ರೇಣುಕ ಸ್ವಾಮಿ ಕೇಸ್ : ಪೊಲೀಸರ ಕೈ ಸೇರಿದ FSL ವರದಿಯಲ್ಲಿ ಏನಿದೆ

ಬೆಂಗಳೂರು :

     ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರಾಗೌಡ ಎನ್ನಲಾಗಿದ್ದು, ರೇಣುಕಾಸ್ವಾಮಿಗೆ ಪವಿತ್ರಾಗೌಡ ಚಪ್ಪಲಿಯಲ್ಲಿ ಹೊಡೆದಿದ್ದರು. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಶೇ. 70 ರಷ್ಟು ಪೊಲೀಸರ ಕೈಸೇರಿದ್ದು, ವರದಿಯಲ್ಲಿ ದರ್ಶನ್ ಮತ್ತು ಗ್ಯಾಂಗ್ ನ ಕೃತ್ಯದ ಕುರಿತು ಸ್ಪೋಟಕ ಮಾಹಿತಿ ಲಭ್ಯವಾಗಿದೆ.

    ಕೃತ್ಯ ನಡೆದ ವೇಳೆ ಪವಿತ್ರಾಗೌಡ ಸ್ಥಳದಲ್ಲೇ ಇದ್ದರು ಎನ್ನುವ ಕುರಿತು ಸಾಕ್ಷಿ ಲಭ್ಯವಾಗಿದೆ ಎನ್ನಲಾಗಿದ್ದು, ಸಿಸಿಟಿವಿಯಲ್ಲಿ ಪವಿತ್ರಾಗೌಡ ಇರುವ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗಿದೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸಿಸಿಟಿವಿ, ಬ್ಲಡ್ ರಿಪೋರ್ಟ್ ಕುರಿತ ಎಫ್ ಎಸ್ ಎಲ್ ನ ಆರು ವರದಿಗಳು ಪೊಲೀಸರಿಗೆ ಇ-ಮೇಲ್ ಮೂಲಕ ಬಂದಿದ್ದು, ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ.

    ರೇಣುಕಾಸ್ವಾಮಿಯ ಪೋಸ್ಟ್​ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್​ ಎಫ್​ಎಸ್​​ಎಲ್​ ವರದಿಯಲ್ಲಿ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರೋದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.ರೇಣುಕಾಸ್ವಾಮಿಯ ಪೋಸ್ಟ್​ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್​ ಎಫ್​ಎಸ್​​ಎಲ್​ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ರೇಣುಕಾಸ್ವಾಮಿಯ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

   ಇನ್ನು ರೇಣುಕಾಸ್ವಾಮಿ ಮೊಣಕಾಲು ಮೂಳೆ ಮುರಿದು, ಬಲಗಣ್ಣಿಗೂ ಗಾಯವಾಗಿದೆ. ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.

 

Recent Articles

spot_img

Related Stories

Share via
Copy link