ನಾಗ ಚೈತನ್ಯ ಬಳಿಕ ಗುಡ್‌ ನ್ಯೂಸ್‌ ಕೊಟ್ರಾ ಸಮಂತ ….!

ತೆಲಂಗಾಣ : 

     ತೆಲುಗು ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ನಟಿ ಸಮಂತಾ ಅಕ್ಕಿನೇನಿ ಕುಟುಂಬದ ನಟ ನಾಗ ಚೈತನ್ಯ ಅವರನ್ನು ಮದುಉವೆ ಆಗಿ ನಂತರ ವಿಚ್ಚೇಧನ ಪಡೆದಿದ್ದರು. ಈಗ ತಮ್ಮ ಬಹು ಕಾಲದ ಗೆಳತಿ ಶೋಭಿತಾ ಧುಲಿಪಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿ ಆಗಿದ್ದಾರೆ.

    ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ನಾಗ ಚೈತನ್ಯ ಮತ್ತು ಶೋಭಿತಾ ಎಂಗೇಜ್​ಮೆಂಟ್ ಮಾಡಿಕೊಂಡರು. ನಾಗ ಚೈತನ್ಯ ಎರಡನೇ ಬಾರಿಗೆ ಮದುವೆ ಆಗಲು ರೆಡಿ ಆಗಿರುವುದರಿಂದ ನಟಿ ಸಮಂತಾ ರುತ್ ಪ್ರಭು ಅವರ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸಮಂತಾ ಅವರು ಮೊದಲ ಪತಿ ನಾಗ ಚೈತನ್ಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇದೇ ವೇಳೆ ನಾಗ ಚೈತನ್ಯ ಎರಡನೇ ಬಾರಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಯೊಬ್ಬರು ಸಮಂತಾಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ನಟಿ ಕೂಡ ಉತ್ತರ ನೀಡಿದ್ದಾರೆ. ಸದ್ಯ ಸಮಂತಾ ಖಾಸಗಿ ಬದುಕಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

    ಸಾಮಾಜಿಕ ಜಾಲತಾಣದದಲ್ಲಿ ಸಮಂತಾ ಅಭಿಮಾನಿ ಮುಕೇಶ್ ಚಿಂತಾ ಅವರು ವಿಡಿಯೋ ಮಾಡಿ ಸಮಂತಾಗೆ ಮದುವೆ ಪ್ರಸ್ತಾಪ ಮಾಡಿದ್ದಾರೆ. ವಿಡಿಯೋದಲ್ಲಿ ಅಭಿಮಾನಿ ಸಮಂತಾಗೆ ಪ್ರಪೋಸ್ ಮಾಡಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಇದಕ್ಕೆ ಸಮಂತಾ ಕೂಡ ಉತ್ತರ ನೀಡಿದ್ದಾರೆ. 

   ಮುಕೇಶ್ ತನ್ನ ಬ್ಯಾಗ್ ಅನ್ನು ಪ್ಯಾಕ್ ಮಾಡಿ ಸಮಂತಾ ಮನೆಗೆ ಹೋಗುತ್ತಾರೆ. ಆ ಬಳಿಕ ಅವರು ಸಮಂತಾ ಮನೆಗೆ ಬರುತ್ತಾರೆ. ಹಿಂಭಾಗದಲ್ಲಿ AI ಮೂಲಕ ಜಿಮ್ ತೋರಿಸಲಾಗಿದೆ. ಅಲ್ಲಿ ಅವರು ಸಮಂತಾಗೆ ಮದುವೆ ಪ್ರಪೋಸ್ ಇಡುತ್ತಾರೆ. ಆ ಬಳಿಕ ಅವರು ಮೊಣಕಾಲುಗಳ ಮೇಲೆ ಕುಳಿತು ಅಭಿಮಾನಿ ಪ್ರಪೋಸ್ ಮಾಡುವುದನ್ನು ವೀಡಿಯೊ ಒಳಗೊಂಡಿದೆ.

   ವಿಡಿಯೋ ನೋಡಿದ ಬಳಿಕ ಸಮಂತಾ, ‘ಹಿನ್ನಲೆಯಲ್ಲಿ ಜಿಮ್ ಕಾಣಿಸುತ್ತಿದೆ. ಅದು ನನ್ನನ್ನು ಸ್ವಲ್ಪ ಕನ್ವಿನ್ಸ್ ಮಾಡಿದೆ’ ಎಂದು ಸಮಂತಾ ಕಮೆಂಟ್ ಮಾಡಿದ್ದಾರೆ.  ಸದ್ಯ ಸಮಂತಾ ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ. ಸಮಂತಾ ಪ್ರತಿಕ್ರಿಯೆ ತಿಳಿದು ಅಭಿಮಾನಿಯೂ ಖುಷಿಯಾಗಿದ್ದಾರೆ.

    ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ನಟಿ ಕಳೆದ ಕೆಲವು ವರ್ಷಗಳಿಂದ ತಮ್ಮ ಜೀವನದಲ್ಲಿ ಅನೇಕ ಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ 2017 ರಲ್ಲಿ ವಿವಾಹವಾದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ 2021ರಲ್ಲಿ ಇಬ್ಬರೂ ತಮ್ಮ ವಿಚ್ಛೇದನವನ್ನು ಘೋಷಿಸಿದರು. ವಿಚ್ಛೇದನದ ನಂತರ ಸಮಂತಾ ಕೂಡ ಅನೇಕ ತೊಂದರೆಗಳನ್ನು ಎದುರಿಸಿದರು. ಅವರ ಆರೋಗ್ಯವೂ ಹದಗೆಟ್ಟಿತು . ಆದರೆ ನಟಿ ಎಲ್ಲಾ ತೊಂದರೆಗಳನ್ನು ನಗುತ್ತಲೇ ಎದುರಿಸಿದರು.

    ಶೋಭಿತಾ ಮತ್ತು ನಾಗ ಚೈತನ್ಯ ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು. ನಟನ ತಂದೆ ನಾಗಾರ್ಜುನ ತಮ್ಮ ಮಗ ಮತ್ತು ಭಾವಿ ಸೊಸೆಯ ಚಿತ್ರವನ್ನು ಪೋಸ್ಟ್ ಮಾಡಿ ಇಬ್ಬರಿಗೂ ಶುಭ ಹಾರೈಸಿದ್ದಾರೆ. ಶೋಭಿತಾ ಮತ್ತು ನಾಗ ಚೈತನ್ಯ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Recent Articles

spot_img

Related Stories

Share via
Copy link