ನಾಲ್ಕನೇ ಶನಿವಾರವೂ ತೆರೆದಿದೆ ಬಿಬಿಎಂಪಿ ಕಛೇರಿಗಳು: ಕಾರಣ ಗೊತ್ತಾ….?

ಬೆಂಗಳೂರು:

   ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ (OTS) ಯೋಜನೆ ಜುಲೈ 31ರಂದು ಕೊನೆಗೊಳ್ಳಲಿದ್ದು, ಈ ಸಂಬಂಧ 4ನೇ ಶನಿವಾರವಾದ ಇಂದೂ ಕೂಡ ಕಂದಾಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

  4ನೇ ಶನಿವಾರ ಸಾರ್ವಜನಿಕ ರಜಾ ದಿನವಾಗಿದ್ದು, ವಲಯ ಜಂಟಿ ಆಯುಕ್ತರ ಕಚೇರಿಗಳು ಸ್ಥಾಪಿಸಿರುವ ಹೆಲ್ಪ್ ಡೆಸ್ಕ್‌ಗಳು ಹಾಗೂ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿನ ಹೆಲ್ಪ್ ಡೆಸ್ಕ್​ಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಬಾಕಿ ಆಸ್ತಿ ತೆರಿಗೆ ಪಾವತಿದಾರರು ಹಾಗೂ ಶೈಕ್ಷಣಿಕ ಸಂಸ್ಥೆಗಳು ಒಂದು ಬಾರಿ ಪರಿಹಾರ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕಂದಾಯ ವಿಭಾಗದ ಜಂಟಿ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

1533 ಸಹಾಯವಾಣಿಗೆ ಕರೆ ಮಾಡಿ

   ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಬಾಕಿ ಆಸ್ತಿ ತೆರಿಗೆ ಪಾವತಿಸುವವರಿಗೆ ಎಷ್ಟು ಪಾವತಿಸಬೇಕಿದೆ, ಎಲ್ಲಿ ಪಾವತಿಸಬೇಕು ಎಂಬುದು ಸೇರಿದಂತೆ ಇನ್ನಿತ್ಯಾದಿ ಗೊಂದಲಗಳಿದ್ದರೆ ಪಾಲಿಕೆಯ ಉಚಿತ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.