ಟಿ ಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಶೂಟ್ : ಸಾರ್ವಜನಿಕರ ಆಕ್ರೋಶ

ಕೊಪ್ಪಳ

   ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ  ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್  ಫೋಟೋ ವೈರಲ್ ಆಗಿದೆ. KA-01 MY 2174 ಬೆಂಗಳೂರು ಪಾಸಿಂಗ್​ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ ಕಾರು ತೆಗೆದುಕೊಂಡು ಹೋಗಿ, ಅಲ್ಲಿ ಕಾರಿನ ಮುಂದೆ ಮತ್ತು ಮೇಲೆ ಜೋಡಿಗಳು  ಫೋಟೋ ತೆಗೆಸಿಕೊಂಡಿದ್ದಾರೆ.

 
   ನಿರಂತರವಾಗಿ ಒಂದು ವಾರ ಕಾಲ ಶ್ರಮವಹಿಸಿದ್ದ ಸಿಬ್ಬಂದಿ, ಸ್ಟಾಪ್ ಲಾಗ್ ಗೇಟ್​ನ ಐದು ಎಲಿಮೆಂಟ್​ಗಳನ್ನು ಅಳವಡಿಸಿ, ಹರಿಯುವ ನೀರನ್ನು ತಡೆಯುವಲ್ಲಿ ಸಫಲರಾಗಿದ್ದರು. ಆಗಸ್ಟ್ 17 ರಂದು ಐದು ಎಲಿಮೆಂಟ್​ಗಳ ಪ್ರಕ್ರಿಯೆಯನ್ನು ಮುಗಿಸಿದ್ದರು.ಎಲಿಮೆಂಟ್ ಅಳವಡಿಕೆ ಪೂರ್ಣಗೊಂಡರು ಕೂಡಾ ಗೇಟ್​ನಿಂದ ಅಲ್ಪಪ್ರಮಾಣದ ನೀರು ಹೊರ ಹೋಗುತ್ತಿತ್ತು. ಹೀಗಾಗಿ ಮತ್ತೆ ಕೆಲಸ ಆರಂಭಿಸಿದ ಸಿಬ್ಬಂದಿ, ಹನಿ ನೀರು ಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Recent Articles

spot_img

Related Stories

Share via
Copy link