casting couch : ಹಲವು ವರ್ಷಗಳ ನಂತರ ಸೌಂಡ್‌ ಮಾಡ್ತಿದೆ ರಮ್ಯಾ ಕೃಷ್ಣನ್ ಅವರ ಹೇಳಿಕೆ

ಆಂಧ್ರಪ್ರದೇಶ : 

    ತೆಲುಗು , ಕನ್ನಡ, ತಮಿಳು ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಹಿರಿಯರಿಂದ ಕಿರಿಯರವರೆಗೂ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಖ್ಯಾತ ತೆಲುಗು ನಾಯಕಿ ರಮ್ಯಾ ಕೃಷ್ಣನ್  ಅವರ ಹಲವು ವರ್ಷಗಳ ಹೇಳಿಗೆ ಈಗಲೂ ಸಹ ಸೌಂಡ್‌ ಮಾಡುತ್ತಿದೆ.

    ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ನಾಯಕನ ತಾಯಿಯಾಗಿ ವಿಶೇಷವಾದ ಅಭಿನಯದ ಮೂಲಕ ರಮ್ಯಾ ಕೃಷ್ಣನ್ ಇನ್ನಷ್ಟು ಪೇಮಸ್‌ ಆಗಿದ್ದಾರೆ. ಕಟ್ಟಪ್ಪ ಎನ್ನುವ ಶಬ್ದ ಕೇಳಿದಾಕ್ಷಣ ರಮ್ಯಾ ಕೃಷ್ಣ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ. ಅಷ್ಟರ ಮಟ್ಟಿಗಿನ ಅಭಿನಯವನ್ನು ಅದರಲ್ಲಿ ಕಾಣಬಹುದಾಗಿದೆ. ಈ ನಡುವೆ ಅವರ ನಟನೆಯ ಬಗ್ಗೆ ಹಾಗೂ ಚಿತ್ರರಂಗದ ಬಗ್ಗೆ ಶಾಕಿಂಗ್‌ ಸ್ಟೇಟ್‌ ಮೆಂಟ್‌ ಸಹ ನೀಡಿದ್ದು, ಈ ಹೇಳಿಕೆ ಇಂದಿಗೂ ಭರ್ಜರಿಯಾಗಿ ಪ್ರತಿಕ್ರಿಯೆಗೆ ಒಳಲಾಗುತ್ತಲೇ ಇದೆ. 

   ಹಲವು ವರ್ಷಗಳ ಹಿಂದೆ ನಟಿ ರಮ್ಯಾ ಕೃಷ್ಣ ಅವರು ಜನಪ್ರಿಯ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಭಾಗವಹಿಸಿದ್ದರು. ಅಲ್ಲಿ ಚಲನಚಿತ್ರೋದ್ಯಮದಲ್ಲಿನ ಕಾಸ್ಟಿಂಗ್ ಕೌಚ್ವಿ ಷಯದ ಕುರಿತು ತಮ್ಮ ಅನುಭವಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಇನ್ನು ಈ ಕಾಸ್ಟಿಂಗ್ ಕೌಚ್ ಸಮಸ್ಯೆಯು ಚಿತ್ರರಂಗದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಎಲ್ಲರೂ ಹೆಚ್ಚಾಗಿ ಚಲನಚಿತ್ರ ಸೆಲೆಬ್ರಿಟಿಗಳ ಕಾಸ್ಟಿಂಗ್ ಕೌಚ್ ವಿಷಯಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ.

   ಪ್ರಸ್ತುತ ಪೀಳಿಗೆಯಲ್ಲಿ, ಮಹಿಳೆಯರು ಬೇರೆಡೆ ಕೆಲಸ ಮಾಡಲು ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು ಮತ್ತು ಚಿತ್ರರಂಗದಲ್ಲಿ ಕೆಲವು ಚಲನಚಿತ್ರ ನಿರ್ಮಾಪಕರು ನಾಯಕಿಯರಿಗೆ ಕಿರುಕುಳ ನೀಡುವುದು ಹೊಸದೇನೂ ಇಲ್ಲ ಎಂದು ಹೇಳಿಕೆ ನೀಡಿದ್ದರು. ನಟರು, ನಿರ್ದೇಶಕ, ನಿರ್ಮಾಪಕರಿಗೆ ಬೆಡ್‌ರೂಮ್ ಕಮಿಟ್‌ಮೆಂಟ್‌ಗಳನ್ನು ನೀಡಿದರೆ ಮಾತ್ರ ಉತ್ತಮ ಅವಕಾಶ ಸಿಗಲು ಸಾಧ್ಯ ಎಂದಿದ್ದಾರೆ.

    ಆದರೆ, ಚಿತ್ರರಂಗದಲ್ಲಿ ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ, ಸಹ ನಾನು ತುಂಬಾ ಚಾಕಚಕ್ಯತೆಯಿಂದ ತಪ್ಪಿಸಿಕೊಂಡಿದ್ದೇನೆ. ಅವಕಾಶಗಳಿಗಾಗಿ ನಾನು ಎಂದಿಗೂ ಅಡ್ಡದಾರಿ ಹಿಡಿಯಲು ಪ್ರಯತ್ನಿಸಲಿಲ್ಲ ಎಂದು ತಿಳಿಸಿದ್ದಾರೆ. 

   ಏಳು ಯಶಸ್ವಿ ಸೀಸನ್‌ಗಳಲ್ಲಿ ಬಿಗ್ ಬಾಸ್ ತಮಿಳಿನ ಮುಖವಾಗಿದ್ದ ಲೆಜೆಂಡರಿ ಸ್ಟಾರ್ ಕಮಲ್ ಹಾಸನ್ ಅವರು ಮುಂಬರುವ ಸೀಸನ್‌ಗೆ ಹೋಸ್ಟ್ ಆಗಿ ಹಿಂತಿರುಗುವುದಿಲ್ಲಈ ಸುದ್ದಿಯು ಅಭಿಮಾನಿಗಳಲ್ಲಿ ದೊಡ್ಡ ಆತಂಕ ಉಂಟು ಮಾಡಿದೆ. ಬಿಟ್ಟುಹೋದ ಇವರ ಸ್ಥಾನವನ್ನು ಪ್ರಕಾಶ್ ರಾಜ್, ಸಿಲಂಬರಸನ್ ಟಿಆರ್, ರಮ್ಯಾ ಕೃಷ್ಣನ್ ಅಥವಾ ಅರವಿಂದ್ ಸ್ವಾಮಿಯರಲ್ಲಿ ಓರ್ವರು ತುಂಬಲಿದ್ದಾರೆ ಎನ್ನಲಾಗಿದೆ.

    ಈ ನಟ-ನಟಿಯರಲ್ಲಿ ಪ್ರತಿಯೊಬ್ಬರು ತಮ್ಮದೇ ಆದ ಕೌಶಲ್ಯ ಮತ್ತು ಜನಪ್ರಿಯತೆಯನ್ನು ಹೊಂದಿದ್ದಾರೆ. ರಮ್ಯಾ ಕೃಷ್ಣನ್ ಈ ಹಿಂದೆ 2021 ರಲ್ಲಿ ಬಿಗ್ ಬಾಸ್ ತಮಿಳು 5ಗೆ ಅತಿಥಿ ಹೋಸ್ಟ್ ಆಗಿ ಹೆಜ್ಜೆ ಹಾಕಿದ್ದಾರೆ, ದೂರದರ್ಶನದ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ತನ್ನ ಶಕ್ತಿಯುತ ಅಭಿನಯ ಮತ್ತು ಕಮಾಂಡಿಂಗ್ ಉಪಸ್ಥಿತಿಗೆ ಹೆಸರುವಾಸಿಯಾದ ರಮ್ಯಾ ಕೃಷ್ಣನ್ ಕಾರ್ಯಕ್ರಮಕ್ಕೆ ವಿಶಿಷ್ಟವಾದ ಫ್ಲೇರ್ ಅನ್ನು ತರಬಹುದು ಅನ್ನೋ ಮಾತುಗಳು ಸಹ ಕೇಳಿಬಂದಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link