ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ :ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟ

ಬೆಳಗಾವಿ

   ಮೂರು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟವಾಗಿದೆ. ಬೆಳಗಾವಿಯ ಪೋಕ್ಸೋ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅಪ್ರಾಪ್ತ ಬಾಲಕಿಯ ಮೇಲೆ ಎರಗಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ. 2017ರಲ್ಲಿ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ(32) ಎಂಬ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಸದ್ಯ ಆರೋಪಿಗೆ ಗಲ್ಲುಶಿಕ್ಷೆ ನೀಡಲಾಗಿದೆ.

   ಮನೆಯ ಮುಂದೆ ಆಟವಾಡ್ತಿದ್ದ ಅಪ್ರಾಪ್ತ ಬಾಲಕಿಯನ್ನು ಚಾಕೊಲೇಟ್ ಕೊಡಿಸಿ ಆರೋಪಿ ಉದ್ದಪ್ಪ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಮಗುವಿನ ಕಣ್ಣು ಮೂಗು ಮಣ್ಣಲ್ಲಿ ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣ ಸಂಬಂಧ ಕೂಲಂಕುಷವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು 45 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಘಟನೆ ಸಂಬಂಧ ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಕೇಸ್​ನಲ್ಲಿ, ಬಂಧಿತರಾಗಿದ್ದ 55 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಮಂಡ್ಯ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್​ ಜಾಮೀನು ನೀಡಿದ್ದು, ನಾಳೆ ನಾಡಿದ್ದು ರಜೆ ಇರೋದ್ರಿಂದ, ಸೋಮವಾರ ಆರೋಪಿಗಳು ಬಿಡುಗಡೆಗೊಳ್ಳಲಿದ್ದಾರೆ.

    ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ BMTC ಬಸ್​ ಡಿಕ್ಕಿಯಾಗಿದ್ದು, ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಗಳೂರಿನ ಗುಡ್ದದಹಳ್ಳಿ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ, ಮನೋಹರ್ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಇಳಿಜಾರಿನಲ್ಲಿ ಬ್ರೇಕ್​​ ಹಿಡಿಯದೇ ಬೈಕ್​ಗೆ ಬಸ್​ ಡಿಕ್ಕಿಯಾಗಿತ್ತು. ಬಸ್​ ಡಿಕ್ಕಿಯಾಗುತ್ತಿದ್ದಂತೆ ಸವಾರ ಬೈಕ್​ನಿಂದ ಜಿಗಿದಿದ್ದ. ಬಸ್ ಚಾಲಕನ ಅಜಾಗರೂಕತೆ ಯಿಂದ ಘಟನೆ ಎಂದು ಆರೋಪಿಸಲಾಗಿದ್ದು, ಬ್ಯಾಟರಾಯನಪುರ ಸಂಚಾರಿ ಪೊಲೀಸರಿ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ರು.

Recent Articles

spot_img

Related Stories

Share via
Copy link