ಚಿಕ್ಕಬ‍ಳ್ಳಾಪುರದಲ್ಲೊಂದು ಹೃದಯ ವಿದ್ರಾವಕ ಘಟನೆ …!

ಚಿಕ್ಕಬಳ್ಳಾಪುರ:

    ತಾಯಿಯ ಅಕಾಲಿಕ ಸಾವಿನ ಬೇಸರದಲ್ಲಿ ರೈಲಿಗೆ ಸಿಲುಕಿ ಅಕ್ಕ ತಮ್ಮ ಇಬ್ಬರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ. ಇಲ್ಲಿನ ಪ್ರೇಮನಗರ ನವ್ಯ ಅಲಿಯಾಸ್ ಶಿಲ್ಪ (25) ಮತ್ತು ಪ್ರಭು(23) ಮೃತರು. ಶಿಡ್ಲಘಟ್ಟದ ಮಾರ್ಗವಾಗಿ ಬೆಂಗಳೂರಿನಿಂದ ಕೋಲಾರಕ್ಕೆ ತೆರಳುವ ರೈಲಿಗೆ ಹಳಿ ಮೇಲೆ ಇಬ್ಬರು ಮಲಗಿಗೊಂಡಿದ್ದು ಅಕ್ಕ ಮತ್ತು ತಮ್ಮನ ತಲೆ ಮತ್ತು ದೇಹ ಬೇರ್ಪಟ್ಟು ಭಯಾನಕ ದೃಶ್ಯ ಕಂಡು ಬಂತು.

    ಇತ್ತೀಚೆಗೆ ನವ್ಯ ಮತ್ತು ಪ್ರಭುವಿನ ತಾಯಿ ಲಲಿತಮ್ಮ ಧೀರ್ಘಕಾಲ ಸಮಸ್ಯೆ ಪರಿಹಾರಕ್ಕೆ ಆಗ್ಗಿಂದಾಗ್ಗೆ ಮಕ್ಕಳೊಂದಿಗೆ ಮುರುಗಮಲ್ಲಾ ದರ್ಗಾಗೆ ಹೋಗಿ ಒಮ್ಮೊಮ್ಮೆ ತಿಂಗಳಾನುಗಟ್ಟಲೇ ಅಲ್ಲೇ ಇದ್ದು ಬಿಡುತ್ತಿದ್ದರು. ಇದರ ನಡುವೆ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದು ತಾಯಿ ಸಾವಿನಿಂದ ಇಬ್ಬರು ಖಿನ್ನತೆಗೊಳಗಾಗಿದ್ದರು. ಈ ಹಿಂದೆ ಪ್ರಭು ಮನೆಯ ಮೇಲಿಂದ ಬಿದ್ದು ಸಾಯುವ ವಿಫಲ ಪ್ರಯತ್ನವನ್ನೂ ನಡೆಸಿದ್ದ ಎನ್ನಲಾಗಿದೆ. ಅಂತಿಮವಾಗಿ ನವ್ಯ ಮತ್ತು ಪ್ರಭು ತಮ್ಮಿಬ್ಬರ ಕೈಗಳ್ಳನ್ನು ದಾರದಿಂದ ಕಟ್ಟಿಕೊಂಡು ಶಿಡ್ಲಘಟ್ಟ ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿನ ಶೆಟ್ಟಪ್ಪನವರ ತೋಪಿನ ಪಕ್ಕ ಹಾದು ಹೋಗುವ ರೈಲು ಹಳಿ ಮೇಲೆ ತಲೆ ಯಿಟ್ಟು ಮಲಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
  
    ಇನ್ನೂ ಗುರುವಾರ ಮಧ್ಯಾಹ್ನ ಈ ಇಬ್ಬರೂ ರೈಲು ಹಳಿ ಬಳಿ ಅಡ್ಡಾಡುವುದನ್ನು ಸ್ಥಳೀಯರು ಕಂಡಿದ್ದರು. ಅವರ ಮನೆಯೂ ಸಮೀಪದಲ್ಲೇ ಸ್ಥಳ ಇರುವ ಕಾರಣ ಯಾರಿಗೂ ಅನುಮಾನ ಬಂದಿಲ್ಲ. ರಾತ್ರಿ ಸಾಕಷ್ಟು ಸಮಯವಾದರೂ ಮನೆಗೆ ಬಾರದ್ದರಿಂದ ಗಾಬರಿಯಾದ ಮೃತರ ತಂದೆ ನಟರಾಜ್ ಮಾರನೇಯ ದಿನ ಸುತ್ತ ಮುತ್ತ ಹುಡುಕಾಡಿದ್ದು ಮೊದಲು ಮುರುಗಮಲ್ಲಕ್ಕೆ ಹೋಗಿರಬಹುದೆಂದು ಶಂಕಿಸಿ, ಅಲ್ಲಿಗೂ ಹೋಗಿ ಬಂದಿದ್ದಾರೆ. ಲಲಿತಮ್ಮ ಮತ್ತು ನಟರಾಜ್‌ಗೆ ಮೂವರು ಮಕ್ಕಳಿದ್ದು ಮೊದಲನೆ ಪುತ್ರ ನವೀನ್ ಮರಗೆಲಸ ಮಾಡುತ್ತಿದ್ದು ನವ್ಯ ಮತ್ತು ಪ್ರಭು ಏನೂ ಕೆಲಸ ಮಾಡದೇ, ಶಾಲೆಗೂ ಸರಿಯಾಗಿ ಹೋಗದೇ ಹೆಚ್ಚು ಕಾಲ ತನ್ನ ತಾಯಿಯೊಂದಿಗೆ ಮನೆಂiÀಲ್ಲಿಯೇ ಇರುತ್ತಿದ್ದರು. ಘಟನೆಯ ಸ್ಥಳಕ್ಕೆ ಶಿಡ್ಲಘಟ್ಟ ನಗರ ಠಾಣೆ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Recent Articles

spot_img

Related Stories

Share via
Copy link