ವಿಧಾನಸೌಧದ ಮುಂದೆ ಬೈಕ್‌ ಗೆ ಬೆಂಕಿ : ಕಾರಣ ಕೇಳಿದ್ರೆ ನೀವಂತೂ ಷಾಕ್‌ ಆಗ್ತೀರಾ….!?

ಬೆಂಗಳೂರು:

    ಎಲೆಕ್ಟ್ರಿಕ್ ಬೈಕಿಗೆ ಮಾಲೀಕನೇ ಬೆಂಕಿ ಹಚ್ಚಿದ ಘಟನೆಯೊಂದು ವಿಧಾನಸೌಧದ ಸಮೀಪ ನಡೆದಿತ್ತು. ಬಾಕಿ ಹಣ ಪಾವತಿಸಲಾಗದೆ ಈ ಕೃತ್ಯ ಎಸಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಅಸಲಿ ಕಾರಣ ಏನೆಂದು ತಿಳಿದು ಬಂದಿದೆ.

   ಪೊಲೀಸರ  ಮೇಲಿನ ಕೋಪಕ್ಕೆ ಯುವಕ ತನ್ನದೇ ಬೈಕಿಗೆ ಬೆಂಕಿ  ಹೆಚ್ಚಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಚಳ್ಳಕೆರೆ ಮೂಲದ ಪೃತ್ವಿರಾಜ್ ಎಂಬ ಯುವಕ ಟ್ರಕ್ಕಿಂಗ್ ಹೋಗಿ ಮಿಸ್ಸಾಗಿದ್ದ ಆ ಸಂದರ್ಭದಲ್ಲಿ ಆತನ ತಾಯಿ ದೂರು ನೀಡಲೆಂದು ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿದ್ದರು ಎನ್ನಲಾಗಿದೆ. ಆ ವೇಳೆ ಪೃಥ್ವಿ ತಾಯಿ ನೀಡಿದ್ದ ಕಂಪ್ಲೆಂಟ್ ಪಡೆಯದೆ ತಾಯಿಗೆ ಅವಾಚ್ಯ ಶಬ್ಧದಿಂದ ಬೈದಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಸ್ವತಃ ಪೃಥ್ವಿ ಮೊಬೈಲ್ ಹಿಡಿದು ತಾಯಿಯ ಜೊತೆಗೆ ಪೊಲೀಸ್ ಠಾಣೆಗೆ ಹೋಗಿದ್ದನು. ನಾಪತ್ತೆ ದೂರು ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಪೊಲೀಸರು ಮೊಬೈಲ್ ಕಸಿದುಕೊಂಡು ಠಾಣೆಯೊಳಗೆ ಕರೆದೊಯ್ದಿದ್ದರು. ನಂತರ ಪೊಲೀಸರ ಜತೆ ವಾಗ್ವಾದದ ವಿಡಿಯೋಗಳನ್ನು ವೈರಲ್ ಕೂಡ ಮಾಡಿದ್ದನು.

   ತಾಯಿಗೆ ಅವಾಚ್ಯ ಶಬ್ಧದಿಂದ ನಿಂದಿಸಿರುವುದನ್ನು ತೀವ್ರವಾಗಿ ಖಂಡಿಸಿದ ಪೃಥ್ವಿ ಇನ್ಸ್ಟಾಗ್ರಾಂ ಮೂಲಕ ವಿಡಿಯೋ ಒಂದನ್ನು ಮಾಡಿ ಹರಿ ಬಿಟ್ಟಿದ್ದನ್ನು. ಆ ವಿಡಿಯೋದಲ್ಲಿ ಆತ ನನಗೆ ನ್ಯಾಯ ಸಿಗದಿದ್ರೆ ನಾನು ಟೆರೆರಿಸ್ಟ್ ಆಗ್ತೀನಿ, ಇಡೀ ಬೆಂಗಳೂರು ಮ್ಯಾಪೇ ನನ್ನ ಹತ್ರ ಇದೆ. ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಮೆಟ್ರೋದಲ್ಲಿ 9 ವರ್ಷ ಕೆಲಸ‌ ಮಾಡೀದ್ದೀನಿ. ISRO, DRDO ಗೆ ಪವರ್ ಎಲ್ಲಿಂದ ಹೋಗತ್ತೆ ಅಂತಾನು ಗೊತ್ತು. ಎಲ್ಲಿ ಪಿನ್ ಇಟ್ರೇ, ಎಲ್ಲಿ ಬ್ಲಾಸ್ಟ್ ಮಾಡಬಹುದು ಅಂತಾ ನನಗೆ ಗೊತ್ತಿದೆ. ಎಲ್ಲಿ ಏನ್ ಬೇಕಾದ್ರೂ ಬ್ಲಾಸ್ಟ್ ಮಾಡಿ ಶಿವಾ ಅನ್ನಿಸ್ತೀನಿ ಎಂದು ಯುವಕ ವಿಡಿಯೋ ಮಾಡಿ ಹರಿಬಿಟ್ಟಿದ್ದ.

   ನಾನು ಎಲೆಕ್ಟ್ರಿಕಲ್‌ ಇಂಜನೀಯರ್, 9 ವರ್ಷ ಕೆಲ್ಸಾ ಮಾಡಿದೀನಿ. ವಿಧಾನಸೌಧ, ರಾಜಭವನ ಸೇರಿ ಇಡೀ ಬೆಂಗಳೂರಿಗೆ ಪವರ್ ಎಲ್ಲಿಂದ ಬರುತ್ತೆ ಅಂತಾ ಗೊತ್ತು. ಎಲ್ಲಿ ಏನು ಬ್ಲ್ಯಾಸ್ಟ್ ಮಾಡ್ತೀನಿ ನನಗೆ ಗೊತ್ತು. ನನಗೆ ನ್ಯಾಯ ಕೊಡ್ಲಿಲ್ಲಾ ಅಂದ್ರೆ ನಾನು ಅದೇ ಕೆಲ್ಸ ಮಾಡೋದು. ನನ್ನನ್ನು ಕ್ರೈಂ ಮಾಡೋಕೆ ಪ್ರೊವೋಕ್ ಮಾಡಿದೀರಾ.

   ನನ್ನನ್ನು ಗಲ್ಲಿಗೆ ಏರಸ್ತೀರಾ? ಏರ್ಸಿ ಇದೆಲ್ಲಾ ಆಗೋಕೆ 10-15 ವರ್ಷ ಜೈಲಲ್ಲಿ ಇಡ್ತೀರಾ. ಅದೂ ದೊಡ್ಡದಾಗಿ ಮಾಡಿದ್ರೆ VIP ಸೆಲ್ ನಲ್ಲಿ ಇಡ್ತೀರಾ. ನನಗೆ ನಮ್ಮ ಡಿ ಬಾಸ್ ಪಕ್ಕದ ಸೆಲ್ಲೇ ಕೊಡಿ. ಸ್ವಲ್ಪ ದಿವಸ ಆರಾಮಾಗಿ ನೋಡ್ಕೊಂಡು ಇರ್ತೀನಿ. ನನ್ನ ತಾಯಿ ಎದುರಿಗೇ ನನ್ನನ್ನು ನಾಯಿಗೆ ಹೊಡ್ದಂಗೆ ಹೊಡ್ದಿದಾರೆ. ನಾನು ಹೇಳಿದ್ದೇ ಮಾಡೋದು, ಮಾಡಿದ್ದೇ ಹೇಳೋದು ಎಂದು ವಿಡಿಯೋ ಮಾಡಿ ಯುವಕ ಹುಚ್ಚಾಟ ಮೆರೆದಿದ್ದಾನೆ.

   ಮಗನ ಈ ಕೃತ್ಯದ ಕುರಿತು ತಾಯಿ ರತ್ನಮ್ಮ ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ಪೊಲೀಸರು ಆತನಿಗೆ ಹೊಡೆದಿದ್ದಕ್ಕೆ ಮತ್ತು ಕ್ರಮ ಕೈಗೊಳ್ಳದಿದ್ದಕ್ಕೆ ಅವನಿಗೆ ಸಿಟ್ಟು. ಆ ಘಟನೆಯ ರೊಚ್ಚು ಇನ್ನೂ ಇಟ್ಟುಕೊಂಡಿದ್ದಾನೆ. ಅವರಿಗೆ ಶಿಕ್ಷೆ ಕೊಡಿ ಎಂದು ಕೇಳುತ್ತಿದ್ದಾನೆ ಇವರು ಕ್ರಮವಹಿಸಿಲ್ಲ.

   ಬೆಳಿಗ್ಗೆ ಬೆಂಗಳೂರಿಗೆ ಹೋಗ್ತಿನಿ ಅಂತ ಹೇಳಿ ಹೋಗಿದ್ದ. ಹೋಗುವ ಮುನ್ನ ಒಂದು ಲೆಟರ್ ಬರೆದಿಟ್ಟು ಹೋಗಿದ್ದಾನೆ. ನಮಗೆ ಅನ್ಯಾಯವಾಗುತ್ತಿದೆ ನ್ಯಾಯ ಬೇಕು‌ ಎಂದು ಬರೆದಿದ್ದಾನೆ. ಪೊಲೀಸ್ ಠಾಣೆಗೆ ಹೋಗುವ ಬದಲು ಅಲ್ಲಿಗೆ ಯಾಕೆ ಹೋದ ಗೊತ್ತಿಲ್ಲ. ಬೆಂಗಳೂರು ಪೊಲೀಸರು ಫೋನ್ ಮಾಡಿ 2 ದಿನ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದ್ರು. ಅವನಿಗೆ ಒಡೆಯುತ್ತಾರೋ ಏನೋ ಎಂಬ ಭಯವಿದೆ ಎಂದು ರತ್ನಮ್ಮ ಪ್ರತಿಕ್ರಿಯಿಸಿದ್ದಾರೆ.

Recent Articles

spot_img

Related Stories

Share via
Copy link