ಸ್ನಾಷ್ ಸ್ಪರ್ಧೆ : ಮೀರಾಬಾಯಿ ಚಾನುಗೆ 4ನೇ ಸ್ಥಾನ

ಪ್ಯಾರೀಸ್: 

    ಒಲಿಂಪಿಕ್ಸ್ 2024 ರಲ್ಲಿ ಭಾರತದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಪದಕ ಕೈತಪ್ಪಿದೆ.ಟೊಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನು ಈ ಬಾರಿ 4 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 

   ಸ್ನಾಷ್ ಸ್ಪರ್ಧೆಯ ಮೊದಲ ಯತ್ನದಲ್ಲಿ ಮೀರಾ ಬಾಯಿ 85 ಕೆಜಿಯನ್ನು ಸುಲಭವಾಗಿ ಎತ್ತಿದರು. ಆದರೆ 2 ನೇ ಪ್ರಯತ್ನದಲ್ಲಿ 88 ಕೆ.ಜಿ ತೂಕವನ್ನು ಎತ್ತುವಲ್ಲಿ ವಿಫಲರಾದರು. ಮತ್ತು ಮೂರನೇ ಪ್ರಯತ್ನದಲ್ಲಿ ಕ್ಷಮತೆ ಪ್ರದರ್ಶಿಸಿದ ಚಾನು ಸ್ನಾಷ್ ನಲ್ಲಿ 88 ಕೆ.ಜಿಗಳ ಬೆಸ್ಟ್ ಲಿಫ್ಟ್ ಮೂಲಕ ಕಂಚಿನ ಪದಕದ ಸ್ಥಾನದಲ್ಲಿದ್ದರು.

   ಆದರೆ ಕ್ಲೀನ್& ಜರ್ಕ್ ನ ಮೊದಲ ಪ್ರಯತ್ನದಲ್ಲಿ 111 ಕೆಜಿ ಎತ್ತುವಲ್ಲಿ ಮೀರಾಬಾಯಿ ಚಾನು ವಿಫಲರಾದರು. ಎರಡನೇ ಪ್ರಯತ್ನದಲ್ಲಿ ವಿಫಲರಾದ ಮೀರಾಬಾಯಿ ಚಾನು, ಮೂರನೇ ಪ್ರಯತ್ನದಲ್ಲಿ 114 ಕೆ.ಜಿ ಎತ್ತಿದರು. ಅಂತಿಮವಾಗಿ ಕ್ಲೀನ್&ಜರ್ಕ್ ನಲ್ಲಿ 111 ಹಾಗೂ ಸ್ನ್ಯಾಷ್ ನಲ್ಲಿ 88 ಕೆಜಿ ಸೇರಿಸಿ ಒಟ್ಟು 199 ಕೆ.ಜಿ ಲಿಫ್ಟ್ ಮಾಡಿದರು.ಪರಿಣಾಮ 3ನೇ ಸ್ಥಾನದಲ್ಲಿದ್ದ ಚಾನು 4 ನೇ ಸ್ಥಾನಕ್ಕೆ ಕುಸಿದರು. ಈ ಮೂಲಕ ಮತ್ತೊಂದು ಪದಕ ಲಭ್ಯವಾಗುವ ಭಾರತದ ಕನಸು ಭಗ್ನಗೊಂಡಿತು

Recent Articles

spot_img

Related Stories

Share via
Copy link