ಬೆಂಗಳೂರಿನಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್

ಬೆಂಗಳೂರು

    ಸಿಲಿಕಾನ್ ಸಿಟಿ ಬೆಂಗಳೂರು   ಜನರೇ ಎಚ್ಚರ ಎಚ್ಚರ. ನೀವು ಕೊಂಚ ಯಾಮಾರಿದ್ರೂ ಮತ್ತೆ ಹೋಮ್ ಕ್ವಾರಂಟೈನ್   ಆತಂಕ ಶುರುವಾಗಲಿದೆ. ಕೋವಿಡ್ ಟೈಮ್​ನಲ್ಲಿ ಕ್ವಾರಂಟೈನ್ ಜನರ ಜೀವ ಹಿಂಡಿತ್ತು. ಇದೀಗ ರಾಜ್ಯದಲ್ಲಿ ನಿಫಾ  ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಮತ್ತೆ ಹೋಮ್ ಕ್ವಾರಂಟೈನ್​ ಶುರುವಾಗಲಿದೆ. ತಮ್ಮನ್ನು ತಾವೇ ದಿಗ್ಬಂಧನಕ್ಕೆ ಒಳಗಾಗಬೇಕಾಗುವ ಸಮಯಬರಬಹುದು.

   ಬೆಂಗಳೂರಿನಲ್ಲಿ ನಿಫಾ ಹಾಗೂ ಮಂಕಿಪಾಕ್ಸ್ ಆತಂಕ ಮತ್ತೆ ಶುರುವಾಗಿದೆ. ಕೊರೊನಾ ಬಳಿಕ ಮತ್ತೆ ನಿಫಾದಿಂದ ರಾಜಧಾನಿಯಲ್ಲಿ ಹೋಮ್ ಕ್ವಾರಂಟೈನ್ ಶುರುವಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ಯಾವ ನಿಫಾ ಕೇಸ್ ಕೂಡ ದಾಖಲಾಗಿಲ್ಲ. ಕೇರಳಕ್ಕೆ ಹೋಗಿದ್ದ ಸ್ನೇಹಿತರು ಹಾಗೂ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಬಳಿಕ ಲಕ್ಷಣ ಕಂಡು ಬರದಿದ್ದರೆ ಆತಂಕ ಕಡಿಮೆ ಆಗಲಿದೆ. ಕ್ವಾರಂಟೈನ್ ನಿಂದ ಸ್ನೇಹಿತರು ಹಾಗೂ ಕಾಲೇಜು ಸಿಬ್ಬಂದಿ ಪರದಾಡುತ್ತಿದ್ದಾರೆ.

Recent Articles

spot_img

Related Stories

Share via
Copy link