ಖರ್ಗೆ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ದೂರು: ಕೊಟ್ಟಿದ್ದಾದರೂ ಯಾರು….?

ಬೆಂಗಳೂರು

    ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಮೇಲೆ ಸಂಕಷ್ಟ ಎದುರಾಗುತ್ತಿವೆ. ಸದ್ಯ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇದೆಲ್ಲಾ ಒಂದು ಕಡೆಯಾದರೆ ಇದೀಗ ಮುಡಾ ರೀತಿಯಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್​.ಆರ್​.ರಮೇಶ್ ದೂರು ನೀಡಿದ್ದಾರೆ.​ 

    ಒಟ್ಟು 7 ಜನರ ವಿರುದ್ಧ 394 ಪುಟಗಳ ದಾಖಲೆ ಸಮೇತ ಎನ್.ಆರ್.ರಮೇಶ್ ದೂರು ನೀಡಿದ್ದಾರೆ. ಇದರಲ್ಲಿ ಎಂ.ಬಿ.ಪಾಟೀಲ್ ಮತ್ತು ಐಎಎಸ್​ ಅಧಿಕಾರಿಗಳು ಭಾಗಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್​ಗೆ ಐದು ಎಕರೆ ಸಿಎ ಸೈಟ್​ ರೂಪದಲ್ಲಿ ನೀಡಿರುವುದಾಗಿ ವಿಪಕ್ಷ ಬಿಜೆಪಿ ಆರೋಪಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್​ಗೆ 5 ಎಕರೆ ಜಾಗ ಮಂಜೂರು ಮಾಡಲಾಗಿದೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿಯಲ್ಲಿರುವ ಏರೋಸ್ಪೇಸ್ ಪಾರ್ಕ್ ಸಮೀಪದಲ್ಲಿ ಐದು ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಸಿಎ ಸೈಟ್ ಹೆಸರಿನಲ್ಲಿ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಇದು ರಾಜಕೀಯ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪಕ್ಕೂ ಕಾರಣವಾಗಿತ್ತು.

ಸದ್ಯ ಮಲ್ಲಿಕಾರ್ಜುನ ಖರ್ಗೆ, ಪುತ್ರರಾದ ಪ್ರಿಯಾಂಕ್​ ಖರ್ಗೆ, ರಾಹುಲ್ ಖರ್ಗೆ, ಅಳಿಯ ರಾಧಾಕೃಷ್ಣ ಮತ್ತು ಕುಟುಂಬದ ಹೆಸರಲ್ಲಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್​​ಗೆ ಶೈಕ್ಷಣಿಕ ಉದ್ದೇಶಕ್ಕೆಂದು ಅಕ್ರಮವಾಗಿ ಎರಡೆರಡು ಬಾರಿ ಸರ್ಕಾರಿ ಭೂಮಿ ಪರಭಾರೆ ಮಾಡಿಸಿಕೊಂಡ ಆರೋಪ ಕೇಳಿಬಂದಿದೆ. 

2014ರಲ್ಲಿ ಬಿಟಿಎಂ 4ನೇ ಸ್ಟೇಜ್​​ನ ಎರಡನೇ ಬ್ಲಾಕ್​​ನಲ್ಲಿ 2 ಎಕರೆ ಬಿಡಿಎ ವ್ಯಾಪ್ತಿಯ ಸಿಎ ನಿವೇಶನ, 2024ರಲ್ಲಿ ಬಾಗಲೂರು ಬಳಿ 5 ಎಕರೆಯಷ್ಟು ಕೆಐಎಡಿಬಿ ಭೂಮಿಯನ್ನು ಮತ್ತೆ ಇವರ ಒಡೆತನ ಟ್ರಸ್ಟ್​ಗೆ ಪರಭಾರೆ ಮಾಡಿಕೊಳ್ಳಲಾಗಿದೆ. ಈ ಎರಡೂ ನಿವೇಶನಗಳನ್ನು ಒಂದೇ ಸಂಸ್ಥೆಗೆ ಒಂದೇ ಉದ್ದೇಶಕ್ಕೆ ಈ ಟ್ರಸ್ಟ್ ಪಡೆದುಕೊಂಡಿದೆ. ಈ ಎರಡೂ ನಿವೇಶಗಳ ಪ್ರಸ್ತುತ ಒಟ್ಟು ಮೌಲ್ಯ ಬರೋಬ್ಬರಿ 240 ಕೋಟಿ ರೂ. ಅಧಿಕ ಮೊತ್ತ ಎನ್ನಲಾಗಿದೆ.

Recent Articles

spot_img

Related Stories

Share via
Copy link