ತುಮಕೂರು:
ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಕಿಲೋ ಮೀಟರ್ ಉದ್ದದ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದ ಘಟನೆ ತುಮಕೂರು ನಗರದಲ್ಲಿ ನಡೆಯಿತು.ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ ಆಂಬುಲೆನ್ಸ್ ಪರದಾಟ ನಡೆಸಿತು. ಇಂತಹದ್ದೊಂದು ಘಟನೆ ನಡೆದಿದ್ದು ಸೋಮವಾರ ಬೆಳಿಗ್ಗೆ 9 ಗಂಟೆಗೆ ತುಮಕೂರು ನಗರದ ಹನುಮಂತ ಪುರದ ಬಳಿ.
ಹನುಮಂತಪುರದ ಬ್ರಿಡ್ಜ್ ಬಳಿ ನಾಲ್ಕು ಕಡೆಯಿಂದ ವಾಹನ ಬಂದು ಸೇರುತ್ತವೆ. ಅಲ್ಲದೇ ಶಿರಾಗೇಟ್ ರಸ್ತೆ ಬಂದ್ ಆಗಿರುವ ಕಾರಣ ಎಲ್ಲಾ ವಾಹನಗಳು ಹನುಮಂತಪುರದ ಬ್ರಿಡ್ಜ್ ಕೆಳಗೆ ಹೋಗಬೇಕು. ಹಾಗಾಗಿ ನಿತ್ಯ ಇಲ್ಲಿ ಟ್ರಾಫಿಕ್ ಉಂಟಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಸಮಯದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುತ್ತೆ. ಅದೇ ರೀತಿಯ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡು ಪರದಾಡಿತು.
ಜಾಗ ಬಿಡದ ಮಂದಿ, ಆಕ್ರೋಶ:- ಒಂದೆಡೆ ಟ್ರಾಫಿಕ್ ನಲ್ಲಿ ಸಿಲುಕಿದ್ದ ಆಂಬುಲೆನ್ಸ್ ಸೈರಲ್ ಕಿವಿಗೆ ಬಡಿಯುತ್ತಿದ್ದರೂ ಜಪ್ಪಯ್ಯ ಅನ್ನದ ಜನ ನಾ, ಮೊದಲು, ತಾ ಮೊದಲು ಎಂಬ ಜಿದ್ದಿಗೆ ಬಿದ್ದವರಂತೆ ಹೋಗಲು ಮುಂದಾಗುತ್ತಿದ್ದರು. ಅನಾಗರಿಕರಂತೆ ವರ್ತಿಸುತ್ತಿದ್ದ ಜನರ ಸ್ಥಿತಿ ಕಂಡ ಕೆಲವರು ಆಂಬುಲೆನ್ಸ್ ಹೋಗುವರೆಗೂ ತಡಿರಿ ಅಂದ್ರೆ ಕೇಳುವ ವ್ಯವದಾನವೇ ಇರಲಿಲ್ಲ. ಹಂಗೋ, ಹಿಂಗೋ ಹರಸಾಹಸ ಪಟ್ಟು ಕೆಲ ನಾಗಕರಿಕರೇ ಆಂಬುಲೆನ್ಸ್ ಗೆ ಜಾಗ ಬಿಡಿಸುವ ಕೆಲಸ ಮಾಡಿದರು.
ಆಕ್ರೋಶ ವ್ಯಕ್ತ:
ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶಿರಾಗೇಟ್ ಬಂದ್ ಆದಮೇಲೆ ಪರ್ಯಾಯ ವ್ಯವಸ್ಥೆ ಮಾಡಿದ ಮೇಲೆ ಆ ಪರ್ಯಾಯ ಮಾರ್ಗದಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮಾತ್ರ ಇಲಾಖೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಲುಕಿದ್ದಾಗಲೂ ಸಹ ಯಾವುದೇ ಸಿಬ್ಬಂದಿ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಜನಾಕ್ರೋಶ ವ್ಯಕ್ತವಾಯಿತು