ನವದೆಹಲಿ:
ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಯನ್ನು ತೀವ್ರವಾಗಿ ಖಂಡಿಸಿದ್ದ PhonePay ಸಿಇಒಗೆ ಕನ್ನಡಿಗರ ಆಕ್ರೋಶದ ಬಿಸಿ ಮುಟ್ಟಿದ್ದು ಇದೀಗ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ.
ಫೋನ್‌ಪೇ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಮೀರ್ ನಿಗಮ್, ಕನ್ನಡಿಗರಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ತಾವು ಎಂದಿಗೂ ಕರ್ನಾಟಕ ಮತ್ತು ಕನ್ನಡಿಗರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಕನ್ನಡಿಗರು ಸಾಮಾಜಿಕ ಮಾಧ್ಯಮದಲ್ಲಿ ಫೋನ್‌ಪೇ ವಿರುದ್ಧ ಬಹಿಷ್ಕಾರದ ಅಭಿಯಾನ ಶುರು ಮಾಡಿದ್ದರು. ಇದರಿಂದ ಎಚ್ಚೇತ ಸಮೀರ್ ನಿಗಮ್ ಇದೀಗ ಕ್ಷಮೆಯಾಚಿಸಿದ್ದಾರೆ.
ಇಂದು ಖಾಸಗಿ ಹೇಳಿಕೆ ನೀಡಿರುವ ಸಮೀರ್ ನಿಗಮ್, ಫೋನ್‌ಪೇ ಹುಟ್ಟಿದ್ದೆ ಬೆಂಗಳೂರಿನಲ್ಲಿ. ಫೋನ್‌ಪೇ ನಗರದಲ್ಲಿ ಬಲವಾಗಿ ಬೇರುಗಳನ್ನು ಬಿಟ್ಟಿದೆ. ಇದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಬೆಂಗಳೂರು ಜಗತ್ತಿನ ಶ್ರೇಷ್ಠ ತಂತ್ರಜ್ಞಾನ ಪ್ರತಿಭೆ ಮತ್ತು ಉತ್ಸಾಹಭರಿತ ವೈವಿಧ್ಯತೆಗೆ ಹೆಸರುವಾಸಿಯಾಗಿದೆ ಎಂದರು. ನಾನು ಇತ್ತೀಚೆಗೆ ಮಾಧ್ಯಮಗಳಲ್ಲಿ ಕೆಲವು ವರದಿಗಳನ್ನು ನೋಡಿದ್ದೆ. ಅದರಲ್ಲಿ ಉದ್ಯೋಗ ಮೀಸಲಾತಿ ಬಿಲ್ ಕರಡು ಬಗ್ಗೆ ನಾನು ವೈಯಕ್ತಿಕ ಕಾಮೆಂಟ್ ಮಾಡಿದ್ದೇ. ಆದರೆ ನನಗೆ ಎಂದಿಗೂ ಕರ್ನಾಟಕ ಮತ್ತು ಕನ್ನಡಿಗರನ್ನು ಅವಮಾನಿಸುವ ಉದ್ದೇಶಿಸಿಲ್ಲ ಎಂದು ಮೊದಲು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದರು.
ನನ್ನ ಹೇಳಿಕೆಯಿಂದ ಯಾರೊಬ್ಬರ ಭಾವನೆಗಳನ್ನು ನೋಯಿಸಿದರೆ, ನಾನು ನಿಜವಾಗಿಯೂ ವಿಷಾದಿಸುತ್ತೇನೆ ಮತ್ತು ನಿಮಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಸರ್ಕಾರದ ಮೀಸಲಾತಿ ಕಾಯ್ದೆ ವಿಚಾರವಾಗಿ ಈ ಹಿಂದೆ ಟ್ವೀಟ್ ಮಾಡಿದ್ದ ಸಮೀರ್ ನಿಗಮ್, ”ನನಗೆ 46 ವರ್ಷ. 15ಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದೇ ರಾಜ್ಯದಲ್ಲಿ ಎಂದಿಗೂ ವಾಸಿಸಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ದೇಶದಾದ್ಯಂತ ಪೋಸ್ಟ್ ಮಾಡಲಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?
ನಾನು ಕಂಪನಿಗಳನ್ನು ನಿರ್ಮಿಸಿದ್ದು, ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಎಂದು ಹೇಳುವ ಮೂಲಕ ಉದ್ಯೋಗ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.