ್‌ನ ಕುಡ್ಸ್ ಪಡೆಯ ನಾಯಕ ಖಾಸಿಮ್ ಸೊಲೈಮಾನಿಯನ್ನು 2020ರ ಡ್ರೋನ್ ದಾಳಿಯಲ್ಲಿ ಕೊಂದ ಬಳಿಕ ಟ್ರಂಪ್ ಮತ್ತು ಅವರ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಟೆಹ್ರಾನ್‌ನಿಂದ ಬೆದರಿಕೆಗಳನ್ನು ಎದುರಿಸಿದ್ದಾರೆ.