ಆತ್ಮಹತ್ಯೆ ಮಾಡಿಕೊಂಡ ಹಾವು…..: ಕಾರಣ ಗೊತ್ತಾ….?

ನವದೆಹಲಿ :

   ಹಾವು ಕಡಿತದಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ನೋಡಿದ್ದೇವೆ ಆದರೆ ಹಾವು ಎಂದಾದರೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೀರಾ. ಹಾವೊಂದು ತನ್ನನ್ನು ತಾನು ಸುತ್ತಿಕೊಂಡು ಸಾವನ್ನಪ್ಪಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

  ವ್ಯಕ್ತಿಯೊಬ್ಬರು ಆ ದೃಶ್ಯವನ್ನು ನೋಡಿದಾಗ ಆಘಾತಕ್ಕೊಳಗಾಗಿದ್ದರು, ಈ ವಿಚಾರವನ್ನು ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿರುವುದು ಎರಡು ಹಾವಲ್ಲ ಬದಲಾಗಿ ಅಲ್ಲಿರುವ ಹಾವು ತನ್ನನ್ನು ತಾನೇ ಸುತ್ತಿಕೊಂಡು, 10 ನಿಮಿಷಗಳ ಬಳಿಕ ಉಸಿರು ಚೆಲ್ಲಿದೆ.

   ಕೆಲವರು ವಿಷಕಾರಿ ಪರಿಸರದ ಕಾರಣದಿಂದ ಅದು ಸಾವನ್ನಪ್ಪಿರಬೇಕು ಎಂದು ಹೇಳಿದ್ದಾರೆ, ಆ ವ್ಯಕ್ತಿ ಸಹಾಯ ಮಾಡದೆ ಹಾವಿನ ಹತಾಶೆ ಅವಸ್ಥೆಯನ್ನು ಏಕೆ ನೋಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಐಎಫ್​ಎಲ್ ವಿಜ್ಞಾನದ ಪ್ರಕಾರ, ಒತ್ತಡ, ದೃಷ್ಟಿಹೀನತೆ, ಅಧಿಕ ಉಷ್ಣಾಂಶವು ಹಾವುಗಳನ್ನು ಗೊಂದಲಕ್ಕೀಡು ಮಾಡುತ್ತದೆ. 

   ಗೂಗಲ್ ಪ್ರಕಾರ, ಸರ್ಪೆಂಟೈನ್ ಆಟೋಸ್ಫಿಕ್ಸಿಯೇಷನ್ ​​ಸಿಂಡ್ರೋಮ್ ಎನ್ನುವ ಮಾರಣಾಂತಿಕ ಕಾಯಿಲೆ ಬಂದರೆ ಹಾವುಗಳಿಗೆ ಉಸಿರುಗಟ್ಟುವಿಕೆ ಉಂಟಾಗಿ ಸಾವನ್ನಪ್ಪುತ್ತವೆ, ಈ ಅಸಹಜ ನಡವಳಿಕೆಯು ಹಾವಿನ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಜೀನ್ ರೂಪಾಂತರದಿಂದ ಉಂಟಾಗುತ್ತದೆ ಎಂದು ಹೇಳಲಾಗಿದೆ.

Recent Articles

spot_img

Related Stories

Share via
Copy link