‘ಅಮಿತಾಬ್’ ವಿಚಾರವಾಗಿ ಜಯಾ ಬಚ್ಚನ್ ಮತ್ತೆ ಕಿರಿಕ್ : ವಿಪಕ್ಷದಿಂದ ಸಭಾತ್ಯಾಗ

ನವದೆಹಲಿ:

‌    ಹೆಸರಿನ ವಿಚಾರವಾಗಿ ಇಂದು ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದ್ದು, ಕೆಲಹೊತ್ತು ಮಾತಿನ ಚಕಮಕಿ ಕೂಡ ನಡೆದಿದೆ.

    ಘನಶ್ಯಾಮ್ ತಿವಾರಿ ಅವರು ಕೆಲವು ದಿನಗಳ ಹಿಂದೆ ವಿಪಕ್ಷ ನಾಯಕರ ಕುರಿತು ಅಸಂಸದೀಯ ಟೀಕೆಗಳನ್ನು ಮಾಡಿದ್ದರು, ಅದರ ಮೇಲೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದವು. ಪ್ರತಿಪಕ್ಷಗಳು ಇಂದು ಆ ವಿಷಯವನ್ನು ಪ್ರಸ್ತಾಪಿಸಿದ್ದವು. ಈ ಸಂದರ್ಭದಲ್ಲಿ ಸಭಾಪತಿ ಧಂಕರ್ ಅವರು ಜಯಾ ಬಚ್ಚನ್ ಬಗ್ಗೆ ಪ್ರತಿಕ್ರಿಯಿಸಿದರು,

   ಸ್ಪೀಕರ್ ಧಂಕರ್ ಅವರ ಸ್ವರವನ್ನು ನಾನು ಆಕ್ಷೇಪಿಸಿದ ಜಯಾ ಬಚ್ಚನ್, ”ನಾವು ಶಾಲಾ ಮಕ್ಕಳಲ್ಲ, ನಮ್ಮಲ್ಲಿ ಕೆಲವರು ಹಿರಿಯ ನಾಗರಿಕರು, ಸಾಕಷ್ಟು ಅನುಭವಹೊಂದಿರುವವರೂ ಇದ್ದೇವೆ. ನಾನು ನಿಮ್ಮ ಸ್ವರದಿಂದ ಅಸಮಾಧಾನಗೊಂಡಿದ್ದೇನೆ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕರು ಮಾತನಾಡಲು ಎದ್ದು ನಿಂತಾಗ ಮೈಕ್‌ ಆಫ್‌ ಮಾಡಲಾಗುತ್ತದೆ. ನೀವು ಇದನ್ನು ಹೇಗೆ ಮಾಡುತ್ತೀರಿ? ನಾನು ಅನಿವಾರ್ಯವಾಗಿ ಕೆಲ ಅಸಂಸದೀಯ ಪದ ಹಳಕೆ ಮಾಡುತ್ತಿದ್ದೇನೆ. ನನಗಿಷ್ಟವಿಲ್ಲದಿದ್ದರೂ ನೀವು ನನಗೆ ಆ ರೀತಿ ಮಾಡಲು ಪ್ರೇರೇಪಿಸುತ್ತಿದ್ದೀರಿ. ನೀವು ‘ಬುದ್ಧಿಹೀನರು.. ಉಪದ್ರವವನ್ನು ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

   ಇದಕ್ಕೆ ತಿರುಗೇಟು ಕೊಟ್ಟ ಸ್ಪೀಕರ್ ಧಂಕರ್ ಅವರು, ”ನೀವು ಸೆಲೆಬ್ರಿಟಿಯಾಗಿರಬಹುದು..ನನಗದು ಬೇಕಿಲ್ಲ. ಸಭ್ಯವಾಗಿ ವರ್ತಿಸುವಂತೆ ಸಲಹೆ ನೀಡಿದರು. ಜಯಾ ಬಚ್ಚನ್ ಅವರ ಹೇಳಿಕೆಗಳು ಮತ್ತು ಪ್ರತಿಪಕ್ಷಗಳ ಬೇಡಿಕೆಗಳ ಬಗ್ಗೆ ಸಭಾಪತಿ ಜಗದೀಪ್ ಧಂಖರ್ ಅಸಮಾಧಾನ ವ್ಯಕ್ತಪಡಿಸಿದಾಗ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರು ತೀವ್ರ ಪ್ರತಿಭಟನೆ ನಡೆಸಿದರು. ನೀವು ಇಡೀ ದೇಶವನ್ನು ಅಸ್ಥಿರಗೊಳಿಸಲು ಬಯಸುತ್ತೀರಿ ಎಂದು ಧಂಖರ್ ಸದನದಲ್ಲಿ ಪ್ರತಿಭಟನಾ ನಿರತ ಪ್ರತಿಪಕ್ಷ ನಾಯಕರಿಗೆ ಹೇಳಿದರು.

   ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಸದನವನ್ನು ಅಶಾಂತಿಯ ಕೇಂದ್ರವಾಗಿಸುವಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಹೇಳಿದರು. “ಸಂವಿಧಾನದ ವೆಚ್ಚದಲ್ಲಿ ನಿಮ್ಮ ದಾರಿಯನ್ನು ಪಡೆಯಲು ನೀವು ನಿರ್ಧರಿಸಿದ್ದೀರಿ” ಎಂದು ಧಂಖರ್ ಹೇಳಿದರು. ಈ ವೇಳೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದವು.

   ಸಭಾಪತಿ ಜಗದೀಪ್ ಧನಖರ್ ಇದನ್ನು “ದುಃಖದ ದಿನ” ಎಂದು ಕರೆದರು. ”ಜಗತ್ತು ನಮ್ಮನ್ನು ನೋಡುತ್ತಿದೆ. ನಾವು “ಅಭಿವೃದ್ಧಿ ಹೊಂದಿದ ಭಾರತ” ದತ್ತ ಸಾಗುತ್ತಿದ್ದೇವೆ. ಆದರೆ “ಈ ಜನರು ಅಡೆತಡೆಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ” ಎಂದು ಧಂಖರ್ ಅವರು ಸದನದಲ್ಲಿ ಹಾಜರಿದ್ದ ಆಡಳಿತ ಪಕ್ಷಕ್ಕೆ ಹೇಳಿದರು. “ಭಾರತವು ತನ್ನ ಮೂರನೇ ಅವಧಿಯಲ್ಲಿ ಮುನ್ನಡೆಯನ್ನು ಮುಂದುವರೆಸಿದೆ. ಆರು ದಶಕಗಳ ನಂತರ ಇತಿಹಾಸವನ್ನು ನಿರ್ಮಿಸಲಾಗುತ್ತಿದೆ. ಭಾರತವು ಜಾಗತಿಕ ಮನ್ನಣೆಯನ್ನು ಹೊಂದಿರುವ ಪ್ರಧಾನ ಮಂತ್ರಿಯ ರೂಪದಲ್ಲಿ ನಾಯಕತ್ವವನ್ನು ಹೊಂದಿದೆ. ದೇಶವು ಅದರ ಬಗ್ಗೆ ಹೆಮ್ಮೆಪಡುತ್ತದೆ ಎಂದರು.

   ಮೇಲ್ಮನೆಯಲ್ಲಿ ‘ಜಯಾ ಅಮಿತಾಬ್ ಬಚ್ಚನ್’ ಗದ್ದಲ ಮರುಕಳಿಸುತ್ತಿರುವುದನ್ನು ಪ್ರತಿಭಟಿಸಿದ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಜಯಾ ಬಚ್ಚನ್ ಅವರನ್ನು ಬೆಂಬಲಿಸಿ ಇಂದು ಮತ್ತೆ ರಾಜ್ಯಸಭೆಯಿಂದ ಹೊರನಡೆದವು.

Recent Articles

spot_img

Related Stories

Share via
Copy link