ಅಲಹಾಬಾದ್
ಇತ್ತೀಚಿಗಿನ ದಿನದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಗಂಡ-ಹೆಂಡತಿ ಡಿವೋರ್ಸ್ಗೆ ಮುಂದಾಗುತ್ತಿದ್ದಾರೆ. ವಿಚ್ಛೇದನ ಪಡೆದೇ ತೀರುತ್ತೇವೆ ಎಂದು ದೊಡ್ಡ ದೊಡ್ಡ ಕೋರ್ಟ್ಗಳ ಮೊರೆ ಹೋಗುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ರಾಜ್ಯದ ಪ್ರಕರಣವೊಂದರಲ್ಲಿ ಡಿವೋರ್ಸ್ ಕೋರಿದ್ದ ದಂಪತಿಗೆ ಸ್ವಾಮೀಜಿ ಬಳಿ ಹೋಗಿ ಸಮಾಲೋಚಿಸಿ ಎಂದು ನ್ಯಾಯಾಧೀಶರು ಸಲಹೆ ನೀಡುವ ವಿಡಿಯೋ ವೈರಲ್ ಆಗಿತ್ತು.
ಅಂತಹದ್ದೇ ಘಟನೆ ಗುಜರಾತ್ನಲ್ಲಿ ನಡೆದಿದೆ. 75 ವರ್ಷ ಮೇಲ್ಪಟ್ಟ ವಯಸ್ಸಿನ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಿರಿಯ ದಂಪತಿಯ ವೈಮನಸ್ಸು ನೋಡಿ ‘ಕಲಿಯುಗ’ (ಹಿಂದೂ ಧರ್ಮದಲ್ಲಿ ಕತ್ತಲೆಯ ಯುಗ) ಬಂದೇ ಬಿಟ್ಟಿದೆ ಎಂದು ಜಡ್ಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಜೀವನಾಂಶಕ್ಕಾಗಿ 75 ರಿಂದ 80 ವರ್ಷ ವಯಸ್ಸಿನ ದಂಪತಿಗಳು ಪರಸ್ಪರರ ವಿರುದ್ಧ ಕಾನೂನು ಹೋರಾಟವನ್ನು ನಡೆಸುತ್ತಿರುವ ಅಪರೂಪದ ಘಟನೆಗೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಸಾಕ್ಷಿ ಆಯ್ತು. ಅಚ್ಚರಿ-ಆತಂಕಗೊಂಡ ನ್ಯಾಯಾಧೀಶರು ‘ಕಲಿಯುಗ’ ಬಂದಂತೆ ತೋರುತ್ತಿದೆ ಎಂದು ಹೇಳಿರುವುದು ಸಾಕಷ್ಟು ಸುದ್ದಿಯಲ್ಲಿದೆ.
ಪತ್ನಿ ಪರವಾಗಿ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಪತಿ ಅಲಿಘರ್ನ ಮುನೇಶ್ ಕುಮಾರ್ ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ, ನಿಮ್ಮ ಕಾನೂನು ಹೋರಾಟದ ಕಳವಳಕಾರಿ ವಿಷಯವಾಗಿದೆ ಎಂದು ದಂಪತಿಗೆ ಸಲಹೆ ನೀಡಲು ಪ್ರಯತ್ನಿಸಿದರು.
ಪತಿಯಿಂದ ಪತ್ನಿ ಜೀವನಾಂಶವನ್ನು ಕೋರಿದ್ದರು, ಕೌಟುಂಬಿಕ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತ್ತು. ಪತಿ ಆದೇಶವನ್ನು ಪ್ರಶ್ನಿಸಿ, ಪತ್ನಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯ ದಿನಾಂಕದೊಳಗೆ ಅವರು ಒಪ್ಪಂದಕ್ಕೆ ಬರುತ್ತಾರೆ ಎಂದು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.
