ವಿನೋದ್ ದೋಂಡಾಳೆ ಅವರ ಆತ್ಮಹತ್ಯೆಯ ಕಾರಣ ಬಿಚ್ಚಿಟ್ಟ ವರ್ಧನ್

ಬೆಂಗಳೂರು

     ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದ ಕನ್ನಡದ ಟಿವಿ ಧಾರಾವಾಹಿ ನಿರ್ದೇಶಕ ವಿನೋದ್ ದೋಂಡಾಳೆ, ತಮ್ಮ ಚೊಚ್ಚಲ ‘ಅಶೋಕ ಬ್ಲೇಡ್‌” ಸಿನಿಮಾಕ್ಕಾಗಿ 3 ಕೋಟಿ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪಾಲುದಾರ ಮತ್ತು ಚಿತ್ರ ನಿರ್ಮಾಪಕ ವೃದ್ಧಿ ಕ್ರಿಯೇಷನ್‌ನ ವರ್ಧನ್ ಹರಿ ಹೇಳಿದ್ದಾರೆ.

‘    ಅಶೋಕ ಬ್ಲೇಡ್‌” ವಿನೋದ್ ವಿ. ದೊಂಡಾಲೆ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು.ಇದು 1970 ರ ದಶಕದ ಸಾಮಾಜಿಕ ಚಿತ್ರವಾಗಿದ್ದು, ಟಿಕೆ ದಯಾನಂದ್ ಚಿತ್ರಕಥೆ ಬರೆದಿದ್ದು, ಸತೀಶ್ ನೀನಾಸಂ ನಾಯಕರಾಗಿ ನಟಿಸುತ್ತಿದ್ದಾರೆ. ಇದು ದೊಂಡಲೆ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ಮೇ 2023 ರಿಂದ ಶೂಟಿಂಗ್ ನಡೆಯುತಿತ್ತು.

    ಶೂಟಿಂಗ್ ದಿನಗಳ ಸಂಖ್ಯೆ ಯೋಜಿಸಿದಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿತ್ತು. ಮೊದಲು ನಾವು 45 ದಿನಗಳ ಕಾಲ ಯೋಜಿಸಿದ್ದೇವೆ, ಆದರೆ 87 ದಿನ ಚಿತ್ರೀಕರಣ ಮಾಡಿದ್ದೇವು. ಮೂಲ ಬಜೆಟ್ ಸುಮಾರು 1.5 ಕೋಟಿ ಆಗಿತ್ತು.

    ಆದರೆ ಅದು ಹಲವು ಬಾರಿ ಹೆಚ್ಚಾಯಿತು. ಈಗ ಕೆಲವು ದೃಶ್ಯಗಳು, ಒಂದು ಹಾಡು ಮತ್ತು ಫೈಟ್ ಸೀಕ್ವೆನ್ಸ್ ರೀಶೂಟ್ ಮಾಡಬೇಕಾಗಿದೆ. ಇದಕ್ಕೆಲ್ಲ ಹೆಚ್ಚಿನ ಹಣದ ಅಗತ್ಯವಿದೆ ಎಂದು ಹರಿ ಹೇಳಿದರು.

Recent Articles

spot_img

Related Stories

Share via
Copy link